ಪ್ರಭು ಶ್ರೀರಾಮನ ಕುರಿತು ಆಕ್ಷೇಪಾರ್ಹ ಹೇಳಿಕೆ ನೀಡಿದ ಇಲ್ತಿಜಾ ಮುಫ್ತಿಯ ಮೇಲೆ ಕಾನೂನು ಕ್ರಮ ಕೈಗೊಳ್ಳಿ !
ಮೆಹಬೂಬಾ ಮುಫ್ತಿ ಇವರ ಸರಕಾರದ ಅವಧಿಯಲ್ಲಿ ಕಾಶ್ಮೀರದಲ್ಲಿನ ಹಿಂದೂಗಳ ಮೇಲೆ ಏನೆಲ್ಲಾ ದೌರ್ಜನ್ಯ ನಡೆದಿದೆ, ಹಿಂದೂಗಳ ನರಸಂಹಾರ; ಹಿಂದೂ ಮಹಿಳೆಯರ ಮೇಲಿನ ಅತ್ಯಾಚಾರಗಳು, ಅಮಾಯಕ ಮಕ್ಕಳ ಹತ್ಯೆ, ಇದರ ಬಗ್ಗೆ ಎಂದಾದರೂ ಇಲ್ತಿಜಾ ಮುಫ್ತಿಯವರಿಗೆ ನಾಚಿಕೆ ಅನಿಸಿದೆಯೇ ? ಅನೇಕ ವರ್ಷಗಳಿಂದ ಕಾಶ್ಮೀರದ ಲಾಲ್ ಚೌಕ್ ನಲ್ಲಿ ಹಾಡುಹಗಲು ಭಾರತದ ರಾಷ್ಟ್ರಧ್ವಜ ಸುಡಲಾಗುತ್ತಿತ್ತು. ಇದರ ಬಗ್ಗೆ ಎಂದಾದರೂ ಮುಪ್ತಿ ಕುಟುಂಬದರು ನಾಚಿಕೆಯಿಂದ ತಲೆ ತಗ್ಗಿಸಿದ್ದಾರೆಯೇ ? ಅಂಥವರು ಇಂದು ಭಗವಾನ್ ಶ್ರೀರಾಮನ ಬಗ್ಗೆ ಟೀಕಿಸಿ ನಾಚಿಕೆ ಆಗಬೇಕೆಂದು ಹೇಳುತ್ತಿದ್ದಾರೆ. ಭಗವಾನ್ ಶ್ರೀರಾಮನ ಅವಮಾನ ಮಾಡುವ ಹಿಂದೂದ್ರೋಹಿ ಇಲ್ತಿಜಾ ಮುಫ್ತಿ ಇವರ ಮೇಲೆ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು, ಹಿಂದೂ ಜನಜಾಗೃತಿ ಸಮಿತಿಯ ರಾಜ್ಯ ವಕ್ತಾರ ಶ್ರೀ. ಮೋಹನ ಗೌಡ ಇವರು ಆಗ್ರಹಿಸಿದ್ದಾರೆ.
ಇತ್ತೀಚಿಗೆ ಕಾಶ್ಮೀರದಲ್ಲಿ ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿಯ (ಪಿಡಿಪಿ) ಮುಖ್ಯಸ್ಥೆ ಮತ್ತು ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಇವರ ಪುತ್ರಿ ಇಲ್ತಿಜಾ ಮುಫ್ತಿ ಇವರು ಎಕ್ಸ್ ನಲ್ಲಿ ಒಂದು ಆಕ್ಷೇಪಾರ್ಹ ಪೋಸ್ಟ್ ಮಾಡಿದ್ದಾರೆ. ಆ ಪೋಸ್ಟ್ ನಲ್ಲಿ ಅವರು ಹಿಂದುತ್ವ ಒಂದು ರೋಗವಾಗಿದೆ, ಅದು ಕೋಟ್ಯಾಂತರ ಭಾರತೀಯರನ್ನು ಆವರಿಸಿದೆ ಮತ್ತು ದೇವರ ಹೆಸರು ಕಳಂಕಿತಗೊಳಿಸಿದ್ದಾರೆ. ಪ್ರಭು ರಾಮನಿಗೆ ನಾಚಿಕೆ ಅನಿಸಬೇಕು, ಹೀಗೆ ಬರೆದಿದ್ದಾರೆ. ಒಂದು ಕಥಿತ ವಿಡಿಯೋ ಅದು ಯಾವ ಸ್ಥಳದಾಗಿದೆ, ಯಾವಾಗ ನಡೆದಿದೆ, ಇದರ ಯಾವುದೇ ಮಾಹಿತಿ ನೀಡದೆ, ನೇರ ಹಿಂದೂಗಳ ಶ್ರದ್ಧಾಸ್ಥಾನವಾಗಿರುವ ಪ್ರಭು ಶ್ರೀ ರಾಮನ ಕುರಿತು ಮತ್ತು ಹಿಂದೂ ಧರ್ಮದ ಬಗ್ಗೆ ಹೇಳಿಕೆ ನೀಡಿ ಇಲ್ತಿಜಾ ಇವರು ಕೋಟ್ಯಾಂತರ ಹಿಂದೂಗಳ ಧಾರ್ಮಿಕ ಭಾವನೆಗೆ ನೋವುಂಟು ಮಾಡಿದ್ದಾರೆ.
ಇದೇ ರೀತಿ ಹೇಳಿಕೆ ಯಾವುದಾದರೂ ಹಿಂದೂವಿನಿಂದ ಬಂದಿದ್ದರೆ, ಕೂಡಲೇ ‘ಸರ್ ತನ್ ಸೇ ಜುದಾ’ ದ ಘೋಷಣೆಗಳು ಮೂಡುತ್ತಿದ್ದವು. ಅವರ ಮೇಲೆ ತಕ್ಷಣ ಕ್ರಮ ಕೈಗೊಳ್ಳಲಾಗುತ್ತಿತ್ತು. ಮೆಹಬೂಬಾ ಮುಫ್ತಿ ಇವರ ಸರಕಾರ ಇರುವ ಸಮಯದಲ್ಲಿ ಬಿ. ಕೆ. ಗಂಜು ಇವರನ್ನು ಒಂದು ಕಂಟೇನರ್ ನಲ್ಲಿ ಬಂಧಿಸಿ ಹತ್ಯೆ ಮಾಡಿದ್ದರು. ಅದರ ನಂತರ ಅವರ ಪತ್ನಿಯ ಎದುರಿಗೆ ಅವರ ಚಿಕ್ಕ ಮಗನನ್ನು ಹತ್ಯೆ ಮಾಡಿ ಅದರ ರಕ್ತ ಸೇರಿಸಿರುವ ಅನ್ನ ತಿನಿಸಿದ್ದರು, ಈ ಕುರಿತು ಎಂದಿಗೂ ಮುಫ್ತಿ ಪರಿವಾರಕ್ಕೆ ನಾಚಿಕೆ ಅನಿಸಲಿಲ್ಲ, ಹಾಗಾಗಿ ಕೇವಲ ಹಿಂದೂ ಸಮಾಜವನ್ನು ಗುರಿಯಾಗಿಸಿ ಹೇಳಿಕೆ ನೀಡುವವರ ಮೇಲೆ ಕಠಿಣ ಕ್ರಮಕೈಗೊಳ್ಳಬೇಕು.