(ಡೀಪ್ ಸ್ಟೇಟ್ ಅಂದರೆ ಸರಕಾರಿ ವ್ಯವಸ್ಥೆ ಮತ್ತು ಖಾಸಗಿ ಸಂಸ್ಥೆಗಳ ನಡುವಿನ ಗುಪ್ತಜಾಲ. ಈ ವ್ಯವಸ್ಥೆಯ ಮೂಲಕ ಸರಕಾರಿ ನಿಲುವುಗಳನ್ನು ಖಾಸಗಿ ಸಂಸ್ಥೆಗಳಿಗೆ ಅನುಕೂಲಗೊಳಿಸಲಾಗುತ್ತದೆ.) ೧೮೯೩ ರಲ್ಲಿ ಚಿಕಾಗೋದಲ್ಲಿನ ಜಾಗತಿಕ ಸರ್ವಧರ್ಮ ಪರಿಷತ್ತಿನಲ್ಲಿ ಸ್ವಾಮಿ ವಿವೇಕಾನಂದರು ಹಿಂದೂ ಧರ್ಮದ ಶ್ರೇಷ್ಠತೆಯನ್ನು ವಿವರಿಸುವ ಭಾಷಣ ಮಾಡಿದರು ಹಾಗೂ ಅನಂತರ ಅಮೇರಿಕಾದ ಜೊತೆಗೆ ಇನ್ನಿತರ ಅನೇಕ ದೇಶಗಳಲ್ಲಿಯೂ ಪ್ರವಾಸ ಮಾಡಿದರು. ಅಲ್ಲಿ ಸ್ವಾಮೀಜಿಯವರು ಅನೇಕ ಬಾರಿ ಮುಂದಿನಂತೆ ಹೇಳಿದರು, ‘ತಾನು ಯಾರನ್ನೂ ಮತಾಂತರಿಸಲು ಬಂದಿಲ್ಲ, ಹಿಂದೂಗಳ ವೇದಾಂತವು ಕ್ರೈಸ್ತರನ್ನು ಇನ್ನೂ ಒಳ್ಳೆಯ ಕ್ರೈಸ್ತರನ್ನಾಗಿಸಬಹುದು.’ ಜಗತ್ತಿನ ಎಲ್ಲಕ್ಕಿಂತ ಪ್ರಾಚೀನ ಧರ್ಮಗ್ರಂಥವೆಂದು ಪರಿಗಣಿಸಲ್ಪಡುವ ಹಿಂದೂಗಳ ‘ಋಗ್ವೇದ’ದಲ್ಲಿ ಮುಂದಿನಂತೆ ಹೇಳಲಾಗಿದೆ, ‘ಏಕಮ ಸತ್ ವಿಪ್ರಾ ಬಹುಧಾ ವದನ್ತಿ’ ಅಂದರೆ ಸತ್ಯ ಒಂದೇ ಆಗಿದೆ, ಅದನ್ನು ಜ್ಞಾನಿಗಳು ವಿವಿಧ ರೀತಿಗಳಲ್ಲಿ ವ್ಯಕ್ತಪಡಿಸುತ್ತಾರೆ.’ ಅದೇ ರೀತಿ ‘ಮಹೋಪನಿಷತ್’ನಲ್ಲಿ ಮುಂದಿನಂತೆ ಹೇಳಲಾಗಿದೆ, ‘ಉದಾರಚರಿತಾನಾಂ ತು ವಸುಧೈವ ಕುಟುಂಬಕಮ್ |’, ಅಂದರೆ ಸಂಪೂರ್ಣ ಪೃಥ್ವಿಯಲ್ಲಿರುವ ನಾಗರಿಕರೆಂದರೆ ಒಂದು ಕುಟುಂಬವೆ ಆಗಿದೆ.’ ಆದ್ದರಿಂದ ಭಾರತ ಜಗತ್ತಿನಾದ್ಯಂತ ಹಿಂದೂ ಧರ್ಮದ ಬಗ್ಗೆ ಎಷ್ಟು ಹೇಳಿದರೂ, ಅದರ ಹಿಂದೆ ಪಾಶ್ಚಿಮಾತ್ಯರನ್ನು ಮತಾಂತರಿಸುವ ಯಾವುದೇ ಉದ್ದೇಶವಿರಲಿಲ್ಲ. ಇದರ ತುಲನೆಯಲ್ಲಿ ಇತರ ಧರ್ಮಗಳ (ಅಂದರೆ ಪಂಥಗಳು) ತಮ್ಮ ಪಂಥವಿಸ್ತಾರದ, ಸ್ವರ್ಗಪ್ರಾಪ್ತಿಯ ಇಚ್ಛೆ ಹಾಗೂ ಅದಕ್ಕಾಗಿ ಯಾವುದೇ ಹಂತಕ್ಕೆ ಹೋಗಿ ಇತರ ಧರ್ಮದವರ ಮೇಲೆ ಅಮಾನವೀಯ ಅತ್ಯಾಚಾರ ಮಾಡುವ ಇತಿಹಾಸವು ಭಾರತೀಯರಿಗೆ ಹೊಸತೇನಲ್ಲ. ಜಗತ್ತಿನ ವಿವಿಧ ಧರ್ಮಗಳನ್ನು ಪ್ರತ್ಯಕ್ಷ ಅಭ್ಯಾಸ ಮಾಡಿರುವ ಸ್ವಾಮಿ ವಿವೇಕಾನಂದರು ಭಾರತದಲ್ಲಿ ನಡೆಯುತ್ತಿರುವ ಮತಾಂತರದ ಸಂಕಟವನ್ನು ಗುರುತಿಸಿ ಮುಂದಿನಂತೆ ಹೇಳಿದ್ದಾರೆ, ‘ಹಿಂದೂಗಳ ಮತಾಂತರವೆಂದರೆ, ಹಿಂದೂ ಧರ್ಮದಲ್ಲಿನ ಕೇವಲ ಒಬ್ಬ ಹಿಂದೂ ಕಡಿಮೆಯಾಗುವುದಲ್ಲ, ಅದರಿಂದ ಹಿಂದೂ ಧರ್ಮಕ್ಕೆ ಒಬ್ಬ ಶತ್ರು ಹೆಚ್ಚಾದಂತಾಗುತ್ತದೆ’. ಮತಾಂತರದಿಂದ ಹಿಂದೂಗಳು ಅಲ್ಪಸಂಖ್ಯಾತರಾದ ಕಾಶ್ಮೀರ, ಮಣಿಪುರ, ನಾಗಾಲ್ಯಾಂಡ್ ಮುಂತಾದ ರಾಜ್ಯಗಳಲ್ಲಿ ಹಾಗೂ ಪಾಕಿಸ್ತಾನ, ಬಾಂಗ್ಲಾದೇಶಗಳಲ್ಲಿ ಇಂದು ಕೂಡ ನಾವು ಪ್ರತ್ಯಕ್ಷ ಅದನ್ನು ನೋಡುತ್ತಿದ್ದೇವೆ. ಇಂದು ದೇಶದಾದ್ಯಂತ ಭಾರತವಿರೋಧಿ ಪ್ರತ್ಯೇಕತಾವಾದಿ ಚಳುವಳಿ ಆರಂಭವಾಗಿವೆ. ಅವರಿಗೆ ಪೋಷಣೆ ನೀಡುವ ಕಾರ್ಯವನ್ನು ತಮ್ಮನ್ನು ‘ಸೆಕ್ಯುಲರ್’ವಾದಿಗಳೆಂದು ಹೇಳಿಕೊಳ್ಳುವ ರಾಜಕಾರಣಿಗಳಿಂದ ಮಾಡಲಾಗುತ್ತದೆ. ಆದುದರಿಂದಲೆ ಮೇಲ್ನೋಟಕ್ಕೆ ಕಾಣಿಸುವ ಮತಾಂತರದ ಹಿಂದೆ ‘ಡೀಪ್ ಸ್ಟೇಟ್’ ಇದೆ, ಎಂದು ನಾವು ನಿರ್ಧರಿಸಬಹುದು. ಈ ಲೇಖನದಿಂದ ನಿಮಗೆ ಇದು ಖಚಿತವಾಗಬಹುದು.
