ಭಾದ್ರಪದ ಶುಕ್ಲ ಪಕ್ಷ ಚತುರ್ಥಿ (೧೩.೯.೨೦೧೮) ಬಂದಿದೆ ಹಬ್ಬ ಶ್ರೀ ಗಣೇಶನ, ಧರ್ಮಶಾಸ್ತ್ರ ಅರಿತು ಪಡೆಯೋಣ ಕೃಪಾಶೀರ್ವಾದ ಅವನ

ಶ್ರೀ ಗಣೇಶ ಚತುರ್ಥಿಯ ದಿನ ಹಾಗೆಯೇ ಗಣೇಶೋತ್ಸವದ ದಿನಗಳಲ್ಲಿ ಗಣೇಶತತ್ತ್ವವು ದಿನನಿತ್ಯದ ತುಲನೆಯಲ್ಲಿ ಪೃಥ್ವಿಯ ಮೇಲೆ ಒಂದು ಸಾವಿರ ಪಟ್ಟು ಹೆಚ್ಚು ಕಾರ್ಯನಿರತವಾಗಿರುತ್ತದೆ. ಈ ಸಮಯದಲ್ಲಿ ಮಾಡಿದ ಗಣೇಶನ ಉಪಾಸನೆಯಿಂದ ಗಣೇಶತತ್ತ್ವ್ವದ ಹೆಚ್ಚು ಲಾಭವಾಗುತ್ತದೆ.

ಮೂರ್ತಿಭಂಗ

ಪ್ರಾಣಪ್ರತಿಷ್ಠೆಯನ್ನು ಮಾಡುವುದಕ್ಕಿಂತ ಮೊದಲು ಮೂರ್ತಿಯ ಯಾವುದೇ ಅವಯವಕ್ಕೆ ಪೆಟ್ಟಾದರೆ ಅಥವಾ ಮುರಿದರೆ ಬೇರೆ ಮೂರ್ತಿಯನ್ನು ತಂದು ಪೂಜಿಸಬೇಕು.

ಸಾರ್ವಜನಿಕ ಶ್ರೀ ಗಣೇಶೋತ್ಸವ : ಹೇಗಿರಬಾರದು ಮತ್ತು ಹೇಗಿರಬೇಕು ?

ವ್ಯಾಪಾರದ ಉದ್ದೇಶದಿಂದ ಮಾಡಿದ ಜಾಹೀರಾತುಗಳಿಂದ ಆಗುವ ವಿಡಂಬನೆ : ಉದಾ. ‘ಝಂಡು ಬಾಮ್ ಹಚ್ಚುವ’,‘ಸ್ಕೂಟರಿನ ಮೇಲೆ ಸವಾರಿ ಮಾಡುವ’ ಗಣೇಶನನ್ನು ತೋರಿಸುವುದು. ಸಮಾಜಕ್ಕೆ ಅಪಾಯಕಾರಿ ವಿಷಯಗಳ ಪ್ರಸಾರ

ಶ್ರೀ ಗಣೇಶಚತುರ್ಥಿಯ ವ್ರತದ ಬಗ್ಗೆ ಕೇಳಲಾಗುವ ಕೆಲವು ಪ್ರಶ್ನೆ ಮತ್ತು ಅದರ ಉತ್ತರಗಳು

ಅಣ್ಣ ತಮ್ಮಂದಿರೆಲ್ಲರೂ ಒಟ್ಟಿಗೆ ಇದ್ದರೆ, ಅಂದರೆ ಅವರ ದ್ರವ್ಯಕೋಶ (ಖಜಾನೆ) ಮತ್ತು ಪಾಕಶಾಲೆಯು ಒಟ್ಟಿಗೆ ಇದ್ದರೆ ಎಲ್ಲರೂ ಸೇರಿ ಒಂದೇ ಮೂರ್ತಿಯ ಪೂಜೆಯನ್ನು ಮಾಡಬೇಕು; ಆದರೆ ದ್ರವ್ಯಕೋಶ ಮತ್ತು ಪಾಕ ಶಾಲೆಯು ಯಾವುದೇ ಕಾರಣದಿಂದಾಗಿ ವಿಭಕ್ತ (ಬೇರೆ ಬೇರೆ)ವಾಗಿದ್ದರೆ ಪ್ರತಿಯೊಬ್ಬರೂ ಅವರವರ ಮನೆಗಳಲ್ಲಿ ಸ್ವತಂತ್ರವಾಗಿ ಗಣೇಶ ಮೂರ್ತಿಯನ್ನು ಪೂಜಿಸಬೇಕು.

