ಸದ್ಗುರು ಡಾ. ಮುಕುಲ ಗಾಡಗೀಳರ ಹಸ್ತರೇಖೆಗಳ ಬಗ್ಗೆ ಹಸ್ತೇರೇಖಾತಜ್ಞೆ ಸುನೀತಾ ಶುಕ್ಲಾ ಇವರ ವಿಶ್ಲೇಷಣೆ !

(ಸದ್ಗುರು) ಡಾ. ಮುಕುಲ ಗಾಡಗೀಳ

ಋಷಿಕೇಶದ (ಉತ್ತರಾಖಂಡ) ಹಸ್ತರೇಖಾ ತಜ್ಞೆ ಸುನೀತಾ ಶುಕ್ಲಾ ಇವರು ಸದ್ಗುರು ಡಾ. ಗಾಡಗೀಳರ ಹಸ್ತರೇಖೆಗಳ ವಿಶ್ಲೇಷಣೆಯನ್ನು ಮಾಡಿದ್ದರು, ಅದನ್ನು ಇಲ್ಲಿ ಕೊಡುತ್ತಿದ್ದೇವೆ.

ಹಸ್ತರೇಖಾ ತಜ್ಞೆ ಸುನೀತಾ ಶುಕ್ಲಾ

೧. ಸದ್ಗುರು ಡಾ. ಮುಕುಲ ಗಾಡಗೀಳರ ಎಡ ಅಂಗೈಯ ರೇಖೆಗಳ ವಿಶ್ಲೇಷಣೆ

‘ವ್ಯಕ್ತಿಯ ಎಡಗೈಯ ರೇಖೆಗಳಿಂದ ಅವನ ಹಿಂದಿನ ಜನ್ಮದ ಬಗ್ಗೆ ತಿಳಿಯುತ್ತದೆ. ಹಿಂದಿನ ಜನ್ಮದಲ್ಲಿ ವ್ಯಕ್ತಿಯ ಸ್ವಭಾವ, ಕೌಶಲ್ಯ, ಕಾರ್ಯಕ್ಷೇತ್ರ, ಪ್ರಾರಬ್ಧ, ಸಾಧನೆ ಇತ್ಯಾದಿ ವಿಷಯಗಳ ಮಾಹಿತಿ ಸಿಗುತ್ತದೆ. ಸದ್ಗುರು ಡಾ. ಮುಕುಲ ಗಾಡಗೀಳರ ಎಡಗೈಯ (ಹಿಂದಿನ ಜನ್ಮದ ವಿಷಯದ) ವಿಶ್ಲೇಷಣೆಯನ್ನು ಇಲ್ಲಿ ಕೊಡಲಾಗಿದೆ.

೧ ಅ. ಸದ್ಗುರು ಡಾ. ಮುಕುಲ ಗಾಡಗೀಳರ ಹಿಂದಿನ ಜನ್ಮದ ಗುಣವೈಶಿಷ್ಟ್ಯಗಳು : ಸದ್ಗುರು ಡಾ. ಮುಕುಲ ಗಾಡಗೀಳ ಇವರು ಹಿಂದಿನ ಜನ್ಮದಲ್ಲಿ ಅತ್ಯಂತ ಸುಸಂಸ್ಕೃತ, ಶಿಸ್ತುಬದ್ಧ, ವ್ಯಾವಹಾರಿಕ ಹಾಗೂ ಸೃಜನಶೀಲ (ರಚನಾತ್ಮಕ, ನವನಿರ್ಮಿತಿ ಮಾಡುವವ, creative) ಆಗಿದ್ದರು. ಅವರಲ್ಲಿ ಉತ್ತಮ ಬೌದ್ಧಿಕ ಕ್ಷಮತೆ, ವಿಚಾರಗಳಲ್ಲಿ ಸ್ಪಷ್ಟತೆ, ಪ್ರಬಲ ಇಚ್ಛಾಶಕ್ತಿ ಹಾಗೂ ಸೃಜನಾತ್ಮಕತೆ ಇತ್ತು. ಅವರು ಹಿಂದಿನ ಜನ್ಮದಲ್ಲಿ ಬಹಳ ಜನಪ್ರಿಯರಾಗಿದ್ದರು. ಅವರ ಜೀವನಶೈಲಿ ಸರಳವಾಗಿದ್ದು ವಿಚಾರಶೈಲಿ ಉಚ್ಚವಾಗಿತ್ತು. ಸಮಾಜದಲ್ಲಿ ಅವರು ಪ್ರಖ್ಯಾತರಾಗಿದ್ದರು. ಅವರು ಇತರರಿಗೆ ಧನದ ಸಹಾಯ ಮಾಡುತ್ತಿದ್ದರು. ಅವರು ಪ್ರಸಿದ್ಧಿಯಿಂದ ದೂರವಿದ್ದು ಮಾನವಕಲ್ಯಾಣಕ್ಕಾಗಿ ಕಾರ್ಯವನ್ನು ಮಾಡಿದರು.

