ಜಮ್ಮು – ಜಿಲ್ಲಾಡಳಿತವು ಚನ್ನಿ ರಾಮ, ಸುಂಜ್ವಾನ್ ಮತ್ತು ನರ್ವಾಲ್ ಬಾಲಾ ಪ್ರದೇಶಗಳಲ್ಲಿ 14 ಸ್ಥಳಗಳಲ್ಲಿ ನೆಲೆಸಿರುವ 409 ರೋಹಿಂಗ್ಯಾಗಳಿಗೆ ನೀರು ಮತ್ತು ವಿದ್ಯುತ್ ಸಂಪರ್ಕಗಳನ್ನು ಕಡಿತಗೊಳಿಸಿದೆ. ರೋಹಿಂಗ್ಯಾಗಳನ್ನು ಆದಷ್ಟು ಬೇಗ ತಮ್ಮ ಭೂಮಿಯಿಂದ ಹೊರಹಾಕುವಂತೆ ಜಿಲ್ಲಾಡಳಿತವು ಸ್ಥಳದ ಮಾಲೀಕರಿಗೆ ತಿಳಿಸಿದೆ ಎಂದು ಆಡಳಿತದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
1. ಬಾಡಿಗೆದಾರರ ಪರಿಶೀಲನೆ ಕಾರ್ಯ ಮುಂದುವರಿಯಲಿದೆ ಎಂದು ತಿಳಿಸಿದರು. ಜಮ್ಮು ಜಿಲ್ಲಾಧಿಕಾರಿ ಸಚಿನ ಕುಮಾರ ವೈಶ್ಯ ಅವರ ಸೂಚನೆಯ ಮೇರೆಗೆ ಜಮ್ಮು ಪೊಲೀಸರು ಇತ್ತೀಚೆಗೆ ಜಿಲ್ಲೆಯಲ್ಲಿ ಬಾಡಿಗೆದಾರರನ್ನು ಪರಿಶೀಲಿಸಲು ಚಾಲನೆ ನೀಡಿದ್ದರು. ಈ ಅಭಿಯಾನದ ಅಡಿಯಲ್ಲಿ ಆಡಳಿತದಿಂದ ರೋಹಿಂಗ್ಯಾ ನಿರಾಶ್ರಿತರು ಮತ್ತೆ ಗುರಿಯಾಗಿದ್ದಾರೆ.
2. ರೊಹಿಂಗ್ಯಾ ಮೂಲದ ಸಲಾಮತ್ ಉಲ್ಲಾ ಮಾತನಾಡಿ, ‘ನಾವು ಕಿರುಕುಳದಿಂದ ತಪ್ಪಿಸಿಕೊಳ್ಳಲು ಮ್ಯಾನ್ಮಾರ್‌ದಿಂದ ಓಡಿಹೋದೆವು. ನಾವು 2008 ಮತ್ತು 2012 ರಿಂದ ಜಮ್ಮುವಿನಲ್ಲಿ ವಾಸಿಸುತ್ತಿದ್ದೇವೆ. ಈಗ ಎಲ್ಲಿಗೆ ಹೋಗಲಿ ?’ ಎಂದು ಪ್ರಶ್ನಿಸಿದ್ದಾರೆ.
3. ಅಕ್ಟೋಬರ್ 2023 ರಲ್ಲಿ, ಕಿಶ್ತ್ವಾಡ ಜಿಲ್ಲೆಯ ರೊಹಿಂಗ್ಯಾ ಮಹಿಳೆ ಅನ್ವಾರಾ ಬೇಗಂ ನಿವಾಸ ಪ್ರಮಾಣಪತ್ರವನ್ನು ನಕಲಿಯಾಗಿದೆ ಎಂದು ಬಂಧಿಸಲಾಯಿತು. ಇದರೊಂದಿಗೆ ದಲ್ಲಾಳಿ ಹಾಗೂ ಕಂದಾಯ ಅಧಿಕಾರಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
4. ‘ರೋಹಿಂಗ್ಯಾಗಳು ಇಲ್ಲಿನ ಭದ್ರತೆಗೆ ಅಪಾಯವಾಗಿದೆ. ಹೀಗಾಗಿ ಬಾಡಿಗೆದಾರರನ್ನು ಪರಿಶೀಲಿಸುವುದು ಅನಿವಾರ್ಯವಾಗಿದೆ’ ಎಂದು ಅಧಿಕಾರಿ ತಿಳಿಸಿದರು.
5. ಸರಕಾರದ ಅಂಕಿಅಂಶಗಳ ಪ್ರಕಾರ, ಮ್ಯಾನ್ಮಾರ್ ಮತ್ತು ಬಾಂಗ್ಲಾದೇಶದಿಂದ ಸುಮಾರು 13 ಸಾವಿರದ 400 ಅಕ್ರಮ ವಲಸಿಗರು ಜಮ್ಮು ಮತ್ತು ಕಾಶ್ಮೀರದಲ್ಲಿ ವಾಸಿಸುತ್ತಿದ್ದಾರೆ.
ಸಂಪಾದಕೀಯ ನಿಲುವುಇಂತಹ ಕ್ರಮ ಕೈಗೊಳ್ಳುವುದು ಸರಿಯಾಗಿಯೇ ಇದೆ; ಆದರೆ ಈ ರೋಹಿಂಗ್ಯಾಗಳು ಜಮ್ಮುವಿನೊಳಗೆ ಹೇಗೆ ನುಸುಳಿದರು ಮತ್ತು ಅವರಿಗೆ ಉಳಿಯಲು ಯಾರು ಅವಕಾಶ ಮಾಡಿಕೊಟ್ಟರು ಎಂಬುದೂ ಮುಖ್ಯವಾಗಿದ್ದು, ಈ ನುಸುಳುವಿಕೆಗೆ ಅವಕಾಶ ನೀಡಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ! |