Allahabad HC Judge Statement : ಭಾರತ ಬಹುಸಂಖ್ಯಾತರ ಇಚ್ಛೆಯಂತೆ ಕೆಲಸ ಮಾಡಲಿದೆ ! –  ಅಲಹಾಬಾದ್ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಶೇಖರ ಯಾದವ 

ಸಮಾನ ನಾಗರೀಕ ಕಾನೂನಿನ ಕುರಿತು ಅಲಹಾಬಾದ್ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಶೇಖರ ಯಾದವ ಹೇಳಿಕೆ

ಪ್ರಯಾಗರಾಜ (ಉತ್ತರಪ್ರದೇಶ) – ಇದು ಹಿಂದುಸ್ಥಾನ ಮತ್ತು ಈ ದೇಶದಲ್ಲಿ ವಾಸಿಸುವ ಬಹುಸಂಖ್ಯಾತರ ಇಚ್ಛೆಯಯಂತೆ ನಡೆಯಲಿದೆ, ಇದನ್ನು ಹೇಳಲು ನನಗೆ ಸ್ವಲ್ಪವೂ ಸಂಕೋಚ ಆಗುವುದಿಲ್ಲ. ಇದು ಕಾನೂನು ಇರುವುದು. ಉಚ್ಚ ನ್ಯಾಯಾಲಯದ ನ್ಯಾಯಾಧೀಶನೆಂದು ನಾನು ಇದನ್ನು ಮಾತನಾಡುತ್ತಿಲ್ಲ, ಬದಲಾಗಿ ಕಾನೂನಿನಲ್ಲೇ ಬಹುಸಂಖ್ಯಾತರ ಪ್ರಕಾರ ಕಾರ್ಯನಿರ್ವಹಿಸುತ್ತದೆ. ಇದಕ್ಕೆ ನೀವು ಕುಟುಂಬ ಅಥವಾ ಸಮಾಜ ಇದರ ಸಂದರ್ಭದಲ್ಲಿ ನೋಡಿದರೆ, ಅದು ಬಹುಸಂಖ್ಯಾತರ ಕಲ್ಯಾಣ ಮತ್ತು ಆನಂದ ಸುನಿಶ್ಚಿತಗೊಳಿಸಲಾಗುತ್ತದೆ, ಅದನ್ನೇ ಸ್ವೀಕರಿಸಲಾಗುತ್ತದೆ, ಎಂದು ಅಲಹಾಬಾದ್ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಶೇಖರ ಕುಮಾರ ಯಾದವ ಇವರು ‘ಹಿಂದುಗಳ ಹಿತಕ್ಕನುಗುಣವಾಗಿ ದೇಶ ಮುಂದುವರೆಯುವುದು’, ಎಂದು ಹೇಳಿದರು. ಅವರು ವಿಶ್ವ ಹಿಂದೂ ಪರಿಷತ್ತಿನ ಕಾನೂನು ಕಕ್ಷೆಯಿಂದ ಅಲಹಾಬಾದ್ ಉಚ್ಚ ನ್ಯಾಯಾಲಯದ ಲೈಬ್ರರಿ ಹಾಲಿನಲ್ಲಿ ನ್ಯಾಯವಾದಿ ಮತ್ತು ವಿಶ್ವ ಹಿಂದೂ ಪರಿಷತ್ತಿನ ಕಾರ್ಯಕರ್ತರಿಗಾಗಿ ಸಮಾನ ನಾಗರೀಕ ಕಾನೂನಿನ ಸಂದರ್ಭದಲ್ಲಿ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು. ನ್ಯಾಯಮೂರ್ತಿ ದಿನೇಶ ಪಾಠಕ ಇವರು ಕಾರ್ಯಕ್ರಮದ ಉದ್ಘಾಟನೆ ಮಾಡಿದರು.

ನ್ಯಾಯಮೂರ್ತಿ ಶೇಖರ ಕುಮಾರ ಯಾದವ ಇವರು ಮಂಡಿಸಿರುವ ಅಂಶಗಳು

೧. ಸಮಾನ ನಾಗರಿಕ ಕಾನೂನು ಆದಷ್ಟು ಬೇಗನೆ ಜಾರಿಗೊಳ್ಳುವುದು !

ನಾನು ನಿಮಗೆ ದೃಢವಾಗಿ ಹೇಳುತ್ತೇನೆ, ಸಮಾನ ನಾಗರೀಕ ಕಾನೂನು ಆದಷ್ಟು ಬೇಗನೆ ಜಾರಿ ಆಗಿರುವುದು ನಿಮಗೆ ಕಾಣುವುದು. ಒಂದು ದೇಶ ಇದ್ದರೆ ಒಂದೇ ಕಾನೂನು ಇರುವುದು. ಯಾರೋ ವಂಚನೆ ಮಾಡುವ ಪ್ರಯತ್ನ ಮಾಡುತ್ತಾರೆ ಅವರು ಬಹಳ ಕಾಲ ಉಳಿಯಲಾರರು ಈ ದಿನ ದೂರವಿಲ್ಲ ಇದು ಸ್ಪಷ್ಟವಾಗಲಿದೆ.

೨. ಪುರುಷನಿಗೆ ೪ ಪತ್ನಿಗಳ ಇರುವಂತಹ ಅಧಿಕಾರ ನಡೆಯುವುದಿಲ್ಲ !

ನಮ್ಮ ‘ಪರ್ಸನಲ್ ಲಾ ಇದಕ್ಕೆ ಅನುಮತಿ ನೀಡುವುದಿಲ್ಲ’ ಎಂದು ಹೇಳಿದರೆ ಅದನ್ನು ಒಪ್ಪಲಾಗುವುದಿಲ್ಲ. ಮಹಿಳೆಯರಿಗೆ ಪಾಲನೆ ಪೋಷಣೆ ದೊರೆಯಬೇಕು. ಪತ್ನಿಗೂ ಅನೇಕ ಪುರುಷರ ಜೊತೆಗೆ ವಿವಾಹ ಮಾಡಿಕೊಳ್ಳಲು ಅನುಮತಿ ಇಲ್ಲ ಮತ್ತು ಪುರುಷರಿಗೂ ೪ ಪತ್ನಿಯರು ಹೀಗೆ ನಡೆಯುವುದಿಲ್ಲ. ಇದು ತಾರತಮ್ಯ ನಿರ್ಮಾಣ ಮಾಡುತ್ತದೆ. ಇದು ಸಂವಿಧಾನದ ವಿರುದ್ಧವಾಗಿದೆ.

೩. ಮಹಿಳೆಯರನ್ನು ಅವಮಾನಿಸಲಾಗುವುದಿಲ್ಲ !

ಮಹಿಳೆಯರ ಜೊತೆಗೆ ಕೆಟ್ಟದಾಗಿ ವರ್ತಿಸಲಾಗದು. ಹಿಂದೂ ಧರ್ಮ ಗ್ರಂಥ ಮತ್ತು ವೇದಗಳಲ್ಲಿ ದೇವಿಯ ಸ್ಥಾನ ನೀಡಿರುವ ಮಹಿಳೆಯರನ್ನು ನೀವು ಅವಮಾನಿಸಲು ಸಾಧ್ಯವಿಲ್ಲ. ನೀವು ೪ ಜನ ಪತ್ನಿಯರನ್ನು ಇಟ್ಟುಕೊಳ್ಳುವುದು, ‘ಹಲಾಲ'( ಮೊದಲ ಪತಿಯು ತಲಾಕ ನೀಡಿದ ನಂತರ ಅವನ ಜೊತೆಯೇ ವಿವಾಹ ಮಾಡಿಕೊಳ್ಳುವುದಿದ್ದರೆ, ಆಗ ಮಹಿಳೆಯು ಬೇರೆ ಯಾರ ಜೊತೆಗೋ ವಿವಾಹ ಮಾಡಿಕೊಂಡು ಅವನ ಜೊತೆಗೆ ದೈಹಿಕ ಸಂಬಂಧ ಇರಿಸಿದ ನಂತರ ಅವನಿಂದ ತಲಾಕ ಪಡೆದ ನಂತರ ಮೊದಲ ಪತಿಯ ಜೊತೆಗೆ ವಿವಾಹ ಮಾಡಿಕೊಳ್ಳುವ ಪದ್ಧತಿ) ಮಾಡುವುದು ಅಥವಾ ಮೂರು ಬಾರಿ ತಲಾಕ ಹೇಳುವ ಅಧಿಕಾರ ಇಲ್ಲ. ಮಹಿಳೆಯರನ್ನು ಪೋಷಿಸುವ ಅಂಶ ನಿರಾಕರಿಸಲು ಸಾಧ್ಯವಿಲ್ಲ ಮತ್ತು ಇತರ ದೌರ್ಜನ್ಯ ಮಾಡಬಾರದು.

