೧. ಸಂತ್ರಸ್ತ ಮಹಿಳೆಗೆ ೧೦ ಲಕ್ಷ ರೂಪಾಯಿ ಪರಿಹಾರ ನೀಡಬೇಕೆಂದು ಜಿಲ್ಲಾ ಗ್ರಾಹಕ ವೇದಿಕೆಯ ಆದೇಶ
ನವದೆಹಲಿಯ ‘ವೃಷಭ ವೈದ್ಯಕೀಯ ಕೇಂದ್ರದಲ್ಲಿ ಶ್ವೇತಾ ಖಂಡೇಲವಾಲ ಎಂಬ ಮಹಿಳೆಯನ್ನು ಹೆರಿಗೆಗಾಗಿ ಸೇರಿಸಲಾಗಿತ್ತು. ಅಲ್ಲಿ ೧೩.೯.೨೦೧೨ ರಂದು ಉಷಾ ಜೈನ್ ಮತ್ತು ಎ.ಕೆ. ಜೈನ್ ಈ ಆಧುನಿಕ ವೈದ್ಯರು ಅವಳ ‘ಎಲ್.ಎಸ್. ಸೀಜರಿಯನ್ ಶಸ್ತ್ರಚಿಕಿತ್ಸೆ ಮಾಡಿದರು. ಹೆರಿಗೆಯಾಗಿ ೫ ದಿನಗಳ ನಂತರ ಅವಳನ್ನು ಮನೆಗೆ ಕಳುಹಿಸಲಾಯಿತು. ಮನೆಗೆ ಹೋದ ನಂತರ ಶ್ವೇತಾಳ ಹೊಟ್ಟೆಯಲ್ಲಿ ತುಂಬಾ ನೋವು ಪ್ರಾರಂಭವಾಯಿತು. ಆದ್ದರಿಂದ ಅವಳನ್ನು ನವ ದೆಹಲಿಯ ‘ಸ್ಟೀಫನ್ ಆಸ್ಪತ್ರೆಗೆ ಸೇರಿಸಲಾಯಿತು. ವಿವಿಧ ಪರೀಕ್ಷಣೆಗಳ ನಂತರ ಅವಳ ಹೊಟ್ಟೆಯಲ್ಲಿ ಒಂದು ದೊಡ್ಡ ಹತ್ತಿಯ ಉಂಡೆ ಕಾಣಿಸಿತು. ಅಲ್ಲಿ ಒಂದುವರೆ ಲೀಟರ್ ಕೀವು (ಪಸ್) ಸಹ ಶೇಖರಣೆಯಾಗಿತ್ತು. ಆದ್ದರಿಂದ ಅವಳಿಗೆ ಪುನಃ ಶಸ್ತ್ರಚಿಕಿತ್ಸೆ ಮಾಡಿಸಬೇಕಾಯಿತು. ಈ ಘಟನೆಯ ನಂತರ ಆ ಮಹಿಳೆ ‘ವೃಷಭ ವೈದ್ಯಕೀಯ ಕೇಂದ್ರ ಮತ್ತು ಅಲ್ಲಿನ ಆಧುನಿಕ ವೈದ್ಯರ ವಿರುದ್ಧ ಪರಿಹಾರಕ್ಕಾಗಿ ಜಿಲ್ಲಾ ಗ್ರಾಹಕ ವೇದಿಕೆಯಲ್ಲಿ ದಾವೆಯನ್ನು ಮಾಡಿದಳು. ಈ ದಾವೆಯನ್ನು ಜಿಲ್ಲಾ ಗ್ರಾಹಕ ವೇದಿಕೆಯು ಒಪ್ಪಿ ಆ ಮಹಿಳೆಗೆ ೧೦ ಲಕ್ಷ ರೂಪಾಯಿ ನೀಡಬೇಕೆಂದು ಆದೇಶ ನೀಡಿತು. ಅದರ ವಿರುದ್ಧ ಆಸ್ಪತ್ರೆ ಮತ್ತು ಅಲ್ಲಿನ ವೈದ್ಯರು ರಾಜ್ಯಮಟ್ಟದ ಗ್ರಾಹಕ ವೇದಿಕೆಯಲ್ಲಿ ಸವಾಲೊಡ್ಡಿದರು. ಅಲ್ಲಿ ಅವರ ದಾವೆ ಸಮ್ಮತವಾಯಿತು. ಅವಳಿಗೆ ೫ ಲಕ್ಷ ಪರಿಹಾರ ಧನವನ್ನು ಕೊಡಬೇಕೆಂದು ನಿರ್ಧರಿಸಲಾಯಿತು
