Supreme Court Judgement : ಧರ್ಮದ ಆಧಾರದ ಮೇಲೆ ಮೀಸಲಾತಿ ನೀಡಲಾಗುವುದಿಲ್ಲ ! – ಸರ್ವೋಚ್ಚ ನ್ಯಾಯಾಲಯ

ಸರ್ವೋಚ್ಚ ನ್ಯಾಯಾಲಯದಿಂದ ಬಂಗಾಳದ ತೃಣಮೂಲ ಕಾಂಗ್ರೆಸ್ ಸರಕಾರಕ್ಕೆ ಛೀಮಾರಿ

ನವ ದೆಹಲಿ – ಧರ್ಮದ ಆಧಾರದ ಮೇಲೆ ಮೀಸಲಾತಿ ನೀಡಲು ಸಾಧ್ಯವಿಲ್ಲ ಎಂದು ಸರ್ವೋಚ್ಚ ನ್ಯಾಯಾಲಯವು ಬಂಗಾಳ ಸರಕಾರಕ್ಕೆ ತಿಳಿಸಿದೆ. ಕೊಲಕಾತಾ ಉಚ್ಚ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಗಳ ವಿಚಾರಣೆ ನಡೆಸುವಾಗ ಸರ್ವೋಚ್ಚ ನ್ಯಾಯಾಲಯವು ಈ ಸ್ಪಷ್ಟನೆ ನೀಡಿದೆ. 2010 ರಿಂದ ಬಂಗಾಳವು ಇತರ ಹಿಂದುಳಿದವರ್ಗದ ಸ್ಥಾನಮಾನ ಹೊಂದಿರುವ ಹಲವಾರು ಜಾತಿಗಳಿಗೆ ಮೀಸಲಾತಿಯನ್ನು ನೀಡಿತ್ತು, ಅದನ್ನು ಉಚ್ಚ ನ್ಯಾಯಾಲಯವು ರದ್ದು ಮಾಡಿತ್ತು. ಈ ಪ್ರಕರಣದ ಮುಂದಿನ ವಿಚಾರಣೆಯನ್ನು ಜನವರಿ 7 ರಂದು ನಡೆಸಲಾಗುವುದು ಎಂದು ಸರ್ವೋಚ್ಚ ನ್ಯಾಯಾಲಯವು ಹೇಳಿದೆ.

ಸಂಪಾದಕೀಯ ನಿಲುವು

ಭಾರತದ ಸಂವಿಧಾನದ ಅನುಸಾರ ಧರ್ಮದ ಪ್ರಕಾರ ಮೀಸಲಾತಿ ನೀಡಲಾಗದಿದ್ದರೂ, ತಥಾಕಥಿತ  ಜಾತ್ಯತೀತ ರಾಜಕೀಯ ಪಕ್ಷಗಳು ಮುಸ್ಲಿಮರಿಗೆ ಮೀಸಲಾತಿ ನೀಡುವ ಆಸೆಯನ್ನು ತೋರಿಸಿ ಅವರ ಮತಗಳನ್ನು ಪಡೆಯಲು ಪ್ರಯತ್ನಿಸುತ್ತವೆ ಮತ್ತು ನಂತರ ನ್ಯಾಯಾಲಯಗಳಿಗೆ ಅಂತಹ ನಿರ್ಧಾರವನ್ನು ರದ್ದುಗೊಳಿಸುವ ಸಮಯ ಬರುತ್ತದೆ !