|
ನವ ದೆಹಲಿ – ಶೇಖ ಹಸೀನಾ ಇವರ ಪಲಾಯನದ ನಂತರ ಅಲ್ಪಸಂಖ್ಯಾತ ಹಿಂದುಗಳ ಮೇಲೆ ದೌರ್ಜನ್ಯ ಮುಂದುವರೆದಿದೆ. ಇದೇ ಸಮಯದಲ್ಲಿ ಬಾಂಗ್ಲಾದೇಶದ ಸರಕಾರ ಭಾರತದ ಶತ್ರು ಪಾಕಿಸ್ತಾನದ ಜೊತೆಗೆ ಆಪ್ತ ಸಂಬಂಧ ಬೆಳೆಸುತ್ತಿದೆ ಮತ್ತು ಶಸ್ತ್ರಾಸ್ತ್ರಗಳನ್ನು ಖರೀದಿಸುತ್ತಿದೆ. ಪಾಕಿಸ್ತಾನದ ಸಹಾಯದಿಂದ ಭಾರತದಲ್ಲಿ ಜಿಹಾದಿ ಭಯೋತ್ಪಾದನೆ ಪಸರಿಸುವ ಯೋಜನೆ ರೂಪಿಸುತ್ತಿದೆ. ಈ ಸಂದರ್ಭದಲ್ಲಿ ಅಮೆರಿಕಾದಲ್ಲಿ ವಾಸಿಸುವ ಪಾಕಿಸ್ತಾನಿ ಮೂಲದ ಉದ್ಯಮಿ ಮತ್ತು ಪಾಕಿಸ್ತಾನಿ ಪ್ರಕರಣಗಳ ತಜ್ಞ ಸಾಜಿದ್ ತರಾರ್ ಇವರು ಭಾರತಕ್ಕೆ ಜಾಗರೂಕವಾಗಿರಲು ಸಲಹೆ ನೀಡಿದೆ. ಅವರು, ಭಾರತ ಮತ್ತು ಬಾಂಗ್ಲಾದೇಶದ ಗಡಿಯ ಹತ್ತಿರ ‘ಜಿಹಾದ್ ನಡೆಸುವೆವು’, ಎಂದು ಘೋಷಣೆ ನೀಡುತ್ತಿದ್ದಾರೆ. ಇದು ಭಾರತಕ್ಕೆ ಗಂಭೀರವಾದ ಕಳವಳಕಾರಿ ವಿಷಯವಾಗಿದೆ. ಬಾಂಗ್ಲಾದೇಶದ ಮಧ್ಯಂತರ ಸರಕಾರದ ಮುಖ್ಯ ಸಲಹೆಗಾರ ಮಹಮ್ಮದ್ ಇವರು ಪಾಕಿಸ್ತಾನದ ಬಳಿ ಕೇವಲ ೨೫ ಟನ್ ಸಕ್ಕರೆ ಅಷ್ಟೇ ಕೇಳಿರಲಿಲ್ಲ, ಬದಲಾಗಿ ಬೃಹತ್ ಪ್ರಮಾಣದಲ್ಲಿ ಶಸ್ತ್ರಾಸ್ತ್ರಗಳನ್ನು ಕೂಡ ಬೇಡಿಕೆ ಸಲ್ಲಿಸಿದ್ದರು’, ಎಂದು ಹೇಳಿದರು.
“🚨Alert: Bangladesh’s Growing Threat to India! 🚨
Pakistani-origin American businessman, Sajid Tarar, has reveals that Bangladesh is preparing for J!h@d against India! 💥
What’s more alarming is that Bangladesh has procured a massive amount of explosives and ammunition from… pic.twitter.com/mITlRBf0UO
— Sanatan Prabhat (@SanatanPrabhat) December 10, 2024
ಸಾಜಿದ ತರಾರ ಇವರು ನೀಡಿರುವ ಮಾಹಿತಿ
೧. ಭಾರತದ ಗಡಿಯಲ್ಲಿ ಎರಡು ಕಡೆಯಿಂದ (ಪಾಕಿಸ್ತಾನ ಮತ್ತು ಬಾಂಗ್ಲಾದೇಶ) ಜಿಹಾದದ ಘೋಷಣೆಗಳು ನೀಡಲಾಗುತ್ತಿರುವುದರಿಂದ ಭಯೋತ್ಪಾದಕ ಚಟುವಟಿಕೆಯ ವಿರುದ್ಧ ಭಾರತದಲ್ಲಿ ಸಂಪೂರ್ಣ ಸಿದ್ಧತೆ ಮಾಡಿಕೊಳ್ಳಬೇಕು ಮತ್ತು ಕಠಿಣ ಕ್ರಮ ಕೈಗೊಳ್ಳಬೇಕಾಗುತ್ತದೆ.
೨. ಬಾಂಗ್ಲಾದೇಶವು ಪಾಕಿಸ್ತಾನದಿಂದ ೪೦ ಟನ್ ಆರ್.ಡಿ.ಎಕ್ಸ್., ೨೮ ಸಾವಿರ ಉನ್ನತ ಮಟ್ಟದ ರಾಕೆಟ್, ಟ್ಯಾಂಕರ್‍ಗಳ ೨ ಸಾವಿರ ಸಿಡಿಮದ್ದು ಮತ್ತು ೪೦ ಸಾವಿರ ಮದ್ದು ಗುಂಡುಗಳ ಪೂರೈಕೆಗೆ ಆಗ್ರಹಿಸಿದೆ.