೧ ಆ. ಸದ್ಗುರು ಡಾ. ಮುಕುಲ ಗಾಡಗೀಳರ ಹಿಂದಿನ ಜನ್ಮದ ಸಾಧನೆಯ ಪ್ರವಾಸದಲ್ಲಿ ಬಂದಿದ್ದ ಅಡಚಣೆಗಳು

೧ ಆ ೧. ಪ್ರಾರಬ್ಧ ಹಾಗೂ ಸ್ವಭಾವದೋಷಗಳಿಂದ ಸಾಧನಾ ಪ್ರವಾಸದಲ್ಲಿ ಬಾಧೆಯಾಗುವುದು : ಕಳೆದ ಕೆಲವು ಜನ್ಮಗಳಿಂದ ಅವರ ಆಧ್ಯಾತ್ಮಿಕ ಪ್ರವಾಸ ಮುಂದುವರಿದಿತ್ತು. ಅವರು ಅದಕ್ಕಾಗಿ ಕಠಿಣ ಪರಿಶ್ರಮ ಪಡುತ್ತಿದ್ದರು; ಆದರೆ ಕೆಲವು ಅಡಚಣೆಗಳಿಂದಾಗಿ ಆ ಪ್ರವಾಸವು ಭಂಗವಾಗಿತ್ತು. ಅದಕ್ಕೆ ಪ್ರಾರಬ್ಧವೂ ಕಾರಣವಾಗಿತ್ತು. ಆಕ್ರಮಕತೆ, ಹಠಸ್ವಭಾವ ಇತ್ಯಾದಿ ದೋಷಗಳು ಅವರಿಗೆ ಸಾಧನೆಯಲ್ಲಿ ಬಾಧಕವಾಗಿದ್ದವು. ಅವರ ಎಡ ಅಂಗೈಯಲ್ಲಿನ ಮಂಗಲ ಗ್ರಹದ ಸ್ಥಾನ ತಗ್ಗಾಗಿರುವುದರಿಂದ ಅವರಲ್ಲಿ ಸ್ವಲ್ಪ ಕೀಳರಿಮೆಯೂ ಇತ್ತು (ಸರಿಯಿದೆ – ಸದ್ಗುರು ಡಾ. ಗಾಡಗೀಳ). ಅವರು ಅಲಿಪ್ತರಾಗಿರಲು ಪ್ರಯತ್ನಿಸುತ್ತಿದ್ದರು ಹಾಗೂ ಅನೇಕ ಕಾಮನೆಗಳಿಂದಲೂ ಅವರು ಅಲಿಪ್ತರಾಗಿದ್ದರು; ಆದರೆ ವೈವಾಹಿಕ ಜೀವನ ಮತ್ತು ಅದರ ಜವಾಬ್ದಾರಿಗಳಲ್ಲಿ ಅವರು ಸಿಲುಕಿದ್ದರು. ಈ ಕರ್ಮಫಲನ್ಯಾಯ ಈ ಜನ್ಮದಲ್ಲಿಯೂ ಅವರ ಜೀವನದಲ್ಲಿದೆ.

