ಢಾಕಾ (ಬಾಂಗ್ಲಾದೇಶ) ಇಲ್ಲಿನ ಭಾರತೀಯ ಹೈಕಮಿಷನ್ ಎದುರು ಭಾರತ ವಿರೋಧಿ ಮೆರವಣಿಗೆ ತೆಗೆದು ಬೆದರಿಕೆ !
ಢಾಕಾ (ಬಾಂಗ್ಲಾದೇಶ) – ಭಾರತವು ಬಾಂಗ್ಲಾದೇಶವನ್ನು ಪ್ರತಿ ಹಂತದಲ್ಲೂ ಹಾನಿಗೊಳಿಸಬಹುದು. ಬಾಂಗ್ಲಾದೇಶದ ಜನರು ಅವರಿಗೆ ಇಷ್ಟವಾಗದ ಕಾರಣ ಅವರು ಶೇಖ್ ಹಸೀನಾಗೆ ಆಶ್ರಯ ನೀಡಿದರು. ಭಾರತ ಯಾರೊಂದಿಗೂ ಸ್ನೇಹ ಬೆಳೆಸಲು ಸಾಧ್ಯವಿಲ್ಲ. ಭಾರತವು ಚಿತ್ತಗಾವ ಕೇಳಿದರೆ ಬಂಗಾಳ, ಬಿಹಾರ ಮತ್ತು ಒಡಿಶಾವನ್ನು ಹಿಂದಕ್ಕೆ ತೆಗೆದುಕೊಳ್ಳುವುದಾಗಿ ಬಾಂಗ್ಲಾದೇಶ ನ್ಯಾಶನಲಿಸ್ಟ್ ಪಕ್ಷದ ಪ್ರಧಾನ ಕಾರ್ಯದರ್ಶಿ ರುಹುಲ್ ಕಬೀರ್ ರಿಜವಿ ಬೆದರಿಕೆ ಹಾಕಿದ್ದಾರೆ. ಈ ಪಕ್ಷದ ವತಿಯಿಂದ ಡಿಸೆಂಬರ್ 8 ರಂದು ಇಲ್ಲಿನ ಭಾರತೀಯ ಹೈಕಮಿಷನ್ ಎದುರು ಭಾರತದ ವಿರುದ್ಧ ಪ್ರತಿಭಟನೆ ನಡೆಸಿದರು. ಈ ಸಂದರ್ಭದಲ್ಲಿ ರಿಜ್ವಿ ಮಾತನಾಡುತ್ತಿದ್ದರು. ಆಗ ಆ ಪಕ್ಷದಿಂದ ಭಾರತೀಯ ಹೈಕಮಿಷನರ್ಗೆ ಮನವಿ ನೀಡಲಾಗಿದೆ. ಮೆರವಣಿಗೆ ಹಿನ್ನೆಲೆಯಲ್ಲಿ ಭಾರತೀಯ ಹೈಕಮಿಷನ್ ಎದುರು ಬಿಗಿ ಭದ್ರತೆ ಏರ್ಪಡಿಸಲಾಗಿತ್ತು. ಮೆರವಣಿಗೆಯ ನಂತರವೂ ಅಲ್ಲಿ 3 ಸೇನಾ ತುಕಡಿಗಳು ಮತ್ತು ಪೊಲೀಸರನ್ನು ನಿಯೋಜಿಸಲಾಗಿದೆ.
ರುಹುಲ್ ಕಬೀರ್ ರಿಜವಿ ತಮ್ಮ ಮಾತನ್ನು ಮುಂದುವರಿಸಿ, ಭಾರತದ ಆಶೀರ್ವಾದದಿಂದ ಶೇಖ್ ಹಸೀನಾ ಅವರು 16 ವರ್ಷಗಳ ಕಾಲ ಬಾಂಗ್ಲಾದೇಶವನ್ನು ಆಳಿದರು. ಭಾರತವು ಬಾಂಗ್ಲಾದೇಶೀಯರಿಗೆ ವೀಸಾಗಳನ್ನು (ದೇಶವನ್ನು ಪ್ರವೇಶಿಸಲು ನೀಡುವ ಅನುಮತಿ ಪತ್ರ) ನೀಡುವುದನ್ನು ನಿಲ್ಲಿಸಿದಾಗ ಬಾಂಗ್ಲಾದೇಶಕ್ಕೆ ಲಾಭವಾಯಿತು. ಹಾಗಾಗಿ ಬಾಂಗ್ಲಾದೇಶ ಈಗ ಸಮೃದ್ಧವಾಗಲಿದೆ. ಉತ್ಪಾದನೆ ಹೆಚ್ಚಾಗಲಿದೆ. ಭಾರತ ಗಡಿಯನ್ನು ಮುಚ್ಚಿ ಉತ್ತಮ ಕೆಲಸ ಮಾಡಿದೆ. ಭಾರತದಿಂದ ಮಾದಕ ಪದಾರ್ಥ ಬರುತ್ತಿತ್ತು; ಆದರೆ ಈಗ ಬರುವುದಿಲ್ಲ ಎಂದು ಹೇಳಿದ್ದಾರೆ.
ಸಂಪಾದಕೀಯ ನಿಲುವುಭಾರತದಿಂದ ಕಳುಹಿಸಲಾಗುತ್ತಿದ್ದ ಆಹಾರ ಧಾನ್ಯಗಳನ್ನೇ ನಂಬಿ ಬದುಕುತ್ತಿರುವ ಮುಸ್ಲಿಂ ಬಹುಸಂಖ್ಯಾತ ಬಾಂಗ್ಲಾದೇಶ ತನ್ನ ನೈಜ ಮನಃಸ್ಥಿತಿಯನ್ನು ತೋರಿಸಿದೆ. `ಹಾವುಗಳಿಗೆ ಹಾಲೆರೆದರೆ, ಅದು ವಿಷವನ್ನೇ ಕಾರುತ್ತದೆ’, ಎನ್ನುವುದು ಭಾರತಕ್ಕೆ ಯಾವಾಗ ತಿಳಿಯುತ್ತದೆ?, ಎನ್ನುವುದೇ ಪ್ರಶ್ನೆಯಾಗಿದೆ ! |