ನಲ್ಲೊರ್ (ಆಂಧ್ರಪ್ರದೇಶ)ನಲ್ಲಿ ಹನುಮ ಶೋಭಾಯಾತ್ರೆಯ ಮೇಲೆ ಮತಾಂಧರಿಂದ ಅನಧಿಕೃತ ಮಸೀದಿಯಿಂದ ಕಲ್ಲು ಮತ್ತು ಮದ್ಯದ ಬಾಟಲಿಗಳ ತೂರಾಟ !

ಶೋಭಾಯಾತ್ರೆಯಲ್ಲಿ ೧೫ ಸಾವಿರ ಹಿಂದೂಗಳ ಉಪಸ್ಥಿತಿ !

ನಲ್ಲೊರ್ (ಅಂದ್ರಪ್ರದೇಶ) – ಇಲ್ಲಿ ಏಪ್ರಿಲ್ ೨೪ ರಂದು ಶ್ರೀ ಹನುಮ ಶೋಭಾಯಾತ್ರೆ ನಡೆಸುವಾಗ ಅದರ ಮೇಲೆ ಅನಧಿಕೃತ ಮಸೀದಿಯಿಂದ ಕಲ್ಲುತೂರಾಟ ನಡೆಸಲಾಯಿತು. ಹಾಗೂ ಮೆರವಣಿಗೆಯಲ್ಲಿನ ಹನುಮಂತನ ಮೂರ್ತಿಯ ಮೇಲೆ ಮದ್ಯದ ಬಾಟಲಿಗಳನ್ನು ಎಸೆಯಲಾಯಿತು. ಈ ಪ್ರಕರಣದಲ್ಲಿ ಅನಧಿಕೃತ ಮಸೀದಿಯ ಕಟ್ಟಡದ ಮೇಲೆ ಕ್ರಮಕೈಗೊಂಡು ಅದನ್ನು ಕೆಡವಬೇಕು, ಎಂದು ಭಾಜಪದಿಂದ ಒತ್ತಾಯಿಸಲಾಯಿತು. ಭಾಜಪಾದ ರಾಷ್ಟ್ರೀಯ ಸಚಿವ ಮತ್ತು ಆಂಧ್ರಪ್ರದೇಶದ ರಾಜ್ಯದ ಸಹ-ಪ್ರಭಾರಿ (ಯಾವುದಾದರೂ ವಿಭಾಗದ ಜವಾಬ್ದಾರಿ ವಹಿಸಿಕೊಂಡಿರುವುದು) ಸುನಿಲ ದೇವಧರ ಇವರು ಒತ್ತಾಯಿಸಿದ್ದಾರೆ. ೧೫ ಸಾವಿರ ಹಿಂದೂಗಳ ಸಹಭಾಗಿತ್ವ ಇರುವ ಈ ಮೆರವಣಿಗೆ ಇಲ್ಲಿಯ ಕೋರ್ಟ ರೋಡ್ ಮಾರ್ಗದ ಮೂಲಕ ಹೋಗುವಾಗ ಈ ದಾಳಿ ನಡೆದಿದೆ. ಆ ಸಮಯದಲ್ಲಿ ಮತಾಂಧರಿಂದ ಇಸ್ಲಾಮೀ ಘೋಷಣೆ ನೀಡಲಾಗುತ್ತಿತ್ತು.

ಸಂಪಾದಕೀಯ ನಿಲುವು

೧೫ ಸಾವಿರ ಹಿಂದೂಗಳು ಇರುವಾಗ ಬೆರಳೆಣಿಕೆಯಷ್ಟು ಮತಾಂಧರು ಅವರ ಮೇಲೆ ಕಲ್ಲು ತೂರಾಟ ನಡೆಸಲು ಹೆದರುವುದಿಲ್ಲ ಮತ್ತು ಹಿಂದೂಗಳು ಹೊಡೆಸಿಕೊಳ್ಳುತ್ತಾರೆ, ಹಿಂದೂಗಳಿಗೆ ನಾಚಿಕೆಗೇಡು ! ಹಿಂದೂಗಳು ಸಂಘಟಿತರಾದರೂ ಮತಾಂಧರು ಅವರಿಗೆ ಹೆದರುವುದಿಲ್ಲ, ಇದೆ ಇದರಿಂದ ಸ್ಪಷ್ಟವಾಗುತ್ತದೆ. ‘ಹಿಂದೂಗಳು ಅಸಹಿಷ್ಣುಗಳಿದ್ದರಿಂದ ಹಾಗೂ ರಾಜ್ಯ ಸರಕಾರ ನಮ್ಮ ಪರವಾಗಿರುವುದರಿಂದ ಹಿಂದೂಗಳು ನಮ್ಮನ್ನು ಏನೂ ಮಾಡಲು ಸಾಧ್ಯವಿಲ್ಲ’, ಎಂಬ ವಿಶ್ವಾಸ ಮತಾಂಧರಲ್ಲಿ ಇರುವುದರಿಂದ ಅವರು ದಾಳಿ ನಡೆಸಲು ಹೆದರುವುದಿಲ್ಲ, ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ !

ಮಸೀದಿ ಅನಧಿಕೃತವಾಗಿದ್ದರೂ ಅದರ ಮೇಲೆ ಇಲ್ಲಿಯವರೆಗೂ ಹೇಗೆ ಕ್ರಮ ಕೈಗೊಳ್ಳಲಾಗಿಲ್ಲ ? ಈಗಲಾದರೂ ಅದರ ಮೇಲೆ ಕ್ರಮ ಕೈಗೊಳ್ಳುವ ಧೈರ್ಯ ರಾಜ್ಯದ ವೈ.ಎಸ್.ಆರ್. ಕಾಂಗ್ರೆಸ್ ಸರಕಾರ ತೋರುವುದೇ ಅಥವಾ ಮತಕ್ಕಾಗಿ ಬಾಲ ಮುದುಡಿಕೊಳ್ಳುವುದೇ ?

ಹಿಂದೂಗಳನ್ನು ಅಸಹಿಷ್ಣು ಎಂದು ಹೇಳಿ ಮುಸಲ್ಮಾನರಿಗೆ ಸಂತ್ರಸ್ತರು ಎಂದು ಹೇಳುವ ರಾಜಕೀಯ ಪಕ್ಷಗಳು ಈಗ ಮೌನವೇಕೆ ?