೩. ಮಹಮ್ಮದ್ ಯುನೂಸ್ ಇವರು ಪಾಕಿಸ್ತಾನಿ ಜನರಿಗಾಗಿ ಬಾಂಗ್ಲಾದೇಶದ ವಿಸಾದ ನಿಯಮಗಳು ಸಡಿಲಗೊಳಿಸಿದ್ದಾರೆ. ಈ ಹಿಂದೆ ಯಾವುದೇ ಪಾಕಿಸ್ತಾನಿ ವ್ಯಕ್ತಿಗೆ ವೀಸಾ ಪಡೆಯುವುದಕ್ಕಾಗಿ ‘ನಾ ಹರಕತ’ ಪ್ರಮಾಣ ಪತ್ರಕ್ಕಾಗಿ ಅರ್ಜಿ ಸಲ್ಲಿಸಬೇಕಾಗುತ್ತಿತ್ತು. ಈಗ ಆ ನಿಯಮ ರದ್ದು ಪಡಿಸಲಾಗಿದೆ. ಆದ್ದರಿಂದ ಇಸ್ಲಾಮಿ ಭಯೋತ್ಪಾದಕರು ಸುಲಭವಾಗಿ ಬಾಂಗ್ಲಾದೇಶದಲ್ಲಿ ಪ್ರವೇಶ ಮಾಡಿ ಗಡಿ ದಾಟಿ ಭಾರತದಲ್ಲಿ ಪ್ರವೇಶಿಸಬಹುದು.
೪. ಭಾರತದಲ್ಲಿನ ಕೆಲವು ಜನರು ಭೂತಕಾಲದ ಅನುಭವ ನೆನಪಿಸಿಕೊಂಡು ಬಹಳ ಆತಂಕಕ್ಕೆ ಒಳಗಾಗಿದ್ದಾರೆ. ಈ ಜನರಿಗೆ, ಬಾಂಗ್ಲಾದೇಶದ ನ್ಯಾಷನಲ್ ಪಾರ್ಟಿ ೧೯೯೧ ರಿಂದ ೧೯೯೬ ಮತ್ತು ಪುನಃ ೨೦೦೧ ರಿಂದ ೨೦೦೫ ಈ ಸಮಯದಲ್ಲಿ ಅಧಿಕಾರದಲ್ಲಿತ್ತು. ಈ ಅವಧಿಯಲ್ಲಿ ಲಷ್ಕರ್ ಏ ತೊಯ್ಬಾ ಸಂಘಟನೆಯ ಭಯೋತ್ಪಾದಕರು, ಮಸೂದ್ ಅಜಹರ್ ಮತ್ತು ಸಜ್ಜಾದ್ ಅಪಘಾಣಿ ಇವರಂತಹ ಭಯೋತ್ಪಾದಕರು ಬಾಂಗ್ಲಾದೇಶದ ಗಡಿಯಿಂದ ಭಾರತದಲ್ಲಿ ಪ್ರವೇಶಿಸಿದ್ದರು ಮತ್ತು ಮುಂಬಯಿಯಲ್ಲಿ ದಾಳಿ ನಡೆಸಿದ್ದರು. ಭಯೋತ್ಪಾದಕ ಡೇವಿಡ್ ಹೆಡ್ಲಿ ಹಾಗೂ ತಹವ್ವುರ್ ರಾಣಾ ಅಮೇರಿಕಾದಲ್ಲಿರುವಾಗ ಆಗಲೂ ಬಾಂಗ್ಲಾದೇಶದೊಂದಿಗೆ ನಿಕಟ ಸಂಬಂಧವಿತ್ತು. ಡೇವಿಡ್ ಹೆಡ್ಲಿ ಹಾಗೂ ತಹವ್ವುರ್ ರಾಣಾ ಮುಂಬಯಿ ದಾಳಿಗಾಗಿ ಮಾಹಿತಿ ಸಂಗ್ರಹಿಸಿದ್ದರು.
೫. ಬಾಂಗ್ಲಾದೇಶ ಘೋಷಿಸಿರುವ ಜಿಹಾದದ ಅಡಿಯಲ್ಲಿ ಭಾರತದಲ್ಲಿನ ಕೆಲವು ಜನರು ಬಾಂಗ್ಲಾದೇಶದ ವತಿಯಿಂದ ಕಾಶ್ಮೀರದ ಸ್ವಾತಂತ್ರ್ಯಕ್ಕಾಗಿ ಬೆಂಬಲ ನೀಡಲು ಆರಂಭಿಸುವರು. ಎಲ್ಲದರ ಹಿಂದೆ ಪಾಕಿಸ್ತಾನದ ಐ.ಎಸ್.ಐ. (ಇಂಟರ್ ಸರ್ವಿಸಸ್ ಇಂಟಲಿಜೆನ್ಸ್) ಈ ಗುಪ್ತಚರ ಸಂಸ್ಥೆ ಇರುವುದು.
ಸಂಪಾದಕೀಯ ನಿಲುವು
|