ನವ ದೆಹಲಿ – ಬಾಂಗ್ಲಾದೇಶವು ಈಗ “ಫ್ಯಾಸಿಸ್ಟ್” ಆಡಳಿತದ ಸುಳಿಯಲ್ಲಿ ಸಿಲುಕಿಕೊಂಡಿದೆ, ಇಲ್ಲಿ ಜನರ ಪ್ರಜಾಪ್ರಭುತ್ವದ ಹಕ್ಕುಗಳು ನಾಶಗೊಂಡಿವೆ. ಮಹಮ್ಮದ ಯೂನೂಸ ಮತ್ತು ಅವರ ಸಹೋದ್ಯೋಗಿಗಳು ದೇಶದಲ್ಲಿ ಜುಲೈ-ಆಗಸ್ಟನಲ್ಲಿ ನಡೆದ ಅಶಾಂತತೆಗಳ ಮುಖ್ಯ ಸೂತ್ರಧಾರರಾಗಿದ್ದಾರೆ. ಬಾಂಗ್ಲಾದೇಶದ ಸಂಸತ್ತಿನ ಮೇಲೆ ದಾಳಿ ಮಾಡಿದವರು ಮತ್ತು ಭಯೋತ್ಪಾದಕರನ್ನು ಈ ಸರಕಾರ ಬಿಡುಗಡೆ ಮಾಡಿದೆ. ಈ ಹಿನ್ನಲೆಯಲ್ಲಿ ಸರಕಾರವು ದೇಶದಲ್ಲಿ ಅಶಾಂತತೆ ಹರಡುವುದರಲ್ಲಿ ಭಾಗಿಯಾಗಿರುವುದು ಸಿದ್ಧವಾಗುತ್ತದೆ ಎಂದು ಬಾಂಗ್ಲಾದೇಶದ ಮಾಜಿ ಪ್ರಧಾನಮಂತ್ರಿ ಶೇಖ ಹಸೀನಾ ಬಾಂಗ್ಲಾದೇಶದ ಸರಕಾರವನ್ನು ಟೀಕಿಸಿದರು. ಅವರು ಲಂಡನಿನಲ್ಲಿ ಅವಾಮಿ ಲೀಗ್ ಬೆಂಬಲಿಗರ ಮೆರವಣಿಗೆಗೆ ಆನ್ಲೈನ್ ಮೂಲಕ ಮಾರ್ಗದರ್ಶನ ಮಾಡುತ್ತಿದ್ದಾಗ ಮಾತನಾಡುತ್ತಿದ್ದರು.
ಶೇಖ್ ಹಸೀನಾ ಮಾತು ಮುಂದುವರೆಸುತ್ತಾ,
1. “ಅವಾಮಿ ಲೀಗ್‌ನ 1 ಸಾವಿರಕ್ಕಿಂತ ಹೆಚ್ಚು ನಾಯಕರು ಮತ್ತು ಕಾರ್ಯಕರ್ತರು ಹತ್ಯೆಗೀಡಾಗಿದ್ದಾರೆ, ಅವರ ಮನೆಗಳನ್ನು ಲೂಟಿ ಮಾಡಲಾಗಿದೆ. ವಿದ್ಯಾರ್ಥಿಗಳು ಮತ್ತು ಪೊಲೀಸರ ಹತ್ಯೆ, ಬೆಂಕಿ ಹಚ್ಚುವುದು ಮತ್ತು ದೌರ್ಜನ್ಯಗಳ ಹಿಂದೆ ಸದ್ಯ ಅಸ್ತಿತ್ವದಲ್ಲಿರುವ ಸರಕಾರದ ಕೈವಾಡ ಇದೆ. ತಮ್ಮ ದೇಶಕ್ಕೆ ಹಾನಿ ಮಾಡುತ್ತಿರುವ ಕೊಲೆಗಡುಕರುಮತ್ತು ಷಡ್ಯಂತ್ರ ಮಾಡುವವರು ಕಾನೂನಿನ ಅನುಸಾರ ಜವಾಬ್ದಾರರಾಗಿದ್ದಾರೆ. ಯಾವ ರೀತಿ ನಾವು ಯುದ್ಧ ಅಪರಾಧಿಗಳ ಮೇಲೆ ಕ್ರಮ ಕೈಕೊಂಡಿದ್ದೇವೆಯೋ, ಅದೇ ರೀತಿ ಇಂದಿನ ಅಪರಾಧಿಗಳನ್ನು ಶಿಕ್ಷೆಗೊಳಪಡಿಸಲಾಗುವುದು. ಕಾನೂನಿನಿಂದ ಯಾರೂ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ನಮ್ಮ ದೇಶದ ಇತಿಹಾಸದ ಈ ಕರಾಳ ಅಧ್ಯಾಯ ಶಾಶ್ವತವಾಗಿ ಉಳಿಯುವುದಿಲ್ಲ.
2. ಭ್ರಷ್ಟಾಚಾರ ನಿಗ್ರಹ ಆಯೋಗವು ಯೂನಸ್ ಮತ್ತು ಅವರ ಸಂಸ್ಥೆಯಾಗಿರುವ ಗ್ರಾಮೀಣ ಬ್ಯಾಂಕ್‌ಗೆ ಸಂಬಂಧಿಸಿದ ಹಣಕಾಸು ಅಕ್ರಮಗಳ ಆರೋಪಗಳನ್ನು ನಿರ್ಲಕ್ಷಿಸಿದೆ. ಯೂನಸ್ ಇವರ ಚಲನವಲನಗಳ ಮೇಲೆ ಆಯೋಗಕ್ಕೆ ಯಾವುದೇ ನಿಯಂತ್ರಣವಿಲ್ಲ ಎಂದು ಶೇಖ್ ಹಸೀನಾ ಆರೋಪಿಸಿದ್ದಾರೆ.