ಸ್ವಾಮಿ ವಿವೇಕಾನಂದರ ಬೋಧನೆ
ಎಲ್ಲ ದುಷ್ಕ್ರತ್ಯಗಳ ಹಿಂದಿರುವ ಪ್ರೇರಣಾಶಕ್ತಿಯೆಂದರೆ ದುರ್ಬಲತೆ. ಸ್ವಾರ್ಥದ ಮೂಲವೇ ದುರ್ಬಲತೆಯಾಗಿದೆ. ಈ ದುರ್ಬಲತೆಯಿಂದಲೇ ಮನುಷ್ಯನು ಇತರರಿಗೆ ಹಾನಿ ಹಾಗೂ ಕೆಟ್ಟದ್ದನ್ನು ಮಾಡುತ್ತಾನೆ. ಭಯ ಪಡುವ ಮನುಷ್ಯರೇ ಪಾಪವನ್ನು ಮಾಡುತ್ತಿರುತ್ತಾರೆ. ನಿಜವಾದ ವೀರರು ಎಂದೂ ಪಾಪವನ್ನು ಮಾಡುವುದಿಲ್ಲ. ಎಲ್ಲರನ್ನು ಪ್ರೀತಿಸಲು ಪ್ರಯತ್ನಿಸಿ. ಮೋಸ ಮಾಡಿದ್ದರಿಂದ ಯಾವುದೇ ದೊಡ್ಡ ಕಾರ್ಯವಾಗುವುದಿಲ್ಲ. ಪ್ರೀತಿ, ಸತ್ಯನಿಷ್ಠೆ ಹಾಗೂ ಪ್ರಚಂಡ ಉತ್ಯಾಹ ಇವುಗಳ ಮೂಲಕವೇ ಮಹಾನ್ ಕಾರ್ಯವಾಗುತ್ತಿರುತ್ತದೆ.
(ಕೃಪೆ : ‘ಸ್ವಾಮಿ ವಿವೇಕಾನಂದರು ಹೇಳುತ್ತಾರೆ’, ರಾಮಕೃಷ್ಣ ಮಠ, ನಾಗಪುರ.)
ನಮ್ಮೆದುರು ಧ್ಯೇಯವನ್ನು ಇಟ್ಟುಕೊಳ್ಳುವುದು ಹೆಚ್ಚು ಒಳ್ಳೆಯದು !
ತಮ್ಮೆದುರು ಯಾವುದೇ ಧ್ಯೇಯವನ್ನು ಇಟ್ಟಿರುವ ವ್ಯಕ್ತಿಯು ಸಾವಿರಾರು ತಪ್ಪುಗಳನ್ನು ಮಾಡಿದರೆ ಯಾವುದೇ ಧ್ಯೇಯವಿಲ್ಲದ ವ್ಯಕ್ತಿಯು ೫೦ ಸಾವಿರ ತಪ್ಪುಗಳನ್ನುಮಾಡುವನು; ಹಾಗಾಗಿ ತಮ್ಮೆದುರು ಯಾವುದಾದರೂ ಧ್ಯೇಯವನ್ನು ಇಡುವುದು ಹೆಚ್ಚು ಒಳ್ಳೆಯದಾಗಿದೆ.
ನೀವು ವಾಸ್ತವದಲ್ಲಿ ಯಾರು ? ಎಂಬ ಬಗ್ಗೆ ನಿಮಗೆ ಜ್ಞಾನವಿರುತ್ತಿದ್ದರೆ ಎಷ್ಟು ಒಳ್ಳೆಯದಾಗಿರುತ್ತಿತ್ತು ? ನೀವು ಆತ್ಮವಾಗಿದ್ದೀರಿ, ನೀವು ಈಶ್ವರನಾಗಿದ್ದೀರಿ. ಒಂದು ವೇಳೆ ನಾನು ನಿಮ್ಮನ್ನು ಮನುಷ್ಯನೆಂದು ಕರೆದರೆ ನಿಮ್ಮನ್ನು ನಿಂದಿಸಿದಂತೆ ಆಗುತ್ತದೆ.
(ಕೃಪೆ : ‘ಸ್ವಾಮಿ ವಿವೇಕಾನಂದರು ಹೇಳುತ್ತಾರೆ’, ರಾಮಕೃಷ್ಣ ಮಠ, ನಾಗಪುರ.)