೧. ಚರ್ಚ್‌ನ ಪ್ರಭಾವದಲ್ಲಿ ಕ್ರೈಸ್ತ ದೇಶಗಳ ಪಂಥವಿಸ್ತಾರಕ್ಕಾಗಿ ಜಗತ್ತಿನಾದ್ಯಂತದ ದೇಶಗಳ ಮೇಲೆ ಆಕ್ರಮಣ ಹಾಗೂ ಅಲ್ಲಿನ ಮೂಲ ಸಂಸ್ಕೃತಿಯನ್ನು ನಾಶಗೊಳಿಸುವುದು
ಇಂದು ನಮಗೆ ಮಹಾವಿದ್ಯಾಲಯಗಳ ಪಠ್ಯ ಪುಸ್ತಕಗಳಲ್ಲಿ ಪೋರ್ಚುಗೀಸ್, ಬ್ರಿಟೀಶ್, ಫ್ರೆಂಚ್ ಮುಂತಾದವರು ಭಾರತದಲ್ಲಿ ವ್ಯಾಪಾರಕ್ಕಾಗಿ ಬಂದಿದ್ದರು ಎಂದು ಹೇಳಲಾಗುತ್ತದೆ; ಆದರೆ ಕ್ರೈಸ್ತ ಪಂಥದ ಪ್ರಸಾರವೇ ಅದರ ಹಿಂದಿನ ನಿಜವಾದ ಕಾರಣವಾಗಿತ್ತು, ಎಂಬ ಉಲ್ಲೇಖವನ್ನೂ ಮಾಡುವುದಿಲ್ಲ. ಇಸವಿ ೧೪೦೦ ರ ಪ್ರಾರಂಭದಲ್ಲಿ ಯುರೋಪ್ ದೇಶಗಳಲ್ಲಿ ರಾಜ್ಯ ವಿಸ್ತಾರದ ವಿಚಾರ ಪ್ರಬಲವಾಯಿತು. ಆಗ ಯುರೋಪಿನ ಹೆಚ್ಚಿನ ರಾಜರು ಚರ್ಚ್‌ನ ಪ್ರಭಾವದಲ್ಲಿ ಕಾರ್ಯ ಮಾಡುತ್ತಿದ್ದರಿಂದ, ಪೋಪ್‌ನಿಂದ ಅಂದರೆ ಚರ್ಚ್‌ನಿಂದ ಈ ರಾಜ್ಯವಿಸ್ತಾರಕ್ಕೆ ಹಾಗೂ ಅದರ ಮೂಲಕ ಪಂಥವಿಸ್ತಾರಕ್ಕೆ ಅನುಮತಿ ಇರುವುದರಿಂದ ರಾಜರಿಗೂ ಈ ಕಾರ್ಯದಲ್ಲಿ ನಾವಿಕರಿಗೆ ಧನ, ಸೌಲಭ್ಯ ಕೊಡಬೇಕಾಗುತ್ತಿತ್ತು. ಆದ್ದರಿಂದ ಯುರೋಪಿನ ದೇಶಗಳು ಸಮುದ್ರಮಾರ್ಗದಿಂದ ಬೇರೆ ಬೇರೆ ದೇಶಗಳಿಗೆ ಹೋಗುವ ಮಾರ್ಗವನ್ನು ಹುಡುಕಲು ಪ್ರಾರಂಭಿಸಿದರು. ಹೊಸ ವ್ಯಾಪಾರಿ ಮಾರ್ಗವನ್ನು ಹುಡುಕುವ ಸ್ಪರ್ಧೆ, ಕ್ರೈಸ್ತ ಪಂಥದ ಪ್ರಸಾರ ಮಾಡುವ ಉದ್ದೇಶ ಮತ್ತು ಪ್ರಗತಿ ಹೊಂದಿದ ನೌಕಾಯಾನಗಳಿಂದ ಅವರಿಗೆ ಇದು ಸಾಧ್ಯವಾಯಿತು.