೪. ಅಂದಿನ ಕೇಂದ್ರ ಸರಕಾರ ಶಾಹಬಾನು ಪ್ರಕರಣದಲ್ಲಿ ಕಾನೂನು ಬದಲಾಯಿಸಿತು !

ಸರ್ವೋಚ್ಚ ನ್ಯಾಯಾಲಯದಿಂದ ಸಂತ್ರಸ್ತ ಶಾಬಾನುಗೆ ಉದರ ನಿರ್ವಾಹಕ್ಕೆ ಹಣ ನೀಡಲು ಒಪ್ಪಿಕೊಂಡಿತ್ತು; ಆದರೆ ಅಂದಿನ ಕೇಂದ್ರ ಸರಕಾರ ಕೆಲವು ಜನರನ್ನು ಓಲೈಕೆಗಾಗಿ, ಉದರ ನಿರ್ವಾಹದ ಅಧಿಕಾರಕ್ಕಾಗಿ ಸರ್ವೋಚ್ಚ ನ್ಯಾಯಾಲಯದ ಆದೇಶದ ವಿರುದ್ಧ ಇನ್ನೊಂದು ಕಾನೂನು ರೂಪಿಸಲು ಅನಿವಾರ್ಯ ಗೊಳಿಸಿತು.

೫. ಪ್ರತಿಯೊಂದು ಧರ್ಮದಲ್ಲಿನ ಕೆಟ್ಟ ಪದ್ಧತಿಗಳನ್ನು ದೂರಗೊಳಿಸಬೇಕು !

ಕೇವಲ ರಾಷ್ಟ್ರೀಯ ಸ್ವಯಂಸೇವಕ ಸಂಘ, ವಿಶ್ವ ಹಿಂದೂ ಪರಿಷತ್ ಅಥವಾ ಹಿಂದೂಗಳು ‘ಸಮಾನ ನಾಗರೀಕ ಕಾನೂನಿನ’ ಪರವಾಗಿ ವಕೀಲಿ ಮಾಡುತ್ತಿಲ್ಲ. ದೇಶದ ಸರ್ವೋಚ್ಚ ನ್ಯಾಯಾಲಯ ಕೂಡ ಇದನ್ನು ಸಮರ್ಥಿಸಿದೆ. ಹಿಂದೂ ಸಮಾಜದಲ್ಲಿ ಸತಿ ಪದ್ಧತಿ, ಬಾಲ್ಯವಿವಾಹ ಇವುಗಳಂತಹ ಅನೇಕ ಕೆಟ್ಟ ಪದ್ಧತಿಗಳಿಂದ ಮುಕ್ತಗೊಂಡಿದೆ. ಸಮಯದಲ್ಲಿಯೇ ತಪ್ಪು ಸ್ವೀಕರಿಸಿ ತಿದ್ದಿಕೊಳ್ಳುವುದರಲ್ಲಿ ಯಾವುದೇ ತಪ್ಪಿಲ್ಲ. ನಾನು ಏನು ಮಾತನಾಡುತ್ತಿದ್ದೇನೆ, ಅದು ಯಾವುದೇ ವಿಶಿಷ್ಟ ಧರ್ಮಕ್ಕಾಗಿ ಅಲ್ಲ, ಇದು ಎಲ್ಲರಿಗೂ ಅನ್ವಯಿಸುತ್ತದೆ. ಪ್ರತಿಯೊಂದು ಧರ್ಮದಲ್ಲಿನ ತಮ್ಮ ಕೆಟ್ಟ ಪದ್ಧತಿಗಳಿಂದ ದೂರ ಸರಿಯಬೇಕು. ಹಾಗೆ ಆಗದಿದ್ದರೆ, ದೇಶ ತಮ್ಮ ಎಲ್ಲಾ ನಾಗರಿಕರಿಗಾಗಿ ಸಮಾನ ಕಾನೂನು ಜಾರಿಗೊಳಿಸುವುದು.

೬. ಹಿಂದೂ ಸಹಿಷ್ಣು ಹಾಗೂ ಇತರರು ಅಸಹಿಷ್ಣು !

ನಮ್ಮ ದೇಶದಲ್ಲಿ ಬಾಲ್ಯದಿಂದಲೂ ಎಲ್ಲಾ ಸಜೀವಿಗಳ ಹಾಗೂ ಚಿಕ್ಕ ಪ್ರಾಣಿಗಳನ್ನು ಕೂಡ ಗೌರವಿಸುವ ಮತ್ತು ಅವುಗಳಿಗೆ ನೋವು ಆಗದಂತೆ ನಡೆದುಕೊಳ್ಳುವುದು ಕಲಿಸುತ್ತದೆ. ಈ ಕಲಿಕೆ ನಮ್ಮ ವ್ಯಕ್ತಿತ್ವದ ಒಂದು ಭಾಗವಾಗಿದೆ; ಆದ್ದರಿಂದಲೇ ನಾವು ಇತರರ ದುಃಖದಲ್ಲಿ ದುಃಖ ಅನುಭವಿಸುತ್ತೇವೆ. ಆಗ ನಾವು ಹೆಚ್ಚು ಸಹನಶೀಲರು ಮತ್ತು ದಯಾವಂತರಾಗುತ್ತೇವೆ; ಆದರೆ ಇದು ಪ್ರತಿಯೊಬ್ಬರ ಸಂದರ್ಭದಲ್ಲಿ ನಡೆಯುವುದಿಲ್ಲ. ನಮ್ಮ ಸಂಸ್ಕೃತಿಯಲ್ಲಿ ಮಕ್ಕಳಿಗೆ ದೇವರ ಮಾರ್ಗದರ್ಶನದಲ್ಲಿ ಬೆಳೆಸಲಾಗುತ್ತದೆ. ವೇದಮಂತ್ರಗಳು ಕಲಿಸಲಾಗುತ್ತದೆ ಮತ್ತು ಅಹಿಂಸೆಯ ಸಂಸ್ಕಾರ ನೀಡುತ್ತೇವೆ. ಆದರೆ ಇತರ ಕೆಲವು ಸಂಸ್ಕೃತಿಯಲ್ಲಿ ಮಕ್ಕಳು ಪ್ರಾಣಿ ಹತ್ಯೆ ನೋಡುತ್ತಾ ಬೆಳೆಯುತ್ತಾನೆ, ಆದ್ದರಿಂದ ಅವರಿಂದ ಸಹಿಷ್ಣುತೆ ಮತ್ತು ಕರುಣೆ ವಿಕಸಿತ ಗೊಳ್ಳುವ ಅಪೇಕ್ಷೆ ಮಾಡುವುದು ಕಠಿಣವಾಗುತ್ತದೆ.

೭. ಭಾರತವನ್ನು ಮಾತೆ ಎಂದು ನಂಬಿದ್ದೇವೆ ಮತ್ತು ಆಕೆಯ ರಕ್ಷಣೆಗಾಗಿ ಪ್ರಾಣ ನೀಡಲು ಸಿದ್ದನಿರುವವನೇ ಹಿಂದೂ !