ಶ್ರೀ ಗಣೇಶ ಚತುರ್ಥಿಗಾಗಿ ಪೂಜಿಸುವ ಶ್ರೀ ಗಣೇಶನ ಮೂರ್ತಿಯನ್ನು ಮನೆಗೆ ಹೇಗೆ ತರಬೇಕು ?

ಮೂರ್ತಿಯನ್ನು ತರುವಾಗ ಅದರ ಮೇಲೆ ರೇಷ್ಮೆ, ಹತ್ತಿ (ನೂಲಿನ) ಅಥವಾ ಖಾದಿಯ ಸ್ವಚ್ಛ ಬಟ್ಟೆಯನ್ನು ಹಾಕಬೇಕು. ಮೂರ್ತಿಯನ್ನು ಮನೆಗೆ ತರುವಾಗ ಮೂರ್ತಿಯ ಮುಖವು ತರುವವನ ಕಡೆಗೆ ಮತ್ತು ಬೆನ್ನು ಮುಂದಿನ ಬದಿಗಿರಬೇಕು.

ಧಾರ್ಮಿಕ ಉತ್ಸವಗಳ ನಿಮಿತ್ತ ಪಟಾಕಿ ಸಿಡಿಸಿ ಇತರರಿಗೆ ತೊಂದರೆ ಕೊಡುವವರ ಮೇಲೆ ಎಂದಾದರೂ ದೇವರ ಕೃಪೆಯಾಗಬಹುದೇ ?

ಪಟಾಕಿ ಸಿಡಿಸಿ ಹಣವನ್ನು ಪೋಲು ಮಾಡುವುದಕ್ಕಿಂತ ಅದೇ ಹಣ ರಾಷ್ಟ್ರದಲ್ಲಿನ ಅರೆ ಹೊಟ್ಟೆಯಲ್ಲಿರುವ ಜನತೆಗೆ ಹಂಚಿದರೆ ಅಥವಾ ರಾಷ್ಟ್ರ ಮತ್ತು ಧರ್ಮ ಇವುಗಳ ಕಾರ್ಯಕ್ಕೆ ಅರ್ಪಣೆ ಮಾಡಿದರೆ, ದೇವರು ಖಂಡಿತ ಕೃಪೆ ಮಾಡಬಹುದಲ್ಲವೇ !

ಗಣೇಶಮೂರ್ತಿಯ ವಿಸರ್ಜನೆಯನ್ನು ಕೃತಕ ಕೊಳ (ಟ್ಯಾಂಕ್) ದಲ್ಲಿ ಏಕೆ ಮಾಡಬಾರದು?

‘ಪ್ರಾಣಪ್ರತಿಷ್ಠೆ ಮಾಡಿದ ಮೂರ್ತಿಯನ್ನು ಹರಿಯುವ ನೀರಿನಲ್ಲಿ ವಿಸರ್ಜನೆ ಮಾಡಬೇಕು ಎಂಬ ಶಾಸ್ತ್ರವಿದೆ. ಹರಿಯುವ ನೀರಿನಲ್ಲಿ ಮೂರ್ತಿಯನ್ನು ವಿಸರ್ಜನೆ ಮಾಡುವುದರಿಂದ ಮೂರ್ತಿಯಲ್ಲಿನ ಚೈತನ್ಯ ನೀರಿನ ಮೂಲಕ ಎಲ್ಲ ಕಡೆಗೆ ತಲುಪುತ್ತದೆ ಮತ್ತು ಅದರಿಂದ ಅನೇಕರಿಗೆ ಲಾಭವಾಗುತ್ತದೆ.

