ಭಾಜಪದವರು ಬಡ ಮುಸಲ್ಮಾನ ಯುವಕರಿಗೆ ಹಣ ಕೊಟ್ಟು ಕಲ್ಲುತೂರಾಟ ಮಾಡಿಸುತ್ತಾರೆ ! – ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಆರೋಪ

ನೀಮಚ (ಮಧ್ಯಪ್ರದೇಶ) – ಭಾಜಪದವರು ಬಡ ಮುಸಲ್ಮಾನ ಯುವಕರಿಗೆ ಹಣ ಕೊಟ್ಟು ಅವರಿಂದ ಕಲ್ಲುತೂರಾಟ ನಡೆಸುತ್ತಾರೆ ಎಂಬ ದೂರು ನನ್ನ ಹತ್ತಿರ ಬಂದಿದೆ ಎಂದು ರಾಜ್ಯದ ಕಾಂಗ್ರೆಸ್ ನಾಯಕ ಮತ್ತು ಶಾಸಕ ದಿಗ್ವಿಜಯ್ ಸಿಂಗ್ ಹೇಳಿದರು.

ರಾಜ್ಯದ ಗೃಹ ಸಚಿವ ನರೋತ್ತಮ ಮಿಶ್ರಾ ಅವರು ದಿಗ್ವಿಜಯ್ ಸಿಂಗ್ ಹೇಳಿಕೆಯನ್ನು ಟೀಕಿಸಿದ್ದಾರೆ.

ಅವರು ಸಿಂಗ್ ಗೆ ತಿರುಗೇಟು ನೀಡುತ್ತ, ‘ದಿಗ್ವಿಜಯ್ ಸಿಂಗ್ ಮುಸಲ್ಮಾನರನ್ನು ಮರಾಟಕ್ಕಿರುವವರು ಎಂದು ಚಿತ್ರಿಸಿದ್ದಾರೆ. ಇದರಿಂದ ಸಿಂಗ್ ಇವರು, ಕಲ್ಲು ಯಾರು ಮತ್ತು ಎಲ್ಲಿಂದ ಎಸೆದರು ಎಂಬ ಒಂದು ವಿಷಯ ಅಂತೂ ಸ್ಪಷ್ಟಪಡಿಸಿದ್ದಾರೆ’ ಎಂದು ಹೇಳಿದ್ದಾರೆ.

ಸಂಪಾದಕೀಯ ನಿಲುವು

ಇದರ ಅರ್ಥ ಬಡ ಮುಸಲ್ಮಾನರು ಹಿಂದೂಗಳ ಧಾರ್ಮಿಕ ಮೆರವಣಿಗೆಗಳ ಮೇಲೆ ಕಲ್ಲುತೂರಾಟ ಮಾಡುತ್ತಾರೆ ಎಂಬುದು ಸ್ಪಷ್ಟವಾಯಿತು !