ಹಿಂದೂ ಎಂದರೆ ಕೇವಲ ಗಂಗಾ ಸ್ನಾನ ಮಾಡುವ ಮಟ್ಟಿಗೆ ಸೀಮಿತವಿಲ್ಲ ಅಥವಾ ಚಂದನ ಹಚ್ಚಿಕೊಂಡರೆ ಹಿಂದೂ ಹೀಗೆ ಆಗುವುದಿಲ್ಲ. ಯಾರು ತನ್ನ ಈ ನೆಲವನ್ನು ತನ್ನ ತಾಯಿಯನ್ನು ನಂಬಿದ್ದಾನೆ ಮತ್ತು ಕಷ್ಟದ ಸಮಯದಲ್ಲಿ ರಾಷ್ಟ್ರಕ್ಕಾಗಿ ತನ್ನ ಪ್ರಾಣ ನೀಡಲು ಸಿದ್ದನಿರುತ್ತಾನೆ, ಅವನು ಕುರಾನ್ ಅಥವಾ ಬೈಬಲ್ ನಲ್ಲಿ ವಿಶ್ವಾಸ ಇಡುತ್ತಿದ್ದರು ಅವನು ಹಿಂದೂ ಆಗಿದ್ದಾನೆ. ಇದನ್ನು ಕೇವಲ ಹಿಂದೂ ಧರ್ಮಿಯರೇ ಹೀಗೆ ಹೇಳಲು ಸಾಧ್ಯ, ಎಂದು ಸ್ವಾಮಿ ವಿವೇಕಾನಂದರ ವಿಶ್ವಾಸವಿತ್ತು.

೮. ಮುಸಲ್ಮಾನರು ಹಿಂದೂ ಸಂಸ್ಕೃತಿಯ ಬಗ್ಗೆ ಆಗೌರವ ತೋರಬಾರದು !

ವಿವಾಹ ಮಾಡುವಾಗ ನೀವು (ಮುಸಲ್ಮಾನರು) ಅಗ್ನಿಯ ಸುತ್ತ ಏಳು ಸುತ್ತು ಹಾಕಿ ಎಂಬ ಅಪೇಕ್ಷೆ ನಮ್ಮದಲ್ಲ. ನೀವು ಗಂಗೆಯಲ್ಲಿ ಮುಳುಗಬೇಕು, ಹೀಗೆ ಕೂಡ ನಮ್ಮ ಇಚ್ಛೆ ಇಲ್ಲ; ಆದರೆ ನೀವು ದೇಶದ ಸಂಸ್ಕೃತಿಯನ್ನು, ದೇವರನ್ನು ಮತ್ತು ಮಹಾನ ನಾಯಕರನ್ನು ಅಗೌರವಿಸಬಾರದು, ಇದೇ ನಮ್ಮ ಅಪೇಕ್ಷೆಯಾಗಿದೆ.

೯. ಹಿಂದುಗಳು ತಮ್ಮನ್ನು ತಾವು ಹೇಡಿಗಳೆಂದು ತಿಳಿಯಬಾರದು !

ಹಿಂದೂಗಳು ಅಹಿಂಸಕರು ಮತ್ತು ದಯಾವಂತರು ಇರಬಹುದು, ಆದರೆ ‘ಅವರು ಹೇಡಿಗಳೆಂದು’ ತಿಳಿಯಬಾರದು. ತಮ್ಮ ಮಕ್ಕಳಿಗೆ ದೇಶ, ನಮ್ಮ ಧಾರ್ಮಿಕ ಪದ್ಧತಿಗಳು ಮತ್ತು ನಮ್ಮ ಮಹಾನ ವ್ಯಕ್ತಿತ್ವದ ಮಾಹಿತಿ ನೀಡಬೇಕು. ಅವರಿಗೆ ಇದನ್ನು ಕಲಿಸಬೇಕು.

