ಮಹಬೂಬಾ ಮುಫ್ತಿ ಅವರ ಪುತ್ರಿ ಇಲ್ತಿಜಾ ಅವರ ‘ಎಕ್ಸ್’ ನಲ್ಲಿ ಪೋಸ್ಟ್!
ಶ್ರೀನಗರ (ಜಮ್ಮು-ಕಾಶ್ಮೀರ) – ಕಾಶ್ಮೀರದ ಪೀಪಲ್ಸ್ ಡೆಮೋಕ್ರ್ಯಾಟಿಕ್ ಪಾರ್ಟಿ (ಪಿಡಿಪಿ) ಪಕ್ಷದ ನಾಯಕಿ ಮಹಬೂಬಾ ಮುಫ್ತಿ ಅವರ ಪುತ್ರಿ ಇಲ್ತಿಜಾ ಮುಫ್ತಿ ಅವರು ಎಕ್ಸ್ ನಲ್ಲಿ ಪೋಸ್ಟ್ ಮಾಡಿ ‘ಹಿಂದೂತ್ವ ಒಂದು ರೋಗವಾಗಿದೆ, ಇದು ಕೋಟ್ಯಾಂತರ ಭಾರತೀಯರನ್ನು ಆವರಿಸಿದೆ ಮತ್ತು ದೇವರ ಹೆಸರನ್ನು ಕಳಂಕಿತಗೊಳಿಸಿದೆ’ ಎಂದು ಹೇಳಿದ್ದಾರೆ. ಇಲ್ತಿಜಾ ಅವರು ಒಂದು ವೀಡಿಯೋವನ್ನು ಹಂಚಿಕೊಂಡು ‘ಪ್ರಭು ರಾಮನಿಗೆ ನಾಚಿಕೆಯಾಗಬೇಕು’ ಎಂದೂ ಹೇಳಿದ್ದಾರೆ.
ಇಲ್ತಿಜಾ ಅವರು ಹಂಚಿಕೊಂಡ ವೀಡಿಯೋವನ್ನು ಶಿರೀನ್ ಖಾನ್ ಎಂಬ ಎಕ್ಸ್ ಬಳಕೆದಾರರು ಹಂಚಿಕೊಂಡಿದ್ದರು. ಅದರಲ್ಲಿ, ‘ಮುಸ್ಲಿಂ ಅಪ್ರಾಪ್ತ ಮಕ್ಕಳ ಮೇಲೆ ಕ್ರೂರವಾಗಿ ಹಲ್ಲೆ ಮಾಡಿ, ಅವರಿಗೆ ‘ಜಯ ಶ್ರೀ ರಾಮ್’ ಎಂದು ಹೇಳಲು ಬಲವಂತ ಪಡಿಸಲಾಗಿದೆ. ಈ ಅಪರಾಧಿಗಳ ಮೇಲೆ ಏಕೆ ಕ್ರಮ ತೆಗೆದುಕೊಳ್ಳಲಾಗಿಲ್ಲ?’ ಎಂದು ಹೇಳಿದ್ದಾರೆ. ಈ ವೀಡಿಯೋ ಸತ್ಯಾಸತ್ಯತೆ ಇನ್ನೂ ಸ್ಪಷ್ಟವಾಗಿಲ್ಲ.
ಸಂಪಾದಕೀಯ ನಿಲುವು
|