ಪ್ರದೇಶವನ್ನು ಬಿಟ್ಟು ಹೋಗುವಂತೆ ಮತ್ತು ಕೊಲ್ಲುವುದಾಗಿ ಬೆದರಿಕೆ ಘಟನೆಯ ಹಿಂದೆ ಯಾವುದೇ ಧಾರ್ಮಿಕ ಕಾರಣವಿಲ್ಲ ಎಂದು ಪೊಲೀಸರ ದಾವೆ
ನವಸಾರಿ (ಗುಜರಾತ) – ಇಲ್ಲಿನ ದರ್ಗಾ ರಸ್ತೆ ಪ್ರದೇಶದಲ್ಲಿ ಡಿಸೆಂಬರ್ 7 ರ ರಾತ್ರಿ ವಾಹನವನ್ನು ನಿಲುಗಡೆಯ ವಿವಾದದಿಂದಾಗಿ ಮುಸ್ಲಿಮರು ಹಿಂದೂಗಳ ಮೇಲೆ ಹಲ್ಲೆ ನಡೆಸಿರುವ ಘಟನೆ ನಡೆದಿದೆ. ಈ ವೇಳೆ ಹಿಂದೂ ಮಹಿಳೆಯರಿಗೂ ಥಳಿಸಲಾಗಿದೆ. ಮತಾಂಧ ಮುಸ್ಲಿಮರು ಹಿಂದೂಗಳಿಗೆ ಜೀವ ಬೆದರಿಕೆ ಹಾಗೂ ಅವರನ್ನು ಈ ಪ್ರದೇಶದಿಂದ ಓಡಿಸುವುದಾಗಿ ಬೆದರಿಕೆ ಹಾಕಿದರು. ಈ ಪ್ರಕರಣದಲ್ಲಿ ಪೊಲೀಸರು ದೂರು ದಾಖಲಿಸಿದ್ದು, ಈ ಪ್ರಕರಣ ಧಾರ್ಮಿಕ ಪ್ರಕರಣವಲ್ಲ, ವಾಹನ ನಿಲುಗಡೆ ವಿಚಾರವಾಗಿ ನಡೆದಿರುವ ವಿವಾದ ಎಂದು ಹೇಳಿದೆ.
1. ಸಂತ್ರಸ್ತ ಚಂದನ ರಾಥೋಡ ಮಾತನಾಡಿ, ರಾತ್ರಿ ಹಿಂದೂ ಯುವಕನ ಕಾರು ನಿಲುಗಡೆಯ ವಿಚಾರದಲ್ಲಿ ಮುಸ್ಲಿಂ ವ್ಯಕ್ತಿಯೊಂದಿಗೆ ಜಗಳ ನಡೆಯಿತು. ಸ್ವಲ್ಪ ಸಮಯದ ನಂತರ 100 ರಿಂದ 150 ಮುಸ್ಲಿಮರ ಗುಂಪು ಇಲ್ಲಿಗೆ ತಲುಪಿತು. ಗುಂಪಿನ ಕೈಯಲ್ಲಿ ಲಾಠಿ ಮತ್ತು ಇತರ ಆಯುಧಗಳೂ ಇದ್ದವು. ಅವರು ಉಪಸ್ಥಿತರಿದ್ದ ಹಿಂದೂ ಮಹಿಳೆಯರ ಮೇಲೆ ಹಲ್ಲೆ ಮಾಡಿದರು ಮತ್ತು ಅವರೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾರೆ. ‘ಕಾಫಿರ್ (ಅಲ್ಲಾ ಮತ್ತು ಕುರಾನ್‌ನಲ್ಲಿ ನಂಬಿಕೆಯಿಲ್ಲದವರು), ಇಲ್ಲಿಂದ ಓಡಿಹೋಗಿರಿ, ಇದು ನಮ್ಮ ಪ್ರದೇಶವಾಗಿದೆ. ಇದು ಕೇವಲ ಆರಂಭವಷ್ಟೇ’ ಎಂದು ಹೇಳುತ್ತಿದ್ದರು.
2. ಚಂದನ ರಾಥೋಡ ಮಾತು ಮುಂದುವರೆಸಿ, ದರ್ಗಾ ರಸ್ತೆ ಪ್ರದೇಶದಲ್ಲಿ ಮುಸ್ಲಿಮರು ಹೆಚ್ಚಾಗಿದ್ದಾರೆ. ಇಲ್ಲಿ ದರ್ಗಾ ಇದೆ, ಅದರ ಮುಂದೆ ಒಂದು ಹಿಂದೂ ದೇವಾಲಯವಿದೆ. ಕಳೆದ 3 ವರ್ಷಗಳಿಂದ ಮುಸ್ಲಿಮರು ನಮಗೆ ಹಬ್ಬವನ್ನು ಆಚರಿಸಲು ಅವಕಾಶ ನೀಡುತ್ತಿಲ್ಲ. ಗಣೇಶೋತ್ಸವದ ವೇಳೆ ಮುಸ್ಲಿಮರು ಮಂಟಪ ಪ್ರವೇಶಿಸಿ ಭಜನೆ-ಕೀರ್ತನೆ ನಿಲ್ಲಿಸಿದ್ದರು. ಇಲ್ಲಿ ನಡೆಯುವ ಧಾರ್ಮಿಕ ಕಾರ್ಯಕ್ರಮಗಳಿಗೆ ಬರುವ ಹಿಂದೂ ಮಹಿಳೆಯರಿಗೆ ಕಿರುಕುಳ ನೀಡಲಾಗುತ್ತಿದೆ ಎಂದು ಹೇಳಿದರು.
ಈಗ ಬಾಂಗ್ಲಾದೇಶದಂತಹ ಪರಿಸ್ಥಿತಿ ಭಾರತದಲ್ಲೂ ಆಗುತ್ತಿದೆ !
ಹಲವಾರು ಮಹಿಳೆಯರು ದಾಳಿಯ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರ ಮಾಡಿದ್ದಾರೆ. ಅದರಲ್ಲಿ ಮಹಿಳೆಯೊಬ್ಬರು ಮಾತನಾಡಿ, ಹಿಂದೂ ಆಗಿರುವುದು ಅಪರಾಧವೇ ? ಅವರು ನಮ್ಮ ಕತ್ತು ಕೊಯ್ದು ಅಲ್ಲಿಂದ ಹೊರ ಹಾಕುವುದಾಗಿ ಬೆದರಿಕೆ ಹಾಕಿದ್ದಾರೆ. ಈಗ ಬಾಂಗ್ಲಾದೇಶದಂತಹ ಪರಿಸ್ಥಿತಿ ಭಾರತದಲ್ಲೂ ಬರಲಾರಂಭಿಸಿದೆ. ಈಗ ಹಿಂದೂಗಳಿಗೆ ಭಾರತದಲ್ಲಿ ಬದುಕುವ ಹಕ್ಕಿಲ್ಲವೇ? ಎಂದು ಹೇಳಿದ್ದಾರೆ.
ಸಂಪಾದಕೀಯ ನಿಲುವು
|