೧೦. ಹೀಗಾದರೆ ಭಾರತ ಬಾಂಗ್ಲಾದೇಶ ಅಥವಾ ತಾಲಿಬಾನ್ ಆಗಲು ಸಮಯ ಬೇಕಾಗಿಲ್ಲ !

‘ಏಕ್ ಹೈ ತೋ ಸೆಫ್ ಹೈ’ (ಸಂಘಟಿತರಾಗಿದ್ದರೆ, ಮಾತ್ರ ಸುರಕ್ಷಿತ) ಈ ಮೌಲ್ಯ ರೂಡಿಸಿಕೊಂಡರೆ ಯಾರು ನಮಗೆ ಹಾನಿ ಮಾಡಲು ಸಾಧ್ಯವಿಲ್ಲ, ಆದರೆ ಇದೇ ಭಾವನೆ ಹಿಸುಕಿದರೆ, ಭಾರತ ಕೂಡ ಬಾಂಗ್ಲಾದೇಶ ಅಥವಾ ತಾಲಿಬಾನವಾಗಲು ಸಮಯ ಬೇಕಾಗಿಲ್ಲ. ತಮ್ಮನ್ನು ಶಕ್ತಿಶಾಲಿ ಮಾಡುವುದಕ್ಕಾಗಿ ಜನರಲ್ಲಿ ಸಂದೇಶ ಪಸರಿಸುವ ಆವಶ್ಯಕತೆ ಇದೆ.

‘ಹಿಂದೂ ಸಂಘಟನೆಯ ಕಾರ್ಯಕ್ರಮದಲ್ಲಿ ಪ್ರಸ್ತುತ ನ್ಯಾಯಮೂರ್ತಿಗಳು ಭಾಗವಹಿಸಿರುವುದು ಲಚ್ಚಾಸ್ಪದ !'(ಅಂತೆ) – ನ್ಯಾಯವಾದಿ ಇಂದಿರಾ ಜಯ ಸಿಂಹ ಇವರಿಂದ ವಾಗ್ದಾಳಿ

ಹಿರಿಯ ನ್ಯಾಯವಾದಿ ಇಂದಿರಾ ಜಯ ಸಿಂಹ ಇವರು ನ್ಯಾಯಮೂರ್ತಿ ಶೇಖರ ಯಾದವ ಇವರ ಕುರಿತು ವಾಗ್ದಾಳಿ ನಡೆಸುತ್ತಾ ಎಕ್ಸ್ ನಲ್ಲಿ ಒಂದು ಪೋಸ್ಟ್ ಮಾಡಿದ್ದಾರೆ. ಇದರಲ್ಲಿ ಅವರು, ಒಂದು ಹಿಂದೂ ಸಂಘಟನೆಯು ತಮ್ಮ ರಾಜಕೀಯ ನೀತಿ ಅಳವಡಿಸಿ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಓರ್ವ ಪ್ರಸ್ತುತ ನ್ಯಾಯಮೂರ್ತಿಗಳು ಸಕ್ರಿಯವಾಗಿ ಭಾಗವಹಿಸುವುದು ಲಜಾಸ್ಪದವಾಗಿದೆ ಎಂದು ಹೇಳಿದ್ದಾರೆ. (ನ್ಯಾಯಮೂರ್ತಿ ಇವರು ಕಾನೂನಿನ ಪರಿಧಿಯಲ್ಲಿ ಸತ್ಯವಾಗಿರುವಂತಹ ಅಂಶಗಳನ್ನು ಸ್ಪಷ್ಟವಾಗಿ ಮಂಡಿಸಿರುವುದರಿಂದ ಕೆಲವು ಜನರಿಗೆ ಹೊಟ್ಟೆ ಶೂಲೆ ಆಗಿದೆ, ಇದರಲ್ಲಿ ಅನುಮಾನವಿಲ್ಲ, ಇಂತಹವರ ಕಾಲ ಮುಗಿದಿದೆ, ಇದನ್ನು ಅವರು ನೆನಪಿನಲ್ಲಿ ಇಟ್ಟುಕೊಳ್ಳಬೇಕು ! – ಸಂಪಾದಕರು)

ನ್ಯಾಯಮೂರ್ತಿ ಯಾದವ ಇವರು ಗೋವನ್ನು ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸಲು ಸೂಚಿಸಿದ್ದರು !

