ಈಗ ಬಾಂಗ್ಲಾ ಸೈನಿಕರಿಂದಲೂ ಹಿಂದೂ ದ್ವೇಷಿ ಕೃತ್ಯ!ಭಾರತದ ಗಡಿ ಭದ್ರತಾ ಪಡೆಯ ಸೈನಿಕರು ಅವರನ್ನು ಹೊರದಬ್ಬಿದರು |
ಗೌಹಾಟಿ (ಆಸ್ಸಾಂ) – ಬಾಂಗ್ಲಾದೇಶದ ಸಿಲ್ಹೆಟ್ ವಿಭಾಗದ ಝಾಕಿಗಂಜ್ ಪೋಸ್ಟನಲ್ಲಿ ನಿಯೋಜಿಸಲಾದ ಬಾಂಗ್ಲಾದೇಶ ಗಡಿ ಕಾವಲು ಪಡೆ ಸೈನಿಕರು ಕುಶಿಯಾರಾ ನದಿಯನ್ನು ದಾಟಿ ಅಸ್ಸಾಂನ ಶ್ರೀಭೂಮಿ ಜಿಲ್ಲೆಗೆ ನುಗ್ಗಿದರು. ಇಲ್ಲಿನ ನದಿ ತೀರದ ಅರಣ್ಯ ರಸ್ತೆಯಲ್ಲಿರುವ ಮಾತಾ ಮಾನಸಾದೇವಿಯ ಪುರಾತನ ದೇವಾಲಯದ ಜೀರ್ಣೋದ್ಧಾರ ಕಾರ್ಯ ಮಾಡುತ್ತಿದ್ದ ಕಾರ್ಮಿಕರಿಗೆ ಬೆದರಿಸಿ ಕಾರ್ಯವನ್ನು ಸ್ಥಗಿತಗೊಳಿಸಿದರು. ಈ ವಿಷಯ ತಿಳಿದ ಭಾರತದ ಗಡಿ ಭದ್ರತಾ ಪಡೆಯ ಯೋಧರು ಸ್ಥಳಕ್ಕೆ ಬಂದು ವಿರೋಧಿಸಿದರು. ಆದರೂ, ಗಡಿ ಕಾವಲು ಪಡೆಯ ಯೋಧರು ಪ್ರತಿಭಟನೆ ಮುಂದುವರಿಸಿದಾಗ ಅವರ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ ಬಳಿಕ, ಸೈನಿಕರು ಅಲ್ಲಿಂದ ಹೊರಟು ಹೋದರು. ಈ ನದಿಯ ಎರಡೂ ಬದಿಗಳಲ್ಲಿ 150 ಮೀಟರ್ ಪ್ರದೇಶವು ನಿರ್ಜನವಾಗಿದೆ. ಇಲ್ಲಿ ಯಾವುದೇ ನಿರ್ಮಾಣ ಕಾರ್ಯಕ್ಕೆ ಅನುಮತಿ ಪಡೆಯಬೇಕಾಗುತ್ತದೆ.
ಸದ್ಯ ಗಡಿ ಭದ್ರತಾ ಪಡೆಯ ಭದ್ರತೆಯಲ್ಲಿ ದೇವಸ್ಥಾನದ ಕಾಮಗಾರಿ ನಡೆಯುತ್ತಿದೆ. ಶ್ರೀಭೂಮಿ ಜಿಲ್ಲೆಯ 94 ಕಿ.ಮೀ. ಗಡಿ ಬಾಂಗ್ಲಾದೇಶದೊಂದಿಗೆ ಸಂಪರ್ಕ ಹೊಂದಿದೆ. ಇದು 43 ಕಿ.ಮೀ. ನದಿ ದಂಡೆ ಇದೆ. ಅಂತಾರಾಷ್ಟ್ರೀಯ ಗಡಿಯಿಂದ 4 ಕಿ.ಮೀ. ಪ್ರದೇಶಕ್ಕೆ ಬೇಲಿ ಹಾಕಲಾಗಿಲ್ಲ.
ಸಂಪಾದಕೀಯ ನಿಲುವುಇದರಿಂದ, ಭಾರತ ಮತ್ತು ಬಾಂಗ್ಲಾದೇಶದ ನಡುವೆ ಈಗ ಪಾಕಿಸ್ತಾನದಂತೆಯೇ ಹಗೆತನ ಆರಂಭವಾಗಿದೆ ಎಂಬುದು ಸ್ಪಷ್ಟವಾಗಿದೆ. ಮುಂದೆ ಇಂತಹ ಘಟನೆಗಳಲ್ಲಿ ಹೆಚ್ಚಳವಾಗಿ ಗಡಿಯಲ್ಲಿ ಬಾಂಗ್ಲಾದೇಶಿ ಸೈನಿಕರಿಂದ ಇಂತಹ ಘಟನೆಗಳು ನಡೆದರೆ ಆಶ್ಚರ್ಯಪಡಬೇಕಾಗಿಲ್ಲ. ಹೀಗೆ ಆಗುವ ಮೊದಲೇ ಭಾರತವು ಬಾಂಗ್ಲಾದೇಶಕ್ಕೆ ತಕ್ಕ ಪಾಠ ಕಲಿಸುವುದು ಆವಶ್ಯಕವಾಗಿದೆ ! |