ಹಿಂದುದ್ವೇಷಿ ಎಂ.ಎಫ್. ಹುಸೇನ್ ಚಿತ್ರಿಸಿದ ಹಿಂದೂ ದೇವತೆಗಳ ಅಶ್ಲೀಲ ಚಿತ್ರಗಳನ್ನು ಪ್ರದರ್ಶಿಸಿದ ‘ದೆಹಲಿ ಆರ್ಟ್ ಗ್ಯಾಲರಿ’ ವಿರುದ್ಧ ದೂರು ದಾಖಲು !

ಬಲಬದಿಗೆ ದೆಹಲಿ ಉಚ್ಚನ್ಯಾಯಾಲಯದ ವಕಿಲೆ ಅಮಿತಾ ಸಚದೇವ

ನವ ದೆಹಲಿ – ‘ಹುಸೇನ್ ದಿ ಟೈಮ್ಲೆಸ್ ಮಾಡರ್ನಿಸ್ಟ್’ ಶೀರ್ಷಿಕೆಯಡಿಯಲ್ಲಿ ದೆಹಲಿಯಲ್ಲಿ ಆಯೋಜಿಸಲಾದ ಪ್ರದರ್ಶನದಲ್ಲಿ, ದಿವಂಗತ ಹಿಂದೂದ್ವೇಷಿ ಚಿತ್ರಕಾರ ಎಂ.ಎಫ್. ಹುಸೇನ್ ಚಿತ್ರಿಸಿದ ಹಿಂದೂ ದೇವತೆಗಳ ಅಶ್ಲೀಲ ಚಿತ್ರಗಳನ್ನು ಪ್ರದರ್ಶಿಸಿದ್ದಕ್ಕಾಗಿ ‘ದೆಹಲಿ ಆರ್ಟ್ ಗ್ಯಾಲರಿ’ ಮತ್ತು ಅದರ ವ್ಯವಸ್ಥಾಪಕ ನಿರ್ದೇಶಕ ಆಶಿಶ ಆನಂದ ವಿರುದ್ಧ ದೂರು ದಾಖಲಿಸಲಾಗಿದೆ. ದೆಹಲಿ ಉಚ್ಚನ್ಯಾಯಾಲಯದ ವಕಿಲೆ ಅಮಿತಾ ಸಚದೇವ ಅವರು ಈ ದೂರು ದಾಖಲಿಸಿದ್ದಾರೆ. ಹಿಂದುದ್ವೇಷಿ ಚಿತ್ರಕಾರ ಎಂ.ಎಫ್. ಹುಸೇನ್ ಹಿಂದೂ ದೇವತೆಗಳ ಅಶ್ಲೀಲ ಚಿತ್ರಗಳನ್ನು ಚಿತ್ರಿಸಿ, ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡಿದ್ದಾರೆ ಮತ್ತು ಕಾನೂನು ಉಲ್ಲಂಘಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

1. ಈ ಪ್ರದರ್ಶನದಲ್ಲಿ ತೊಡೆಯ ಮೇಲೆ ಕುಳಿತಿರುವ ಬೆತ್ತಲೆ ಮಹಿಳೆಯೊಂದಿಗೆ ಶ್ರೀಗಣೇಶನ ಚಿತ್ರ, ಕೈಯಲ್ಲಿ ನಗ್ನ ಸ್ತ್ರೀಯನ್ನು ಹಿಡಿದುಕೊಂಡು ಹಾರುತ್ತಿರುವ ಭಗವಾನ್ ಹನುಮಂತನ ಚಿತ್ರ ಮತ್ತು ಇತರ ಅನೇಕ ಮಹಿಳೆಯರ ನಗ್ನ ಚಿತ್ರಗಳನ್ನು ಪ್ರದರ್ಶಿಸಲಾಗಿದೆ.

2. ಎಂ.ಎಫ್. ಹುಸೇನ್ ಚಿತ್ರಿಸಿದ ಹಲವು ಪ್ರಕರಣಗಳು ಈತನ ವಿರುದ್ಧ ಈ ಮೊದಲು ದೂರು ದಾಖಲಾಗಿತ್ತು. ಆದರೆ, ಕಾನೂನನ್ನು ಎದುರಿಸುವ ಬದಲು ಅವನು ಕತಾರಾ ಓಡಿಹೋಗಿದ್ದ. ಅವರು ಜೂನ್ 2011 ರಲ್ಲಿ ನಿಧನರಾದರು.

3. ಈ ಪ್ರದರ್ಶನದಿಂದ ಅಸಂಖ್ಯಾತ ಹಿಂದೂಗಳ ಧಾರ್ಮಿಕ ಶ್ರದ್ಧೆಗಳನ್ನು ಅವಮಾನಿಸಿದೆ. ಹುಸೇನ್ ಚಿತ್ರಿಸಿದ ಹಿಂದೂ ದೇವತೆಗಳ ಅಶ್ಲೀಲ ಚಿತ್ರಗಳನ್ನು ಪ್ರದರ್ಶಿಸಿದ ‘ದೆಹಲಿ ಆರ್ಟ್ ಗ್ಯಾಲರಿ’ ಮತ್ತು ಅದರ ವ್ಯವಸ್ಥಾಪಕ ನಿರ್ದೇಶಕ ಆಶಿಶ ಆನಂದ ವಿರುದ್ಧ ಪ್ರಕರಣ ದಾಖಲಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ವಕಿಲೆ ಅಮಿತಾ ಸಚದೇವ ಇವರು ಪೊಲೀಸರಿಗೆ ಮನವಿ ಮಾಡಿದ್ದಾರೆ.

ಸಂಪಾದಕೀಯ ನಿಲುವು

ಹುಸೇನ್ ಬದುಕಿರುವವರೆಗೂ ಪ್ರಪಂಚದಾದ್ಯಂತ ಹಿಂದೂಗಳು ಅವರ ವಿರುದ್ಧ ನ್ಯಾಯಸಮ್ಮತವಾದ ರೀತಿಯಲ್ಲಿ ಹೋರಾಡಿದರು. ಕೋಟಿಗಟ್ಟಲೆ ಹಿಂದೂಗಳ ಧಾರ್ಮಿಕ ಭಾವನೆಗಳ ಬಗ್ಗೆ ‘ದೆಹಲಿ ಆರ್ಟ್ ಗ್ಯಾಲರಿ’ಗೆ ಅರಿವಿಲ್ಲವೇ? ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು !