Bengal Bomb Blast : ಮುಸ್ಲಿಂ ಬಾಹುಳ್ಯವಿರುವ ಮರ್ಷಿದಾಬಾದ (ಬಂಗಾಳ)ನ ಮನೆಯೊಂದರಲ್ಲಿ ಬಾಂಬ್ ತಯಾರಿಸುತ್ತಿದ್ದಾಗ ಸ್ಫೋಟ: 3 ಮುಸ್ಲಿಮರ ಸಾವು

ಮುರ್ಷಿದಾಬಾದ (ಬಂಗಾಳ) – ಮುಸ್ಲಿಂ ಬಾಹುಳ್ಯವಿರುವ ಮುರ್ಷಿದಾಬಾದ ಜಿಲ್ಲೆಯ ಖೈರತಲಾದಲ್ಲಿ ಮಾಮೂನ್ ಮುಲ್ಲಾ ಎಂಬುವವರ ಮನೆಯಲ್ಲಿ ನಕಲಿ ಬಾಂಬ್ ತಯಾರಿಸುತ್ತಿದ್ದ ವೇಳೆ ಸ್ಫೋಟ ಸಂಭವಿಸಿ 3 ಜನರು ಸಾವನ್ನಪ್ಪಿದ್ದಾರೆ. ಮೃತರನ್ನು ಮಮೂನ ಮುಲ್ಲಾ, ಸಾಕಿರುಲ್ ಸರಕಾರ ಮತ್ತು ಮುಸ್ತಕೀನ ಶೇಖ ಎಂದು ಗುರುತಿಸಲಾಗಿದೆ. ರಾತ್ರಿಯ ಕತ್ತಲಲ್ಲಿ ಅವರು ಮನೆಯಲ್ಲಿ ಬಾಂಬ್ ತಯಾರಿಸುತ್ತಿದ್ದರು. ಪೊಲೀಸರು ಇಲ್ಲಿಂದ ಹಲವಾರು ಬಾಂಬ್ ತಯಾರಿಕೆ ಸಾಮಗ್ರಿಗಳನ್ನು ವಶಪಡಿಸಿಕೊಂಡಿದ್ದಾರೆ; ಆದರೆ ಮನೆಯ ಮೇಲೆ ಬಾಂಬ್ ಎಸೆಯಲಾಗಿದೆ ಎಂದು ಮೃತನ ಸಂಬಂಧಿಕರು ಹೇಳುತ್ತಾರೆ. ಪೊಲೀಸರು ಅದರ ತನಿಖೆ ನಡೆಸುತ್ತಿದ್ದಾರೆ.

ಸಂಪಾದಕೀಯ ನಿಲುವು

ಮನೆಯೊಂದರಲ್ಲಿ ಬಾಂಬ್ ತಯಾರಿಸುತ್ತಿರುವಾಗ ಪೊಲೀಸ್ ಮತ್ತು ಗುಪ್ತಚರ ಇಲಾಖೆಗೆ ಹೇಗೆ ತಿಳಿಯುವುದಿಲ್ಲ ? ನಾಳೆ ಈ ಬಾಂಬ್‌ಗಳನ್ನು ಭಯೋತ್ಪಾದಕ ಚಟುವಟಿಕೆಗಳಲ್ಲಿ ಬಳಸಿದರೆ, ಏನಾಗಬಹುದಿತ್ತು ? ಹೀಗೆ ಬೇರೆ ಮನೆಗಳಲ್ಲಿ ಬಾಂಬ್ ತಯಾರಿಸಲಾಗುತ್ತಿದೆಯೇ? ಎನ್ನುವುದನ್ನು ತೃಣಮೂಲ ಕಾಂಗ್ರೆಸ್ಸಿನ ಮುಸಲ್ಮಾನ ಪ್ರೇಮಿ ಸರಕಾರ ಶೋಧಿಸುವುದೇ ?