ರಾಷ್ಟ್ರೀಯ ಗ್ರಾಹಕ ವೇದಿಕೆಯಿಂದ ಸಂತ್ರಸ್ತ ಮಹಿಳೆಗೆ ನ್ಯಾಯ !
ನವದೆಹಲಿಯ ‘ವೃಷಭ ವೈದ್ಯಕೀಯ ಕೇಂದ್ರದಲ್ಲಿ ಶ್ವೇತಾ ಖಂಡೇಲವಾಲ ಎಂಬ ಮಹಿಳೆಯನ್ನು ಹೆರಿಗೆಗಾಗಿ ಸೇರಿಸಲಾಗಿತ್ತು. ಅಲ್ಲಿ ೧೩.೯.೨೦೧೨ ರಂದು ಉಷಾ ಜೈನ್ ಮತ್ತು ಎ.ಕೆ. ಜೈನ್ ಈ ಆಧುನಿಕ ವೈದ್ಯರು ಅವಳ ‘ಎಲ್.ಎಸ್. ಸೀಜರಿಯನ್ ಶಸ್ತ್ರಚಿಕಿತ್ಸೆ ಮಾಡಿದರು. ಹೆರಿಗೆಯಾಗಿ ೫ ದಿನಗಳ ನಂತರ ಅವಳನ್ನು ಮನೆಗೆ ಕಳುಹಿಸಲಾಯಿತು.