೧೪೮೮ ರಲ್ಲಿ ಬಾರ್ಥೋಲೋಮ್ಯು ಡಾಯಸ್ ಎಂಬ ಪೋರ್ಚ್ಯುಗೀಸ್ ನಾವಿಕನು ಪೂರ್ವದಿಕ್ಕಿಗೆ ಹೊರಟನು. ೧೪೯೨ ರಲ್ಲಿ ಸ್ಪೇನ್‌ನ ನಾವಿಕ ಕ್ರಿಸ್ಟೊಫರ್ ಕೊಲಂಬಸ್ ಪಶ್ಚಿಮಕ್ಕೆ ಹೊರಟನು ಹಾಗೂ ಅವನು ದಾರಿ ತಪ್ಪಿ ಪೂರ್ವದಿಕ್ಕಿನ ಕೆರಿಬಿಯನ್ ಪ್ರದೇಶಕ್ಕೆ ತಲುಪಿದನು. ಪೋರ್ಚುಗೀಸರಿಗಿದ್ದ ಒಂದು ಸಂಶಯವೆಂದರೆ, ಕೊಲಂಬಸ್ ಯಾವ ಭೂಮಿಯ ಮೇಲೆ ತನ್ನ ಹಕ್ಕನ್ನು ಹೇಳಿದನೋ ಅಲ್ಲಿಗೆ ಪೋರ್ಚುಗೀಸ್ ನಾವಿಕರು ಮೊದಲೇ ತಲುಪಿರಬೇಕು. ಇದರಿಂದ ಆ ಭೂಮಿಯ ಮೇಲೆ ಮಾಲೀಕತ್ವದ ಹಕ್ಕಿನ ವಿವಾದ ಉದ್ಭವಿಸಿತು ಹಾಗೂ ಈ ಶತ್ರುತ್ವ ಕೆಲವು ವರ್ಷಗಳಲ್ಲಿ ಇನ್ನೂ ಹೆಚ್ಚಾಯಿತು. ಇದನ್ನು ಬಗೆಹರಿಸಲು ಅಂದಿನ ಪೋಪ್ ಸ್ಪೇನ್ ಮತ್ತು ಪೋರ್ಚುಗಲ್‌ನ ರಾಜರಿಗೆ ಸಾಮರಸ್ಯದಿಂದ ಒಪ್ಪಂದ ಮಾಡಿಕೊಳ್ಳಲು ಸೂಚಿಸಿದರು. ಅದಕ್ಕನುಸಾರ ೧೪೯೪ ರಲ್ಲಿ ಪೋರ್ಚುಗಲ್ ಮತ್ತು ಸ್ಪೇನ್ ಇವರ ನಡುವೆ ‘ಟಾರ್ಡೆಸಿಲಸ್’ ಒಪ್ಪಂದಕ್ಕೆ ಸಹಿ ಹಾಕಲಾಯಿತು, ಅದರಲ್ಲಿ ಒಂದು ಕಾಲ್ಪನಿಕ ರೇಖೆಯ ಮೂಲಕ ಜಗತ್ತನ್ನು ೨ ಮಹಾಧಿಕಾರದಲ್ಲಿ ವಿಭಜಿಸಲಾಯಿತು. ಈ ಕಾಲ್ಪನಿಕ ರೇಖೆ ಅಟ್ಲಾಂಟಿಕ್ ಮಹಾಸಾಗರದಲ್ಲಿತ್ತು. ಆ ರೇಖೆಯ ಪೂರ್ವ ದಿಕ್ಕಿನಲ್ಲಿನ ಎಲ್ಲ ಭೂಮಿಯ ಮೇಲೆ ಪೋರ್ಚುಗಲ್ ತನ್ನ ಹಕ್ಕು ಇದೆ ಎಂದು ಹೇಳಿತ್ತು ಮತ್ತು ಆ ರೇಖೆಯ ಪಶ್ಚಿಮ ದಿಕ್ಕಿನ ಎಲ್ಲ ಭೂಮಿಯ ಮೇಲೆ ಸ್ಪೇನ್‌ನ ಹಕ್ಕು ಇತ್ತು. ಈ ಒಪ್ಪಂದದಲ್ಲಿ ‘ಹೊಸತಾಗಿ ಪತ್ತೆ ಹಚ್ಚುವ ಭೂಮಿಯಲ್ಲಿ ಯಾವ ದೇಶಗಳಲ್ಲಿ ಕ್ರೈಸ್ತ ರಾಜ್ಯವಿಲ್ಲವೋ, ಅಲ್ಲಿ ಆಕ್ರಮಣ ಮಾಡಿ ಆ ಭೂಮಿಯನ್ನು ವಶಪಡಿಸಿಕೊಳ್ಳಬೇಕು’, ಎಂಬ ನಿರ್ಣಯವನ್ನು ಪೋಪ್ ಪರಸ್ಪರ ಘೋಷಣೆ ಮಾಡಿದ್ದನು. ಆದ್ದರಿಂದ ಅಮೇರಿಕಾ, ಲ್ಯಾಟೀನ್ ಅಮೇರಿಕಾ, ಆಫ್ರಿಕಾ, ಮೆಕ್ಸಿಕೋ ಸಹಿತ ಇನ್ನಿತರ ದೇಶಗಳಲ್ಲಿನ ಇಂಕಾ, ಟಾಯನೋ, ರೆಡ್ ಇಂಡಿಯನ್ ಮತ್ತು ಎಸ್ಟೇಕ್ ಮುಂತಾದ ಮೂಲ ಪ್ರಾಚೀನ ಸಂಸ್ಕೃತಿಗಳನ್ನು ನಾಶಗೊಳಿಸಲಾಯಿತು. ಇಂದು ಅಲ್ಲಿ ಕೇವಲ ಕ್ರೈಸ್ತ ಚರ್ಚ್‌ನ ಪ್ರಭಾವ ಉಳಿದಿದೆ.
೧೪೯೮ ರಲ್ಲಿ ವಾಸ್ಕೋ-ಡಾ-ಗಾಮನು ಕೇಪ್ ಆಫ್ ಗುಡ್ ಹೋಪ್‌ನಿಂದ ಹಿಂದೂ ಮಹಾಸಾಗರವನ್ನು ಪ್ರವೇಶಿಸಿದಾಗ ಪೋರ್ಚುಗೀಸರಿಗೆ ಅನಿರೀಕ್ಷಿತವಾಗಿ ಆಫ್ರಿಕನ್, ಭಾರತೀಯ ಹಾಗೂ ಅರಬ ಈ ದೇಶಗಳ ಸಮಾವೇಶವಿರುವ ವ್ಯಾಪಾರ ಜಾಲದಲ್ಲಿ ಪ್ರವೇಶ ಸಿಕ್ಕಿತು, ವಾಸ್ಕೋ-ಡಾ-ಗಾಮನು ಭಾರತದಿಂದ ಮುಂದೆ ಪೂರ್ವದಿಕ್ಕಿನ ಇಂಡೋನೇಷ್ಯಾ ಮತ್ತು ಜಪಾನ್ ಈ ದೇಶಗಳ ಕಡೆಗೆ ಪ್ರಯಾಣ ಬೆಳೆಸಿದನು; ಆದರೆ ಅಮೇರಿಕಾ, ಆಫ್ರಿಕಾ ಈ ದೇಶಗಳ ತುಲನೆಯಲ್ಲಿ ಪೂರ್ವದಿಕ್ಕಿನ ರಾಜ್ಯಗಳು ಮೊದಲೇ ಬಲಿಷ್ಠವಾಗಿದ್ದವು. ಚೀನಾ-ಜಪಾನ್‌ನ ಸಾಮ್ರಾಟ, ಭಾರತದಲ್ಲಿನ ಮರಾಠಾ ರಾಜರು, ದಕ್ಷಿಣ ಭಾರತದಲ್ಲಿನ ಪಾಂಡ್ಯ ರಾಜವಂಶ, ವಿಜಯನಗರ ಸಾಮ್ರಾಜ್ಯ ಮತ್ತು ಮಲೇಷ್ಯಾದ ಸುಲ್ತಾನ ಇವರಿಂದಾಗಿ ಪೋರ್ಚುಗೀಸರಿಗೆ ಈ ಭಾಗದಲ್ಲಿ ಸ್ಪೇನ್‌ನ ಹಾಗೆ ನಿರಂಕುಶ ಅಧಿಕಾರ ಸಿಗಲಿಲ್ಲ. ಮುಂದೆ ಈ ಮಾರ್ಗದಲ್ಲಿ ವ್ಯಾಪಾರದ ಲಾಭವನ್ನು ಗಮನದಲ್ಲಿಟ್ಟುಕೊಂಡು ೧೫ ನೇ ಶತಮಾನದ ಕೊನೆಗೆ ಯುರೋಪ್‌ನಲ್ಲಿನ ನೆದರ್‌ಲೇಂಡ್ಸ್, ಇಂಗ್ಲೆಂಡ್, ಫ್ರಾನ್ಸ್ ಇತ್ಯಾದಿ ದೇಶಗಳು ಕೂಡ ಶಕ್ತಿಶಾಲಿ ನೌಕಾದಳ ತಯಾರಿಸಿ ಅವರು ಕೂಡ ಈ ಸ್ಪರ್ಧೆಗೆ ಇಳಿದರು ಹಾಗೂ ಅವರು ಪೋರ್ಚುಗೀಸ್-ಸ್ಪೇನೀಶ್ ವಸಾಹತಿನ ಮೇಲೆ ಆಕ್ರಮಣ ಮಾಡಿದರು, ಅದರಿಂದ ಟಾರ್ಡೇಸಿಲಸ್‌ನ ಒಪ್ಪಂದ ಮುರಿಯಿತು.