೧ ಆ ೨. ಬೌದ್ಧಿಕತೆ ಮತ್ತು ತಾರ್ಕಿಕತೆಯಿಂದಾಗಿ ಕುಂಡಲಿನಿ ಜಾಗೃತವಾಗಲು ಅಡಚಣೆ ನಿರ್ಮಾಣವಾಗುವುದು : ಮನಸ್ಸಿನಿಂದ ಮಾಡಿದ ದೃಢನಿಶ್ಚಯವನ್ನು ಅವರು ಸಮರ್ಪಣಾಭಾವದಿಂದ ಹಾಗೂ ಹಠಹಿಡಿದು ಪೂರ್ಣಗೊಳಿಸುತ್ತಿದ್ದರು; ಆದರೆ ನಿರ್ಣಯ ತೆಗೆದುಕೊಳ್ಳುವಾಗ ಅವರ ಮನಸ್ಸು ಮತ್ತು ಬುದ್ಧಿಯಲ್ಲಿ ಸಂಘರ್ಷವಾಗುತ್ತಿತ್ತು (ಹೌದು ನನ್ನಲ್ಲಿ ಆತ್ಮವಿಶ್ವಾಸ ಕಡಿಮೆ ಇತ್ತು. – ಸದ್ಗುರು ಡಾ. ಗಾಡಗೀಳ). ಮನಸ್ಸು ಮತ್ತು ಬುದ್ಧಿ ಸಂಶಯದ್ದಾಗಿದ್ದ ಕಾರಣ ಅವರಿಗೆ ಸುಷುಮ್ನಾ ನಾಡಿ ಮತ್ತು ಸಪ್ತಚಕ್ರಗಳನ್ನು ಸಕ್ಷಮಗೊಳಿಸಲು ಸಾಧ್ಯವಾಗಿರಲಿಲ್ಲ. ಪ್ರೇಮ, ಕರುಣೆ ಮತ್ತು ಸಮಭಾವ ಇವುಗಳಿಗಿಂತ ಬೌದ್ಧಿಕ ಮತ್ತು ತಾರ್ಕಿಕ ವಿಷಯಗಳಲ್ಲಿ ಅವರಿಗೆ ಹೆಚ್ಚು ಆಸಕ್ತಿ ಇದ್ದ ಕಾರಣ ಅವರ ಕುಂಡಲಿನಿ ಜಾಗೃತವಾಗಲು ಅಡಚಣೆಯುಂಟಾಗಿತ್ತು. ಅವರು ಯಾವುದು ‘ಯೋಗ್ಯ ಮತ್ತು ಯಾವುದು ಅಯೋಗ್ಯ ?’, ಎಂಬುದರಲ್ಲಿ ಸಿಲುಕಿದ್ದರು. ಅವರ ಎಡ ಅಂಗೈಯ ಮಸ್ತಕ-ರೇಖೆ (ಬುದ್ಧಿಗೆ ಸಂಬಂಧಿಸಿದ ರೇಖೆ) ತೀಕ್ಷ್ಣ ಹಾಗೂ ಅಖಂಡವಿದ್ದರೂ ಅವರ ಹೃದಯ ರೇಖೆ (ಮನಸ್ಸಿಗೆ ಸಂಬಂಧಿಸಿದ ರೇಖೆ) ಅಷ್ಟು ಪ್ರಬಲವಾಗಿರದ ಕಾರಣ ಅವರಿಗೆ ತಮ್ಮ ಧ್ಯೇಯದ ವರೆಗೆ ತಲುಪಲು ಸಾಧ್ಯವಾಗುತ್ತಿರಲಿಲ್ಲ; ಆದ್ದರಿಂದ ಅವರು ನಿರಾಶರಾಗಿದ್ದರು. ಅವರಿಗೆ ಈ ವಿಷಯದಲ್ಲಿ ಬೇಸರವೂ ಇತ್ತು. (ಸರಿಯಿದೆ – ಸದ್ಗುರು ಡಾ. ಗಾಡಗೀಳ); ಆದರೆ ಅವರು ಶಿವಭಕ್ತರಾಗಿದ್ದ ಕಾರಣ ಶಿವನ ಕೃಪೆಯಿಂದ ಅವರ ಸಾಧನೆಯ ಪ್ರವಾಸ ನಡೆಯುತ್ತಿತ್ತು.

