ಅಥೆನ್ಸ್ (ಗ್ರೀಸ್) – ಪೋಲ್ಯಾಂಡಿನ ಅನಾಸ್ತಾಝಾ ರುಬಿನ್ಸ್ಕಾ ಎಂಬ ಹೆಸರಿನ ಓರ್ವ ೨೭ ವರ್ಷದ ಮಹಿಳೆಯನ್ನು ಅಪಹರಿಸಿ ಬಲಾತ್ಕಾರ ಮಾಡಿ ಬರ್ಬರ ಹತ್ಯೆ ಮಾಡಿದ ಪ್ರಕರಣದಲ್ಲಿ ಸಲಾ ಹುದ್ದೀನ್ ಎಂಬ ಬಾಂಗ್ಲಾದೇಶಿ ಮುಸಲ್ಮಾನನಿಗೆ ಇಲ್ಲಿಯ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿದೆ.
೧. ಅನಾಸ್ತಾಝಾ ಗ್ರೀಕ ದ್ವಿಪದಲ್ಲಿ ನಾಪತ್ತೆಯಾದ ನಂತರ ವಾರವೆಲ್ಲ ನಡೆದಿರುವ ತನಿಖೆಯ ನಂತರ ಜೂನ್ ೨೦೨೩ ರಲ್ಲಿ ಗ್ರೀಕ್ ಪೊಲೀಸರಿಗೆ ಆಕೆಯ ಶವ ಪತ್ತೆಯಾಗಿತ್ತು.
೨. ಆಕೆ ಒಂದು ರೆಸ್ಟೋರೆಂಟ್‌ನಲ್ಲಿ ಪಾಕಿಸ್ತಾನ ಮತ್ತು ಬಾಂಗ್ಲಾದೇಶದಲ್ಲಿನ ಕೆಲವು ಮುಸಲ್ಮಾನ ಗುಂಪುಗಳನ್ನು ಭೇಟಿ ಆಗಿದ್ದಳು. ಅದರ ನಂತರ ಆಕೆಯ ಅಪಹರಣವಾಗಿತ್ತು, ಎಂದು ಪೊಲೀಸರಿಗೆ ಮಾಹಿತಿ ದೊರೆತಿತ್ತು.
೩. ತೀರ್ಪಿನ ನಂತರ ಪ್ರತಿಕ್ರಿಯೆ ವ್ಯಕ್ತಪಡಿಸುವಾಗ ಅನಾಸ್ತಾ ಝಾನ ತಂದೆ ಅಂದ್ರೆಜ್ ರುಬಿನ್ಸ್ಕಿ ಇವರು, ‘ಈ ಶಿಕ್ಷೆ ಅನಸ್ತಾಂಝಾನಳನ್ನು ಹಿಂತಿರುಗಿ ತರಲಾರದು; ಆದರೆ ಕೊಲೆಗಾರನಿಗೆ ಯೋಗ್ಯವಾದ ಶಿಕ್ಷೆ ದೊರೆತಿದೆ. ಅವನು ಮತ್ತೆ ಎಂದು ಕೂಡ ಜೈಲಿನಿಂದ ಹೊರಗೆ ಬರಬಾರದು ಮತ್ತು ಯಾರನ್ನು ನೋಯಿಸುವ ಅವಕಾಶ ದೊರೆಯಬಾರದು’, ಎಂದು ಹೇಳಿದರು.
ಸಂಪಾದಕೀಯ ನಿಲುವುಬಾಂಗ್ಲಾದೇಶಿ ಮುಸಲ್ಮಾನರ ಚಟುವಟಿಕೆಯಿಂದ ಕೇವಲ ಭಾರತೀಯರಷ್ಟೇ ಅಲ್ಲದೆ, ಇಡೀ ಜಗತ್ತಿನಲ್ಲಿನ ಜನರ ತಲೆ ನೋವು ಹೆಚ್ಚಾಗಿದೆ, ಇದು ಇದರ ಒಂದು ಉದಾಹರಣೆ ! |