೨. ವ್ಯಾಪಾರದ ಜೊತೆಗೆ ಕ್ರಿಸ್ತೀಕರಣಗೊಳಿಸುವ ಪ್ರಯತ್ನ
ಪೂರ್ವದಿಕ್ಕಿನ ದೇಶಗಳಲ್ಲಿ ತಮ್ಮದೇ ವಸಾಹತು ನಿರ್ಮಾಣ ಮಾಡುವುದರೊಂದಿಗೆ ಪೋರ್ಚುಗೀಸ್ ರಾಜರು ಅಲ್ಲಿನ ಜನರನ್ನು ಮತಾಂತರಿಸುವುದು ಕೂಡ ತಮ್ಮ ಪವಿತ್ರ ಕರ್ತವ್ಯವೆಂದು ತಿಳಿದರು. ಆದ್ದರಿಂದ ಅವರು ಅಲ್ಲಿ ಚರ್ಚ್‌ಗಳ ಸ್ಥಾಪನೆಗಾಗಿ ಹಣ ನೀಡಿದರು. ೫ ನೇ ಪೋಪ್ ನಿಕೋಲಸ್ ಇವರು ೧೪೫೨ ರಲ್ಲಿ ಅಧಿಕೃತ ಆದೇಶವನ್ನು ಹೊರಡಿಸಿದರು, ‘ಎಲ್ಲ ಕ್ರೈಸ್ತೇತರ ಜನರ ವಿರುದ್ಧ ಯುದ್ಧ ಸಾರಿ ಅವರ ಪ್ರದೇಶವನ್ನು ಗೆದ್ದುಕೊಳ್ಳುವುದೇ ಅಧಿಕೃತವಾಗುವುದು. ಕ್ರೈಸ್ತೇತರರು ಅಸಂಸ್ಕೃತರು ಮತ್ತು ಮಾನವೀಯತೆ ಇಲ್ಲದವರು, ಹಾಗಾಗಿ ಅವರಿಗೆ ಭೂಮಿ ಅಥವಾ ರಾಷ್ಟ್ರದ ಮೇಲೆ ಯಾವುದೇ ಅಧಿಕಾರವಿಲ್ಲ. ಆದ್ದರಿಂದ ಅವರ ಭೂಮಿಯನ್ನು ವಶಪಡಿಸಿಕೊಳ್ಳುವ ಅಧಿಕಾರ ದೇವರು ಕ್ರೈಸ್ತರಿಗೆ ನೀಡಿದ್ದಾರೆ.’ ಪೋಪ್ ಇವರ ಈ ಆದೇಶವನ್ನು ಬೇರೆ ಪ್ರದೇಶಗಳಲ್ಲಿ ವಿನಾಕಾರಣ ಯುದ್ಧ, ವಸಾಹತುವಾದ, ಅಲ್ಲಿನ ಮೂಲ ನಿವಾಸಿಗಳ ನರಸಂಹಾರ ಹಾಗೂ ಗುಲಾಮಗಿರಿಯನ್ನು ಸಮರ್ಥಿಸಲು ಉಪಯೋಗಿಸಿದರು.