೨. ಸದ್ಗುರು ಡಾ. ಮುಕುಲ ಗಾಡಗೀಳರ ಬಲ ಅಂಗೈಯ ರೇಖೆಗಳ ವಿಶ್ಲೇಷಣೆ

ವ್ಯಕ್ತಿಯ ಬಲ ಅಂಗೈ ಮೇಲಿನ ರೇಖೆಗಳಿಂದ ಅವನ ಈ ಜನ್ಮದ ವಿಷಯ ತಿಳಿಯುತ್ತದೆ. ‘ವ್ಯಕ್ತಿ ತನ್ನ ಕ್ಷಮತೆಯನ್ನು ಯಾವ ರೀತಿಯಲ್ಲಿ ಉಪಯೋಗಿಸುತ್ತಾನೆ ?, ಅವನಲ್ಲಿನ ಕೊರತೆಗಳನ್ನು ಹೇಗೆ ಪರಿಹರಿಸಿಕೊಳ್ಳುತ್ತಾನೆ ?, ಅವನ ಸಾಧನಾಪ್ರವಾಸ ಹೇಗೆ ನಡೆಯುತ್ತಿದೆ ?, ಸಾಧನೆಯಲ್ಲಿ ಯಾವ ಅಡಚಣೆಗಳಿವೆ ?’ ಇತ್ಯಾದಿಗಳ ವಿಷಯ ತಿಳಿಯುತ್ತದೆ. ಸದ್ಗುರು ಡಾ. ಮುಕುಲ ಗಾಡಗೀಳರ ಬಲಗೈಯ (ಈ ಜನ್ಮದ ವಿಷಯದಲ್ಲಿ) ವಿಶ್ಲೇಷಣೆಯನ್ನು ಇಲ್ಲಿ ಕೊಡಲಾಗಿದೆ.

೨ ಅ. ಸದ್ಗುರು ಡಾ. ಗಾಡಗೀಳ ಇವರ ಈ ಜನ್ಮದ ವೈಶಿಷ್ಟ್ಯಗಳು : ಸದ್ಗುರು ಡಾ. ಗಾಡಗೀಳರ ಸ್ವಭಾವವು ನಮ್ರ, ಇತರರ ಕಷ್ಟದ ಬಗ್ಗೆ ಸಂವೇದನಾಶೀಲರಾಗಿರುವುದು, ದಯಾಮಯಿ, ಸೇವಾಭಾವಿ, ಭಾವನಾಶೀಲ, ವಿವೇಕಶೀಲ, ಯಾರ ಬಗ್ಗೆಯೂ ಪೂರ್ವಗ್ರಹವಿಡದ, ದೃಢ ನಿಶ್ಚಯ ಹಾಗೂ ಪ್ರಬಲ ಇಚ್ಛಾಶಕ್ತಿಯದ್ದಾಗಿದೆ

೨ ಆ. ಸದ್ಗುರು ಡಾ. ಗಾಡಗೀಳರ ಈ ಜನ್ಮದ ಸಾಧನಾಪ್ರವಾಸದಲ್ಲಿರುವ ಅಡಚಣೆಗಳು

೨ ಆ ೧. ‘ಯೋಗ್ಯ ಹಾಗೂ ಅಯೋಗ್ಯ ಯಾವುದು ?’ ಎಂಬುದರಲ್ಲಿ ಸಿಲುಕುವುದು : ಅವರು ಈಗಲೂ ಹಿಂದಿನ ಜನ್ಮದ ಹಾಗೆ ಯಾವುದು ಯೋಗ್ಯ ಯಾವುದು ಅಯೋಗ್ಯ ಇದರಲ್ಲಿ ಸಿಲುಕಿದ್ದಾರೆ; ಆದರೆ ಹಿಂದಿನ ತುಲನೆಯಲ್ಲಿ ಈ ಪ್ರಮಾಣ ಈಗ ತುಂಬಾ ಕಡಿಮೆಯಾಗಿದೆ. ಅವರು ಅದಕ್ಕಾಗಿ ತುಂಬಾ ಪ್ರಯತ್ನ ಮಾಡಿದ್ದಾರೆ; ಆದರೆ ಬಲ ಅಂಗೈಯಲ್ಲಿನ ಅದಕ್ಕೆ ಸಂಬಂಧಿಸಿದ ರೇಖೆಗಳು ಸಂಪೂರ್ಣ ನಾಶವಾಗಿಲ್ಲ. (ಸರಿಯಿದೆ – ಸದ್ಗುರು ಡಾ. ಗಾಡಗೀಳ). ಅವರು ಸಿದ್ಧಿ ಪ್ರಾಪ್ತಿಗಾಗಿ ಪ್ರಯತ್ನಿಸುತ್ತಿದ್ದಾರೆ; ಆದರೆ ಇದು ಸಾಧನಾಮಾರ್ಗದಲ್ಲಿನ ಒಂದು ಅಡಚಣೆಯಾಗಿದೆ ಹಾಗೂ ಅನಿಷ್ಟ ಶಕ್ತಿಗಳು ಸ್ವಲ್ಪ ಪ್ರಮಾಣದಲ್ಲಿ ಹಸ್ತಕ್ಷೇಪ ಮಾಡುತ್ತಿರಬಹುದು.

