ಕೇವಲ 9 ದಿನಗಳಲ್ಲೇ ಕದನ ವಿರಾಮ ಒಪ್ಪಂದಕ್ಕೆ ತಿಲಾಂಜಲಿ !

ಟೆಹರಾನ್ (ಇರಾನ್) – ಹಾರ್ಮುಜ್ ಜಲಸಂಧಿಯ ಮೂಲಕ ಪ್ರಯಾಣಿಸುತ್ತಿದ್ದ ವ್ಯಾಪಾರಿ ಹಡಗಿನ ಮೇಲೆ ಇರಾನ್ ಡ್ರೋನ್ ದಾಳಿ ನಡೆಸಿದ ನಂತರ, ಅಮೆರಿಕಾದ ಸೇನಾ ಪಡೆಗಳು ಇರಾನ್‌ನ ಸೇನಾ ನೆಲೆಗಳು ಮತ್ತು ರೇಡಾರ್ ಕೇಂದ್ರಗಳ ಮೇಲೆ ವೈಮಾನಿಕ ದಾಳಿ ನಡೆಸಿವೆ. ಇದರಿಂದಾಗಿ ಇರಾನ್ ಮತ್ತು ಅಮೆರಿಕಾ ನಡುವೆ ಏರ್ಪಟ್ಟಿದ್ದ ಕದನ ವಿರಾಮ ಒಪ್ಪಂದವು ಕೇವಲ 9 ದಿನಗಳಲ್ಲೇ ಮುರಿದು ಬಿದ್ದಿರುವುದು ಸ್ಪಷ್ಟವಾಗಿದೆ.
ಹಿಂಸೆಗೆ ಹಿಂಸೆಯಿಂದಲೇ ಉತ್ತರಿಸಲಾಗುವುದು! – ಅಮೆರಿಕಾ
ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿ, ‘ಇರಾನ್ ನಡೆಸಿದ ಈ ದಾಳಿಯು ಕದನ ವಿರಾಮ ಒಪ್ಪಂದದ ನೇರ ಉಲ್ಲಂಘನೆಯಾಗಿದೆ. ಅವರು ಇದರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ’ ಎಂದು ಹೇಳಿದ್ದಾರೆ. ಇನ್ನೊಂದೆಡೆ, ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ಅವರು ಕಠಿಣ ಶಬ್ದಗಳಲ್ಲಿ ಎಚ್ಚರಿಸುತ್ತಾ, “ಏನಾದರೂ ಭಿನ್ನಾಭಿಪ್ರಾಯಗಳಿದ್ದರೆ ದೂರವಾಣಿ ಮೂಲಕ ಚರ್ಚಿಸಿ, ಹಿಂಸೆಗೆ ಹಿಂಸೆಯಿಂದಲೇ ಉತ್ತರಿಸಲಾಗುವುದು” ಎಂದು ಕಠೋರವಾಗಿ ಹೇಳಿದ್ದಾರೆ. (ಗಾಂಧಿವಾದಿ ಭಾರತವು ಅಮೆರಿಕಾದಿಂದ ಇದನ್ನು ಯಾವಾಗ ಕಲಿಯಲಿದೆ? – ಸಂಪಾದಕರು)
ಅಮೆರಿಕಾದ ದಾಳಿಯ ನಂತರ ಇರಾನ್‌ನ ರಾಷ್ಟ್ರೀಯ ಭದ್ರತಾ ಆಯೋಗವು, “ಮಾತುಕತೆಗಳು ನಡೆಯುತ್ತಿರುವಾಗಲೇ ಅಮೆರಿಕಾ ಮತ್ತೊಮ್ಮೆ ಇರಾನ್ ಮೇಲೆ ದಾಳಿ ಮಾಡಿದೆ. ಅಮೆರಿಕಾದ ಅಧ್ಯಕ್ಷರು ಕದನ ವಿರಾಮದ ತತ್ವಗಳನ್ನು ಪಾಲಿಸುತ್ತಿಲ್ಲ” ಎಂದು ಹೇಳಿದೆ.
ಹಾರ್ಮುಜ್‌ನಲ್ಲಿ ತೆರಿಗೆ ವಸೂಲಿ ವಿಷಯವಾಗಿ ಉದ್ವಿಗ್ನತೆ
ಅಮೆರಿಕಾ ಮತ್ತು ಇರಾನ್ ನಡುವೆ ಜೂನ್ 17 ರಂದು 14 ಅಂಶಗಳ ಕದನ ವಿರಾಮ ಒಪ್ಪಂದ ನಡೆದಿತ್ತು. ಈ ಒಪ್ಪಂದದ ಪ್ರಕಾರ, 60 ದಿನಗಳವರೆಗೆ ಹಾರ್ಮುಜ್ ಜಲಸಂಧಿಯ ಮೂಲಕ ಹಾದುಹೋಗುವ ವ್ಯಾಪಾರಿ ನೌಕೆಗಳಿಂದ ಯಾವುದೇ ತೆರಿಗೆಯನ್ನು ವಸೂಲಿ ಮಾಡುವುದಿಲ್ಲ ಎಂದು ಇರಾನ್ ಒಪ್ಪಿಕೊಂಡಿತ್ತು; ಆದರೆ ಇರಾನ್‌ನ ಅಧಿಕಾರಿಗಳು ಮತ್ತೆ ತೆರಿಗೆ ವಸೂಲಿ ಮಾಡುವ ಭಾಷೆಯನ್ನು ಆರಂಭಿಸಿದರು. ಇದೇ ವಿವಾದದಿಂದಾಗಿ ಉಭಯ ದೇಶಗಳ ನಡುವಿನ ಸಂಬಂಧ ಮತ್ತೆ ಹದಗೆಟ್ಟಿದೆ.
ಯುದ್ಧದಲ್ಲಿ ಅಮೆರಿಕಾವನ್ನು ಬೆಂಬಲಿಸುವ ‘ನಾಟೋ’ ಸದಸ್ಯ ದೇಶಗಳನ್ನು ಹೊಣೆಗಾರರನ್ನಾಗಿ ಮಾಡಬೇಕು ! – ಇರಾನ
ಪಾಕಿಸ್ತಾನವು 1971 ರಲ್ಲಿ ಭಾರತದಿಂದ ಅನುಭವಿಸಿದ ಸೋಲನ್ನು ನೆನಪಿಸಿಕೊಳ್ಳಲಿ !
ಕೆನಡಾದಲ್ಲಿ ವಿದೇಶಿ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಶೇ. ೬೦ ರಷ್ಟು ಕುಸಿತ!
‘ಭಾರತವು ಔಷಧಗಳ ಪೆಟ್ಟಿಗೆಯಲ್ಲಿ ಅಫ್ಘಾನಿಸ್ತಾನಕ್ಕೆ ಡ್ರೋನ್ಗಳನ್ನು ಕಳುಹಿಸಿದೆ!’(ಯಂತೆ)
ವೆನೆಜುವೆಲಾದಲ್ಲಿ ಸಂಭವಿಸಿದ ಭೂಕಂಪದಲ್ಲಿ ಇಲ್ಲಿಯವರೆಗೆ 235 ಮಂದಿ ಸಾವು!
ಯುಕ್ರೇನ್ ನಿಂದ ರಷ್ಯಾದ 12 ಪ್ರಾಂತ್ಯಗಳ ಮೇಲೆ ನೂರಾರು ಡ್ರೋನ್ ದಾಳಿ ! : Ukraine-Russia War