ಚರ್ಚ್ ಮತ್ತು ಪೋಪ್ ಇವರ ಈ ಆದೇಶವನ್ನು ಉಪಯೋಗಿಸಿ ಪೋರ್ಚುಗೀಸ್, ಸ್ಪಾನಿಶ್ ಹಾಗೂ ಬ್ರಿಟಿಷ ಆಡಳಿತದವರು ಅಮಾನವೀಯ ಅಪರಾಧ ಮಾಡಿದರು ! ಪೋಪ್‌ನ ಆದೇಶದಲ್ಲಿ ಮುಂದಿನಂತೆ ಹೇಳಲಾಗಿತ್ತು, ‘ಪತ್ತೆ ಹಚ್ಚಿದ ಹೊಸ ಭೂಮಿಯಲ್ಲಿನ ಮೂಲ ನಿವಾಸಿಗರನ್ನು ವಶಪಡಿಸಿಕೊಂಡು ಅವರನ್ನು ನಮ್ಮ ಶ್ರದ್ಧೆಯಲ್ಲಿ ತರಲು ಪ್ರಯತ್ನಿಸಿ.’ ಇದರ ಅರ್ಥ, ಅವರನ್ನು ಮತಾಂತರಿಸಿ ಅದರ ಆಧಾರದಲ್ಲಿ ‘ಕ್ರೈಸ್ತ ಸಾಮ್ರಾಜ್ಯ’ವನ್ನು ಸ್ಥಾಪಿಸಿ. ಇದರಿಂದ ಸ್ಪಷ್ಟವಾಗುವ ಅಂಶವೆಂದರೆ, ಪಾಶ್ಚಿಮಾತ್ಯರು ಭಾರತದಲ್ಲಿ ಕೇವಲ ವ್ಯಾಪಾರಕ್ಕಾಗಿ ಪ್ರವೇಶಿಸದೇ ಅವರ ಧರ್ಮಗುರುಗಳ ಆದೇಶದಂತೆ ‘ಕಬಳಿಸಿದ ಭೂಮಿಯ ಸಂಸ್ಕೃತಿ, ಧರ್ಮವನ್ನು ನಾಶಗೊಳಿಸಿ ಅಲ್ಲಿ ಕ್ರೈಸ್ತ ಪಂಥವನ್ನು ಸ್ಥಾಪಿಸುವುದು’, ಎಂಬ ಉದ್ದೇಶದಿಂದ ಬಂದಿದ್ದರು.
ಅನಂತರ ೧೫೪೨ ರಲ್ಲಿ ಫ್ರಾನ್ಸಿಸ್ ಝೇವಿಯರ್ (ನಂತರ ಅವನಿಗೆ ಸೇಂಟ್ ಝೇವಿಯರ್ ಎಂಬ ಬಿರುದನ್ನು ನೀಡಲಾಯಿತು) ಗೋವಾಕ್ಕೆ ಬಂದನು ಹಾಗೂ ಅವನು ಮತಾಂತರಕ್ಕಾಗಿ ಗೋವಾದಲ್ಲಿಯೂ ಇನ್ಕ್ವಿಝಿಶನ್‌ನ (ಧರ್ಮ ಸಮೀಕ್ಷಣ ಸಭೆಗಳ) ಅಡಿಪಾಯ ಹಾಕಿದನು. ಅದರಲ್ಲಿ ಸಾವಿರಾರು ಅಲ್ಲ, ಲಕ್ಷೋಪಲಕ್ಷ ಜ್ಯೂ, ಮುಸಲ್ಮಾನ, ಹಿಂದೂ ಮತ್ತು ನವಕ್ರೈಸ್ತರನ್ನು ಅಮಾನವೀಯವಾಗಿ ಹಿಂಸಿಸಲಾಯಿತು. ೮.೨.