ಧರ್ಮದ ವಿಷಯದಲ್ಲಿ ಪ.ಪೂ. ಸ್ವಾಮಿ ವರದಾನಂದ ಭಾರತಿಯವರ ಅಮೂಲ್ಯ ಮಾರ್ಗದರ್ಶನ !
ಇಂದು ಯುವಕರಲ್ಲಿ ಧರ್ಮದ ಬಗ್ಗೆ ಉದಾಸೀನತೆ ಕಂಡು ಬರುತ್ತದೆ, ಅದರ ೨ – ೩ ಕಾರಣಗಳನ್ನು ಗಮನದಲ್ಲಿಡಬೇಕು.
ಅ. ಎಲ್ಲಕ್ಕಿಂತ ಮಹತ್ವದ ಕಾರಣವೆಂದರೆ ಧರ್ಮದ ವಿಷಯದಲ್ಲಿನ ನಿರ್ದಿಷ್ಠ ಜ್ಞಾನದ ಅಭಾವ.
ಆ. ಇನ್ನಿತರ ಕಾರಣಗಳೆಂದರೆ ಸಂಸ್ಕಾರಗಳ ಅಭಾವ.
ಇ. ವಿವಿಧ ಮಾಧ್ಯಮಗಳಿಂದ ಸ್ಥೈರ್ಯ ಹಾಗೂ ಸ್ವೈರಾಚಾರದ ಆಕರ್ಷಣೆಯನ್ನು ಹೆಚ್ಚಿಸಲಾಗುತ್ತದೆ. ಹಿಂದೂ ಯುವಕರ ಜೀವನ ಪದ್ಧತಿಯನ್ನು ಅನಾವಶ್ಯಕ ಪ್ರಕ್ಷುಬ್ಧರನ್ನಾಗಿ ಮಾಡಿರುವುದರಿಂದ ಅವರಲ್ಲಿ ಬೇರೆ ಯಾವುದಕ್ಕೂ ಸಮಯ ಉಳಿಯುವುದೆ ಇಲ್ಲ.
ಈ ಪರಿಸ್ಥಿತಿಗೆ ಯಾರಾದರೊಬ್ಬರನ್ನು ಹೊಣೆಗಾರರೆಂದು ಪರಿಗಣಿಸುವುದು ಯೋಗ್ಯವಲ್ಲ. ಏಕೆಂದರೆ ಈ ಅವಸ್ಥೆ ಒಂದು ಪೀಳಿಗೆಯಲ್ಲಿ ನಿರ್ಮಾಣವಾಗಿರುವುದಲ್ಲ. ಅನೇಕ ಪೀಳಿಗೆಗಳಲ್ಲಿನ ಯುವಕರ ಸ್ಥಿತಿ ಈ ಮೇಲಿನಂತೆಯೆ ಮುಂದುವರಿಯುತ್ತಿದೆ, ಇದು ಅದರ ಪರಿಣಾಮವಾಗಿದೆ. ಪ್ರತಿಯೊಂದು ಪೀಳಿಗೆಯಲ್ಲಿನ ಸತ್ಪುರುಷರ ಅಪವಾದವನ್ನು ಬಿಟ್ಟರೆ ಬಹಳಷ್ಟು ಬುದ್ದಿವಂತರು ಮತ್ತು ವಿಚಾರವಂತರು ಈ ಪರಿಸ್ಥಿತಿಯನ್ನು ಬದಲಾಯಿಸಲು ಹೆಚ್ಚೇನೂ ಪ್ರಯತ್ನಿಸಲಿಲ್ಲ, ತದ್ವಿರುದ್ಧ ಅವರು ಅದನ್ನು ಇನ್ನೂ ಹೆಚ್ಚು ಕೆಡಿಸಲು ಪ್ರಯತ್ನಿಸಿದರು. ಅದಕ್ಕೆ ತಾವು ಸತ್ಪುರುಷರೆನಿಸಿಕೊಳ್ಳುವ ಅನೇಕ ಜನರು ತಮ್ಮಿಂದಾದಷ್ಟು ಪ್ರಾಮಾಣಿಕ ಪ್ರಯತ್ನ ಮಾಡಿದರು; ಆದರೆ ವಿಕೃತ ವಿಚಾರಗಳನ್ನು ಮಂಡಿಸುವವರ ಸಂಖ್ಯೆ ಮತ್ತು ಪ್ರಭಾವ ದೊಡ್ಡದಿರುವುದರಿಂದ ಅದರಿಂದ ಹೆಚ್ಚೇನು ಪರಿಣಾಮವಾಗಲಿಲ್ಲ.
ಧರ್ಮದ ಬಗೆಗಿನ ಸಿದ್ಧಾಂತಗಳನ್ನು ಆಚರಣೆಯಲ್ಲಿ ತಂದು ಅದರಿಂದ ಲಾಭಪಡೆದರೆ ಉದಾಸೀನತೆ ಕಡಿಮೆಯಾಗಬಹುದು !
ಆದರೂ ಇಂದು ಅನೇಕ ಯುವಕರು ಧರ್ಮದ ವಿಷಯದಲ್ಲಿ ಜಿಜ್ಞಾಸೆಯಿಂದ ಕೆಲವು ವಿಚಾರಗಳ ಬಗ್ಗೆ ಚರ್ಚೆಯನ್ನು ಮಾಡುತ್ತಾರೆ. ಒಳ್ಳೆಯ ಸಿದ್ಧಾಂತಗಳನ್ನು ಹೇಗೆ ಪುನರ್ಸ್ಥಾಪಿಸಬಹುದು, ಎಂಬುದರ ವಿಚಾರ ಮಾಡುತ್ತಾರೆ. ಇದು ಒಳ್ಳೆಯ ಆಶಾದಾಯಕ ಲಕ್ಷಣವೆಂದು ಹೇಳಬೇಕು. ಇದೆಲ್ಲವೂ ಪೂರ್ವಜರು ಮತ್ತು ಸಂತ-ಮಹಾತ್ಮರ ಪ್ರಯತ್ನದ ಫಲವಾಗಿದೆ, ಎಂಬುದನ್ನು ನಿರಾಕರಿಸುವಂತಿಲ್ಲ. ಹೇಗೆ ಧರ್ಮದ ವಿಷಯದ ಸಂಕಲ್ಪನೆಯು ಸ್ಪಷ್ಟವಾಗುತ್ತಾ ಹೋಗುವುದೊ, ಅದರಲ್ಲಿನ ದೋಷಗಳನ್ನು ಬದಿಗಿಟ್ಟು ಮೂಲಭೂತ ಸಿದ್ಧಾಂತಗಳನ್ನು ಆಚರಣೆಯಲ್ಲಿ ತರಲಾಗುವುದು ಹಾಗೂ ಅದರಿಂದಾಗುವ ಲಾಭವು ಸ್ಪಷ್ಟವಾಗುತ್ತಾ ಹೋದಂತೆ ಈ ಉದಾಸೀನತೆ ಮತ್ತು ಉಪೇಕ್ಷೆ ಕಡಿಮೆಯಾಗುತ್ತಾ ಹೋಗುವುದು.
– ಪ.ಪೂ. ಸ್ವಾಮಿ ವರದಾನಂದ ಭಾರತಿ (೧೯೯೮) (ಆಧಾರ : ‘ಜಿಜ್ಞಾಸಾ’, ಶ್ರೀವರದಾನಂದ ಪ್ರತಿಷ್ಠಾನ, ಶ್ರೀ ಕ್ಷೇತ್ರ ಪಂಢರಪುರ)