TMC MLA Statement : ಬಂಗಾಳದಲ್ಲಿ ಬಾಬ್ರಿ ಮಸೀದಿ ನಿರ್ಮಾಣ ! – ಆಡಳಿತಾರೂಢ ತೃಣಮೂಲ ಕಾಂಗ್ರೆಸ್ಸ್ ಶಾಸಕನ ಖೇದಕರ ಘೋಷಣೆ !

ತೃಣಮೂಲ ಕಾಂಗ್ರೆಸ್‌ನ ಶಾಸಕ ಹುಮಾಯೂ ಕಬೀರ್

ಕೋಲಕಾತಾ (ಬಂಗಾಳ) – ಬಂಗಾಳದಲ್ಲಿ ಆಡಳಿತಾರೂಢ ತೃಣಮೂಲ ಕಾಂಗ್ರೆಸ್‌ನ ಶಾಸಕ ಹುಮಾಯೂ ಕಬೀರ್ ಇವರು ಮುಸ್ಲಿಂ ಬಾಹುಳ್ಯವಿರುವ ಮುರ್ಷಿದಾಬಾದ್ ಜಿಲ್ಲೆಯ ಬೆಲ್ಡಾಂಗದಲ್ಲಿ 2 ಎಕರೆ ಜಾಗದಲ್ಲಿ ಹೊಸ ಬಾಬ್ರಿ ಮಸೀದಿಯನ್ನು ನಿರ್ಮಿಸಲಾಗುವುದು ಎಂದು ಘೋಷಿಸಿದ್ದಾರೆ. ಬಾಬ್ರಿ ಮಸೀದಿಯ ಕಟ್ಟುವ ಕೆಲಸವನ್ನು ಡಿಸೆಂಬರ್ 6, 2025 ರ ಮೊದಲು ಪ್ರಾರಂಭಿಸಲಾಗುವುದು. ಈ ಮಸೀದಿಗೆ ನಾನು 1 ಕೋಟಿ ರೂಪಾಯಿ ದೇಣಿಗೆ ನೀಡಲಿದ್ದೇನೆ ಎಂದು ಹೇಳಿದರು.

ಕಬೀರ್ ಮುಂದೆ ಮಾತನಾಡಿ, ಬಂಗಾಳದಲ್ಲಿ ಶೇ. 34 ರಷ್ಟು ಮುಸಲ್ಮಾನರಿದ್ದಾರೆ. ಅವರಿಗೆ ಎದೆ ಉಬ್ಬಿಸಿ ನಡೆಯುವ ಇಚ್ಛೆ ಇದೆ. ಅದು ಅವರ ಹಕ್ಕು. ಮಸೀದಿಗಾಗಿ 100 ಸದಸ್ಯರ ಟ್ರಸ್ಟಿಗಳ ಮಂಡಳಿಯನ್ನು ಸ್ಥಾಪಿಸಲಾಗುವುದು ಎಂದು ಹೇಳಿದ್ದಾರೆ.

ಸಂಪಾದಕೀಯ ನಿಲುವು

ಈ ದೇಶದಲ್ಲಿ ಮುಸಲ್ಮಾನರ ಅಥವಾ ಹುಮಾಯೂ ಕಬೀರ್ ಇವರ ಬಾಬರ್ ಯಾರಿದ್ದರು ?, ಎಂಬ ಪ್ರಶ್ನೆಯನ್ನು ಕೇಳುವುದು ಆವಶ್ಯಕವಾಗಿದೆ. ಬಾಬರ್‌ನನ್ನು ತಮ್ಮ ವಂಶಸ್ಥನೆಂದು ಪರಿಗಣಿಸಿದ್ದಾರೆ, ಅವರಿಗೆ ಬಹುಸಂಖ್ಯಾತ ಹಿಂದೂಗಳ ದೇಶದಲ್ಲಿ ಶಾಸಕರಾಗುವ ಅವಕಾಶ ಸಿಗುವುದು, ಇದು ಹಿಂದೂಗಳಿಗೆ ನಾಚಿಕೆ ಗೇಡಿನ ಸಂಗತಿ !