ಶ್ರೀ ಗಣೇಶ ಚತುರ್ಥಿಯಂದು ಶ್ರೀ ಗಣೇಶನ ವಿಡಂಬನೆ ಮಾಡಿ ಅಥವಾ ಅದರ ಮೂಕಸಮ್ಮತಿಗಳಾಗಿ ಪಾಪದ ಪಾಲುದಾರರಾಗಬೇಡಿ !

ಭಾರತೀಯ ಸಂಸ್ಕೃತಿಯು ಕಲೆಯನ್ನು ಹಣ ಸಂಪಾದನೆ ಅಥವಾ ಪ್ರಸಿದ್ಧಿಗಳಿಸುವ ಸಾಧನ ಎಂಬ ಸಂಕುಚಿತ ದೃಷ್ಟಿಕೋನದಿಂದ ನೋಡದೆ ಅದನ್ನು ತನಗಾಗಿ ಹಾಗೂ ಇತರರಿಗಾಗಿ ಈಶ್ವರ ಪ್ರಾಪ್ತಿಯ ಸಾಧನವೆಂಬ ವ್ಯಾಪಕ ದೃಷ್ಟಿಕೋನದಿಂದ ನೋಡುತ್ತದೆ. ಕಲೆಯನ್ನು ಕೇವಲ ಕಲಾತ್ಮಕತೆಗಾಗಿ ಉಪಯೋಗಿಸಿದಾಗ ಆ ಕಲಾಕೃತಿಯಲ್ಲಿ ದೈವೀ ಸ್ಪಂದನವನ್ನು ಆಕರ್ಷಿಸುವ ಪ್ರಮಾಣ ಕಡಿಮೆಯಿರುತ್ತದೆ.

ಕ್ಷಾಮಪೀಡಿತ ಭಾಗದಲ್ಲಿ ಅಥವಾ ಆಪತ್ಕಾಲದ ಪರಿಸ್ಥಿತಿಯಲ್ಲಿ ಶ್ರೀ ಗಣೇಶ ಮೂರ್ತಿಯನ್ನು ವಿಸರ್ಜನೆ ಮಾಡಲು ಇರುವ ಪರ್ಯಾಯಗಳು

ಉತ್ತರಪೂಜೆಯ ನಂತರ ಮೂರ್ತಿಯನ್ನು ಮನೆಯ ಹೊರಗೆ ಒಯ್ಯಬೇಕು. ತುಳಸಿ ವೃಂದಾವನದ ಹತ್ತಿರ ಅಥವಾ ಅಂಗಳದಲ್ಲಿ ದೊಡ್ಡ ಪಾತ್ರೆಯಲ್ಲಿ ನೀರು ತೆಗೆದುಕೊಂಡು ಮೂರ್ತಿಯನ್ನು ಆ ನೀರಿನಲ್ಲಿವಿಸರ್ಜನೆ ಮಾಡಬೇಕು.

ದೇವತೆಗಳ ವಿಡಂಬನೆಯೆಂದರೆ ಧರ್ಮಹಾನಿ !

ಶ್ರದ್ಧೆಯೇ ದೇವತೆಗಳ ಉಪಾಸನೆಯ ಮೂಲವಾಗಿರುತ್ತದೆ. ದೇವತೆಗಳ ವಿಡಂಬನೆಯಾಗುವುದು ಒಂದು ರೀತಿ ಧರ್ಮಹಾನಿಯೇ ಆಗಿದೆ. ವಿಸರ್ಜನೆ ಸಮಯದಲ್ಲಿ ಮತ್ತು ಅದರ ನಂತರ ಗಣೇಶಮೂರ್ತಿಗಳಿಗಾದ ವಿಡಂಬನೆ ನಿಂದನೀಯವಾಗಿದೆ. ಈ ಧರ್ಮಹಾನಿಯನ್ನು ತಡೆಗಟ್ಟುವುದು ಕಾಲಾನುಸಾರ ಆವಶ್ಯಕ ಧರ್ಮಪಾಲನೆಯೇ ಆಗಿದೆ.