ಬಾಂಗ್ಲಾದೇಶದ ಮಧ್ಯಂತರ ಸರಕಾರದ ಪ್ರಮುಖ ಮಹಮ್ಮದ್ ಯುನೂಸ್ ಇವರಿಂದ ಭಾರತೀಯ ವಿದೇಶಾಂಗ ಸಚಿವರಿಗೆ ಆಶ್ವಾಸನೆ !
ಢಾಕಾ (ಬಾಂಗ್ಲಾದೇಶ) – ಬಾಂಗ್ಲಾದೇಶದಲ್ಲಿನ ನಾಗರಿಕರ ವಂಶ, ಬಣ್ಣ, ವರ್ಣ ಅಥವಾ ಧರ್ಮ ಏನೇ ಆಗಿರಲಿ, ದೇಶದ ಮಧ್ಯಂತರ ಸರಕಾರ ಪ್ರತಿಯೊಂದು ನಾಗರಿಕರ ಸುರಕ್ಷೆ ಮತ್ತು ಅಧಿಕಾರದ ರಕ್ಷಣೆ ಮಾಡುವದಕ್ಕಾಗಿ ವಚನ ಬದ್ಧವಾಗಿದೆ, ಎಂದು ಸರಕಾರದ ಪ್ರಮುಖ ಸಲಹೆಗಾರ ಮಹಮ್ಮದ್ ಯುನೂಸ್ ಇವರು ಭಾರತದ ವಿದೇಶಾಂಗ ಸಚಿವ ವಿಕ್ರಮ ಮಿಸ್ರಿ ಇವರ ಜೊತೆಗೆ ನಡೆದಿರುವ ಸಭೆಯಲ್ಲಿ ಆಶ್ವಾಸನೆ ನೀಡಿದ್ದಾರೆ. ಈ ಸಭೆಯಲ್ಲಿ ಯುನೂಸ್ ಇವರು ಬಾಂಗ್ಲಾದೇಶ ಮತ್ತು ಭಾರತದ ನಡುವಿನ ಸಂಬಂಧ ದೃಢವಾಗಿದೆ ಎಂದು ಹೇಳಿದರು. ಇತ್ತೀಚಿನ ಸಮಯದಲ್ಲಿ ಉಭಯ ದೇಶಗಳ ಸಂಬಂಧದಲ್ಲಿ ನಿರ್ಮಾಣವಾಗಿರುವ ಬಿಗುವಿನ ವಾತಾವರಣವನ್ನು ದೂರಗೊಳಿಸುವುದಕ್ಕಾಗಿ ಭಾರತವು ಸಹಾಯ ಮಾಡಬೇಕೆಂದು ಅವರು ಕರೆ ನೀಡಿದರು. ಈ ಸಮಯದಲ್ಲಿ ಇವರು ಭಾರತದಿಂದ ಬಂದಿರುವ ಹೇಳಿಕೆ ವಿಶೇಷವಾಗಿ ಶೇಖ್ ಹಸೀನಾ ಇವರ ಹೇಳಿಕೆಯ ಅಂಶಗಳನ್ನು ಪ್ರಸ್ತಾಪಿಸುತ್ತಾ, ಅಲ್ಲಿಂದ ಅನೇಕ ಹೇಳಿಕೆಗಳು ಬರುತ್ತಿರುವುದರಿಂದ ನಮ್ಮ ಜನರು ಆತಂಕದಲ್ಲಿದ್ದಾರೆ. ಇದರಿಂದ ಒತ್ತಡ ನಿರ್ಮಾಣವಾಗುತ್ತಿದೆ, ಎಂದು ಹೇಳಿದರು.
ಢಾಕಾ ಜಮುನಾ ಅತಿಥಿ ಗೃಹದಲ್ಲಿ ನಡೆದಿರುವ ೪೦ ನಿಮಿಷದ ಸಭೆಯಲ್ಲಿ ಬಾಂಗ್ಲಾದೇಶದಲ್ಲಿನ ಅಲ್ಪಸಂಖ್ಯಾತರ ಸಮಸ್ಯೆ, ತಪ್ಪಾದ ಮಾಹಿತಿ, ಶೇಖ್ ಹಸೀನಾ ಇವರ ಭಾರತದಲ್ಲಿನ ವಾಸ್ತವ್ಯ, ಪ್ರಾದೇಶಿಕ ಸಹಕಾರ ಮತ್ತು ಜುಲೈ ಆಗಸ್ಟ್ ನಲ್ಲಿನ ಜನರ ಗಲಭೆ ಇದರ ಕುರಿತು ಚರ್ಚೆ ನಡೆಯಿತು.
ಸಂಪಾದಕೀಯ ನಿಲುವುಯುನೂಸ್ ಇವರ ಈ ಹೇಳಿಕೆಯ ಮೇಲೆ ಯಾರು ವಿಶ್ವಾಸ ಇಡುವರು ? ಈ ರೀತಿಯ ಸುಳ್ಳು ಹೇಳಿಕೆ ನೀಡುವುದರ ಜೊತೆಗೆ ಭಾರತವು ಚರ್ಚೆ ನಡೆಸುವ ಬದಲು ಆ ದೇಶದ ಮೇಲೆ ಸೈನಿಕ ಕಾರ್ಯಾಚರಣೆ ನಡೆಸುವುದು ಅಗತ್ಯವಾಗಿದೆ ! |