೨ ಆ ೨. ಆಧ್ಯಾತ್ಮಿಕ ತೊಂದರೆ ಅಥವಾ ಶಾಪ ಇರುವುದು : ಕರ್ಮಫಲನ್ಯಾಯಕ್ಕನುಸಾರ ಅವರಿಗೆ ಆಧ್ಯಾತ್ಮಿಕ ತೊಂದರೆ ಅಥವಾ ಶಾಪ ಇರಬಹುದು; ಏಕೆಂದರೆ, ಅವರ ಮಧ್ಯದ (ಶನಿಯ) ಬೆರಳಲ್ಲಿ ಒಂದು ಕಲೆಯಿದೆ. (ಹೌದು ೨೦೧೪ ರಲ್ಲಿ ನನಗೆ ಶನಿ ಮಹಾರಾಜರ ಪೂಜೆ ಮಾಡಲು ಹೇಳಲಾಗಿತ್ತು. ಅದನ್ನು ನಾನು ೬ ತಿಂಗಳು ಮಾಡಿದೆ. – ಸದ್ಗುರು ಡಾ. ಗಾಡಗೀಳ). ಇದೊಂದು ಆಧ್ಯಾತ್ಮಿಕ ಅಡಚಣೆ ಇರಬಹುದು.

೨ ಆ ೩. ತನಗೆ ಮಹತ್ವ ಸಿಗಬೇಕೆಂದು ಸ್ವಲ್ಪ ಪ್ರಮಾಣದಲ್ಲಿ ಅನಿಸುವುದು : ಅವರಲ್ಲಿನ ಪ್ರಬಲ ಇಚ್ಛಾಶಕ್ತಿ, ಪೂರ್ವಜನ್ಮದಲ್ಲಿನ ಸಾಧನೆ ಹಾಗೂ ಈಶ್ವರನೊಂದಿಗೆ ಏಕರೂಪವಾಗುವ ತಳಮಳದಿಂದಾಗಿ ಅವರ ಆಧ್ಯಾತ್ಮಿಕ ಉನ್ನತಿ ಶೀಘ್ರಗತಿಯಲ್ಲಿ ಆಯಿತು; ಆದರೆ ಅವರು ಅನಾಹತ ಚಕ್ರವನ್ನು ಶುದ್ಧಿಗೊಳಿಸಲು ಪ್ರಯತ್ನಿಸಬೇಕು. ‘ತನಗೆ ಮಹತ್ವ ಸಿಗಬೇಕು’, ಎಂಬ ಇಚ್ಛೆ ಅವರಲ್ಲಿ ಸ್ವಲ್ಪ ಪ್ರಮಾಣದಲ್ಲಿದ್ದು ಇದು ಅವರ ಆಧ್ಯಾತ್ಮಿಕ ಪ್ರವಾಸದಲ್ಲಿನ ಅಡಚಣೆಯಾಗಿದೆ. (ಸರಿಯಿದೆ –  ಸದ್ಗುರು ಡಾ. ಗಾಡಗೀಳ)

೨ ಇ. ಸದ್ಯದಲ್ಲಿಯೆ ಸದ್ಗುರು ಡಾ. ಗಾಡಗೀಳರ ಜೀವನದಲ್ಲಿ ದೊಡ್ಡ ಪರಿವರ್ತನೆಯಾಗಿ ಅವರಿಗೆ ತುಂಬಾ ಕೀರ್ತಿ ಲಭಿಸಲಿಕ್ಕಿದೆ : ಈ ಜನ್ಮದಲ್ಲಿ ಅವರು ತಡವಾಗಿ ಸಾಧನೆ ಆರಂಭಿಸಿದ್ದರೂ, ಪೂರ್ವಜನ್ಮದಲ್ಲಿನ ಸಾಧನೆಯ ತಳಮಳ ಈ ಜನ್ಮದಲ್ಲಿಯೂ ಇದ್ದ ಕಾರಣ ಅವರಿಗೆ ಸಂತಪದವಿಯನ್ನು ತಲುಪಲು ಸಾಧ್ಯವಾಯಿತು. ೨೫, ೩೫ ಮತ್ತು ೫೦ ನೇ ವಯಸ್ಸಿನಲ್ಲಿ ಅವರ ಜೀವನದಲ್ಲಿ ದೊಡ್ಡ ಪರಿವರ್ತನೆ ಆಗಿರಬಹುದು (೨೫ ನೇ ವಯಸ್ಸಿನಲ್ಲಿ ‘ಪಿ.ಎಚ್‌.ಡಿ.’ (ವಿದ್ಯಾವಾಚಸ್ಪತಿ) ಪದವಿಗಾಗಿ ಪ್ರವೇಶ ಸಿಕ್ಕಿತು, ೩೫ ನೇ ವಯಸ್ಸಿನಲ್ಲಿ ಸಾಧನೆ ಪ್ರಾರಂಭವಾಯಿತು ಹಾಗೂ ೫೦ ನೇ ವಯಸ್ಸಿನಲ್ಲಿ ಸಾಧನೆಯಲ್ಲಿ ಸ್ವಲ್ಪ ಪ್ರಮಾಣದಲ್ಲಿ ಅವನತಿಯಾಯಿತು – ಸದ್ಗುರು ಡಾ. ಗಾಡಗೀಳ).

