ಸಮಾನ ನಾಗರಿಕ ಸಂಹಿತೆ ಸಂವಿಧಾನಕ್ಕೆ ವಿರುದ್ಧ(ವಂತೆ) ! – ಗದ್ದಲವೆಬ್ಬಿಸಿದ ಆಲ್ ಇಂಡಿಯಾ ಮುಸ್ಲಿಂ ಪರ್ಸನಲ್ ಲಾ ಬೋರ್ಡ್ !

ನವದೆಹಲಿ – ಆಲ್ ಇಂಡಿಯಾ ಮುಸ್ಲಿಂ ಪರ್ಸನಲ್ ಲಾ ಬೋರ್ಡ್ ಸಮಾನ ನಾಗರಿಕ ಸಂಹಿತೆಯು ಸಂವಿಧಾನಕ್ಕೆ ವಿರುದ್ಧವಾದದ್ದು ಎಂದು ಹೇಳುತ್ತ ಅದನ್ನು ವಿರೋಧಿಸಿದೆ. ಉತ್ತರಾಖಂಡ ಸರಕಾರವು ಸಮಾನ ನಾಗರಿಕ ಸಂಹಿತೆಯ ಕರಡು ತಯಾರಿಸಲು ಸಮಿತಿಯನ್ನು ರಚಿಸಿದೆ. ಅಂತೆಯೇ ಉತ್ತರ ಪ್ರದೇಶ ಸೇರಿದಂತೆ ಇತರ ಬಿಜೆಪಿ ಆಡಳಿತ ರಾಜ್ಯಗಳು ಕಾನೂನಿನ ಬಗ್ಗೆ ಸಂಹಿತೆಯ ರಚನೆಯ ಅಧ್ಯಯನ ಪ್ರಾರಂಭಿಸಿವೆ. ಕೇಂದ್ರೀಯ ಗೃಹ ಸಚಿವ ಅಮಿತ ಶಾ ಅವರು “ಸಮಾನ ನಾಗರಿಕ ಸಂಹಿತೆಯ ಸಮಯ ಈಗ ಬಂದಿದೆ” ಎಂದು ಕೆಲವು ದಿನಗಳ ಹಿಂದೆಯೆ ಹೇಳಿದ್ದರು. ಈ ಹಿನ್ನೆಲೆಯಲ್ಲಿ ಆಲ್ ಇಂಡಿಯಾ ಮುಸ್ಲಿಂ ಪರ್ಸನಲ್ ಲಾ ಬೋರ್ಡ್ ಕಾನೂನಿಗೆ ವಿರೋಧ ವ್ಯಕ್ತಪಡಿಸಿದೆ.

ಬೋರ್ಡ್ ನ ಪ್ರಧಾನ ಕಾರ್ಯದರ್ಶಿ ಮೌಲಾನಾ ಖಾಲಿದ ಸೈಫುಲ್ಲಾ ರಹಮಾನಿ ಮಾತನಾಡಿ ಕಾನೂನನ್ನು ದೇಶದ ಜನರು ಒಪ್ಪುವದಿಲ್ಲ. (ಮೌಲಾನಾ ಯಾವ ಆಧಾರದ ಮೇಲೆ ಹೀಗೆ ಹೇಳುತ್ತಿದ್ದಾರೆ?- ಸಂಪಾದಕರು) ಆದ್ದರಿಂದ ಕೇಂದ್ರ ಸರಕಾರವು ಅಂತಹ ಯಾವುದೇ ಕ್ರಮವನ್ನು ತೆಗೆದುಕೊಳ್ಳಬಾರದು. ಭಾರತದ ಸಂವಿಧಾನವು ಪ್ರತಿಯೊಬ್ಬ ನಾಗರಿಕನಿಗೆ ತನ್ನ ಸ್ವಂತ ಇಚ್ಛೆಯ ಪ್ರಕಾರ ಬದುಕುವ ಹಕ್ಕನ್ನು ನೀಡಿದೆ. ಇದು ಮೂಲಭೂತ ಹಕ್ಕು. ಈ ಹಕ್ಕಿನಿಂದಾಗಿ ಅಲ್ಪಸಂಖ್ಯಾತರು ಮತ್ತು ಬುಡಕಟ್ಟು ಜನಾಂಗದವರು ತಮ್ಮ ಸಂಪ್ರದಾಯ, ಜೀವನಶೈಲಿ ಮತ್ತು ನಂಬಿಕೆಗಳ ಪ್ರಕಾರ ವಿಭಿನ್ನ ‘ಪರ್ಸನಲ ಲಾ’ (ವೈಯಕ್ತಿಕ ಕಾನೂನ)ನ್ನು ಹೊಂದಲು ಅನುಮತಿಸಲಾಗಿದೆ. ವೈಯಕ್ತಿಕ ಕಾನೂನು ಸಂವಿಧಾನದಲ್ಲಿ ಯಾವುದೇ ರಿತಿಯಲ್ಲಿ ಹಸ್ತಕ್ಷೇಪ ಮಾಡುವದಿಲ್ಲ. ಮತ್ತೊಂದೆಡೆ ವೈಯಕ್ತಿಕ ಕಾನೂನು ಮೂಲಕ ಅಲ್ಪಸಂಖ್ಯಾತ ಮತ್ತು ಬಹುಸಂಖ್ಯಾತ ಸಮುದಾಯಗಳ ನಡುವೆ ನಂಬಿಕೆಯನ್ನು ಕಾಪಾಡುವ ಕೆಲಸ ಮಾಡುತ್ತಲಿದೆ.

ಸಂಪಾದಕೀಯ ನಿಲುವು

‘ಸಮಾನ ನಾಗರಿಕ ಸಂಹಿತೆ ಜಾರಿಗೊಳಿಸಿ’ ಎಂಬುವುದನ್ನು ಸುಪ್ರೀಂ ಕೋರ್ಟ್ ಸರಕಾರಕ್ಕೆ ಪದೇ ಪದೇ ಸೂಚಿಸಿದೆ. ಆಲ್ ಇಂಡಿಯಾ ಮುಸ್ಲಿಂ ಪರ್ಸನಲ್ ಲಾ ಬೋರ್ಡ್ ಗೆ ಸುಪ್ರೀಂ ಕೋರ್ಟ್‌ಗಿಂತ ಹೆಚ್ಚು ತಿಳಿದಿದೆ ಎಂದು ಅವರು ಭಾವಿಸುತ್ತಾರೆಯೇ?

ಸಮಾನ ನಾಗರಿಕ ಸಂಹಿತೆಯನ್ನು ಜಾರಿಗೆ ತರುವುದರಿಂದ ಮುಸ್ಲಿಮರಿಗೆ ಒಂದಕ್ಕಿಂತ ಹೆಚ್ಚು ಹೆಂಡತಿಯರು ಅನೇಕ ಮಕ್ಕಳನ್ನು ಹೊಂದಲು ಅವಕಾಶವಿರುವುದಿಲ್ಲ ಎಂದು ಅವರ ಸಂಘಟನೆಗಳು ಇದನ್ನು ವಿರೋಧಿಸುತ್ತಿದ್ದಾರೆ.