೧೫೪೫ ರಂದು ‘ಸೊಸೈಟಿ ಆಫ್ ಜೀಸಸ್’ ಈ ಸಂಸ್ಥೆಗೆ ಬರೆದ ಪತ್ರದಲ್ಲಿ ಫ್ರಾನ್ಸಿಸ್ ಝೇವಿಯರ್ ಮಲಬಾರ್‌ನ ದಡದಲ್ಲಿ ನಡೆದಿರುವ ಮತಾಂತರವನ್ನು ವರ್ಣಿಸಿದ್ದಾನೆ, ‘ಬಾಪ್ತಿಸ್ಮಾ ಆದ ನಂತರ ಈ ನವಕ್ರೈಸ್ತರು ತಮ್ಮ ತಮ್ಮ ಮನೆಗೆ ತೆರಳುತ್ತಾರೆ ಹಾಗೂ ಮಕ್ಕಳು-ಮರಿ ಮತ್ತು ಸಂಪೂರ್ಣ ಕುಟುಂಬದೊಂದಿಗೆ ಪುನಃ ಬರುತ್ತಾರೆ ಹಾಗೂ ಅವರಿಗೂ ಬಾಪ್ತಿಸ್ಮಾ ಸ್ವೀಕರಿಸಲು ಹೇಳುತ್ತಾರೆ. ಅನಂತರ ನಾನು ಅವರಿಗೆ ನಕಲಿ ದೇವರ ದೇವಸ್ಥಾನಗಳನ್ನು ಉರುಳಿಸಲು ಹಾಗೂ ಮೂರ್ತಿಗಳನ್ನು ಭಗ್ನ ಮಾಡಲು ಆದೇಶ ನೀಡುತ್ತೇನೆ. ಯಾವ ಮೂರ್ತಿಗಳಿಗೆ ಈ ಜನರು ಪೂಜೆ ಮಾಡಿದ್ದರೋ, ಅವರಿಂದಲೇ ಆ ಮೂರ್ತಿಗಳನ್ನು ಭಗ್ನ ಮಾಡಿಸುವಾಗ, ಅವರ ಮಂದಿರಗಳನ್ನು ಉರುಳಿಸುವ ದೃಶ್ಯವನ್ನು ನೋಡುವಾಗ ನನಗೆ ಎಷ್ಟು ಆನಂದವಾಗುತ್ತಿತ್ತು ಎಂದರೆ ಅದನ್ನು ಶಬ್ದಗಳಲ್ಲಿ ವರ್ಣಿಸಲು ಸಾಧ್ಯವಿಲ್ಲ.’
ಫ್ರಾನ್ಸಿಸ್ ಝೇವಿಯರನ ಇವೆಲ್ಲ ಮತಾಂತರ ಪೋರ್ಚುಗೀಸ್ ಆಡಳಿತ ಮತ್ತು ಕ್ರೈಸ್ತ ಪಂಥದ ಪ್ರಭಾವ ಹೆಚ್ಚಿಸಲಿಕ್ಕಾಗಿಯೆ ಇತ್ತು. ೨೦ ಜನವರಿ ೧೫೪೮ ರಂದು ಕೊಚ್ಚಿನ್‌ನಿಂದ ಬರೆದ ಪತ್ರದಲ್ಲಿ ಅವನ ಸ್ಪಷ್ಟ ಹೇಳಿಕೆಗಳಿವೆ. ಆತ ಹೇಳುತ್ತಾನೆ, ‘ಸರಕಾರದ ಸಕ್ರಿಯ ಸಹಾಯವಿಲ್ಲದೇ ಭಾರತೀಯರನ್ನು ಕೆಥೊಲಿಕ್ ಧರ್ಮಕ್ಕೆ ತರುವುದು ಅಸಾಧ್ಯವಿತ್ತು.’ ರಾಜ್ಯ ವಿಸ್ತಾರಕ್ಕಾಗಿ ಅವನು ಮತಾಂತರವನ್ನು ಉಪಯೋಗಿಸುತ್ತಿದ್ದನು, ಅದೇ ರಾಜ್ಯ ವಿಸ್ತಾರದ ಪದ್ಧತಿ ಇಂದಿನ ಪ್ರಜಾಪ್ರಭುತ್ವದಲ್ಲೂ ಮತಾಂತರದ ಆಧಾರದಲ್ಲಿ ಉಪಯೋಗಿಸಲಾಗುತ್ತದೆ. (೨೩.೧೦.೨೦೨೪)
(ಆಧಾರ : ಸಾಪ್ತಾಹಿಕ ‘ಹಿಂದೂಸ್ಥಾನ ಪೋಸ್ಟ್’ನ ದೀಪಾವಳಿ ವಿಶೇಷಾಂಕ)
(ಮುಂದುವರಿಯುವುದು)