ಅವರ ಜೀವನದಲ್ಲಿ ಸದ್ಯದಲ್ಲಿಯೆ ಇನ್ನೊಂದು ದೊಡ್ಡ ಪರಿವರ್ತನೆ ಆಗಲಿಕ್ಕಿದೆ. ಅದರ ಸ್ವರೂಪ ಬಾಹ್ಯ ಅಥವಾ ಆಂತರಿಕವಾಗಿರಬಹುದು ಅಥವಾ ಸಾಧನೆಗೆ ಚಾಲನೆ ನೀಡುವ ಆಶೀರ್ವಾದವೂ ಇರಬಹುದು. ಈ ಪರಿವರ್ತನೆಯಲ್ಲಿ ಅವರ ಆರಾಧ್ಯದೇವತೆಯ ಆಶೀರ್ವಾದದಿಂದ ತುಂಬಾ ಕೀರ್ತಿ ಲಭಿಸಲಿಕ್ಕಿದೆ. ಈ ಅವಕಾಶ ತಪ್ಪಿಹೋದರೆ ಪುನಃ ಸಾಧನೆಯಲ್ಲಿ ಉಚ್ಚ ಮಟ್ಟವನ್ನು ತಲುಪಲು ಕಠಿಣವಾಗಬಹುದು.

೨ ಈ. ಸದ್ಗುರು ಡಾ. ಗಾಡಗೀಳರಲ್ಲಿ ಶಿವತತ್ತ್ವವಿದ್ದು ಶಿವನೇ ಅವರಿಗೆ ಮಾರ್ಗದರ್ಶಕನಾಗಿದ್ದಾನೆ : ಭಗವಾನ ಶಿವನು ಅವರ ಮುಖ್ಯ ಮಾರ್ಗದರ್ಶಕನಾಗಿದ್ದನು; ಆದ್ದರಿಂದ ಅವರಲ್ಲಿ ಶಿವತತ್ತ್ವ ಹೆಚ್ಚು ಪ್ರಮಾಣದಲ್ಲಿದೆ. ಧ್ಯಾನ, ಸೇವೆ, ತ್ಯಾಗ ಹಾಗೂ ತಂತ್ರವಿದ್ಯೆ ಅವರ ಸಾಧನಾಮಾರ್ಗ ಆಗಿರಬೇಕು. ಜೀವನದಲ್ಲಿ ಶಿವತತ್ತ್ವ ಇರುವುದರಿಂದ ಮೋಕ್ಷ ಅವರ ಜೀವನದ ಉದ್ದೇಶವಾಗಿದೆ. ಒಟ್ಟಾರೆ ಅವರು ಮಾಡಬೇಕಾದ ಕಾರ್ಯ ತುಂಬಾ ಕಡಿಮೆಯಿದೆ. ಅವರು ಎಲ್ಲವನ್ನೂ ಶಿವನ ಚರಣಗಳಿಗೆ ಅರ್ಪಿಸಿ ಅವನಿಂದ ಕೇವಲ ಮೋಕ್ಷವನ್ನೇ ಕೇಳಬೇಕು. (ಒಪ್ಪಿದೆ. – ಸದ್ಗುರು ಡಾ. ಗಾಡಗೀಳ). ಇದು ಅವರ ಅಂತಿಮ ಜನ್ಮ ಇರಬಹುದು.’

– ಹಸ್ತರೇಖಾ ತಜ್ಞೆ ಸುನೀತಾ ಶುಕ್ಲಾ, ಋಷಿಕೇಶ, ಉತ್ತರಾಖಂಡ. (೨೩.೪.೨೦೨೪)