ನ್ಯಾಯಮೂರ್ತಿ ಯಾದವ ಇವರು, ೨೦೨೧ ರಲ್ಲಿ ಗೋವನ್ನು ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸುವ ಕುರಿತಾದ ಹೇಳಿಕೆ ನೀಡಿದ್ದರು.’ಗೋವು ಇದು ಒಂದು ಏಕೈಕ ಪ್ರಾಣಿ ಇರುವುದು, ಅದು ಶ್ವಾಸದ ಮೂಲಕ ಆಕ್ಸಿಜನ್ ತೆಗೆದುಕೊಳ್ಳುತ್ತದೆ ಮತ್ತು ವಿಸರ್ಜಿಸುತ್ತದೆ,’ ಎಂದು ಅವರು ಹೇಳಿದ್ದರು. ಹಿಂದೂಗಳ ಮೂಲಭೂತ ಅಧಿಕಾರದಲ್ಲಿ ಗೋರಕ್ಷಣೆಯ ಸಮಾವೇಶ ಮಾಡಬೇಕು.’ ಗೋ ಹತ್ಯೆಯ ಆರೋಪ ಇರುವ ಸಂಭಲದಲ್ಲಿನ ಓರ್ವ ಮುಸಲ್ಮಾನನಿಗೆ ಜಾಮೀನ ನೀಡಲು ನಿರಾಕರಿಸುತ್ತಾ ಅವರು ಈ ಹೇಳಿಕೆ ನೀಡಿದ್ದರು.

೨೦೨೧ ರಲ್ಲಿನ ಒಂದು ಆದೇಶದಲ್ಲಿ ನ್ಯಾಯಮೂರ್ತಿ ಯಾದವ ಇವರು ಸಂಸತ್ತಿನ ಕಾನೂನಿನ ಮೂಲಕ ಹಿಂದುಗಳ ದೇವತೆಯ ಪೌರಾಣಿಕ ಗ್ರಂಥಗಳಿಗೆ ರಾಷ್ಟ್ರೀಯ ಗೌರವ ನೀಡಬೇಕೆಂದು, ಸೂಚಿಸಿದ್ದರು.

ಸಂಪಾದಕೀಯ ನಿಲುವು

ಭಾರತದ ಇತಿಹಾಸದಲ್ಲಿ ಮೊದಲ ಬಾರಿಗೆ ಓರ್ವ ಹುದ್ದೆಯಲ್ಲಿರುವ ನ್ಯಾಯಮೂರ್ತಿಗಳು ಈ ರೀತಿಯ ಹೇಳಿಕೆ ನೀಡಿದ್ದಾರೆ. ಇದರಿಂದ, ಕಾಲ ಬದಲಾಗಿದೆ ಎಂಬುದು ಗಮನದಲ್ಲಿಟ್ಟುಕೊಳ್ಳಬೇಕು. ಕಾನೂನಿನ ಪರೀಧಿಯಲ್ಲಿ ಈ ರೀತಿ ಹೇಳಿಕೆ ನೀಡಬಹುದು; ಆದರೆ ಹಿಂದುಗಳ ಮನಸ್ಸಿನಲ್ಲಿ ಭಯ ನಿರ್ಮಾಣ ಮಾಡಿರುವುದರಿಂದ ಯಾರು ಈ ರೀತಿ ಮಾತನಾಡುವ ಧೈರ್ಯ ತೋರುತ್ತಿರಲಿಲ್ಲ, ಅದು ಈಗ ತೋರುತ್ತಿದ್ದಾರೆ !