೨. ಸಂತ್ರಸ್ತ ಮಹಿಳೆಗೆ ೫ ಲಕ್ಷ ರೂಪಾಯಿ ಪರಿಹಾರ ನೀಡಬೇಕೆಂದು ರಾಷ್ಟ್ರೀಯ ಮಟ್ಟದ ಗ್ರಾಹಕ ವೇದಿಕೆಯ ಆದೇಶ
ಅನಂತರ ಆ ಮಹಿಳೆ ರಾಜ್ಯಮಟ್ಟದ ಗ್ರಾಹಕ ವೇದಿಕೆಯ ನಿರ್ಣಯದ ವಿರುದ್ಧ ರಾಷ್ಟ್ರೀಯ ಮಟ್ಟದ ಗ್ರಾಹಕ ವೇದಿಕೆಗೆ ಹೋದಳು. ಅಲ್ಲಿ ಆಧುನಿಕ ವೈದ್ಯರು ಈ ಮಹಿಳೆಗೆ ಜನವರಿ ೨೦೧೦ ರಲ್ಲಿ ರಾಜಸ್ಥಾನದಲ್ಲಿ ಯಾವುದೊ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು. ಅದೇ ಸಮಯದಲ್ಲಿ ಹತ್ತಿಯ ಉಂಡೆ ಹೊಟ್ಟೆಯಲ್ಲಿ ಉಳಿದಿರಬಹುದು. ಇದನ್ನು ಈ ಮಹಿಳೆ ಅಡಗಿಸಿಟ್ಟಿರಬಹುದು. ಅನಂತರ ನ್ಯಾಯಾಲಯ ರೋಗಿಯ ಶಸ್ತ್ರಚಿಕಿತ್ಸೆಗೆ ಸಂಬಂಧಿಸಿದ ಕಾಗದಪತ್ರಗಳನ್ನು ತರಿಸಿತು. ಆಗ ನ್ಯಾಯಾಲಯ ‘ಎಕ್ಸ್‌ರೇ’ ಮತ್ತು ‘ಸೊನೋಗ್ರಾಫಿಯ ವರದಿಯನ್ನು ನೋಡಿತು. ಅದರಿಂದ ಆ ಸಮಯದಲ್ಲಿ ಅವಳ ಹೊಟ್ಟೆಯಲ್ಲಿ ಏನೂ ಇರಲಿಲ್ಲವೆಂಬುದು ಸ್ಪಷ್ಟವಾಗಿತ್ತು. ಏನಾದರೂ ಇರುತ್ತಿದ್ದರೆ ಆ ಎರಡು ವರ್ಷಗಳಲ್ಲಿ ಅವಳಿಗೆ ಅದರಿಂದ ತೊಂದರೆಯಾಗಬೇಕಾಗಿತ್ತು. ಒಂದು ವೇಳೆ ಏನಾದರೂ ಇರುತ್ತಿದ್ದರೆ ವೃಷಭ ಆಸ್ಪತ್ರೆಯವರು ತಕ್ಷಣ ಆ ವಿಷಯವನ್ನು ಮಹಿಳೆಗೆ ಹೇಳಿ ಅದಕ್ಕೆ ಬೇರೆಯೆ ಶಸ್ತ್ರಚಿಕಿತ್ಸೆ ಮಾಡುತ್ತಿದ್ದರು, ಎಂಬುದು ಗಮನಕ್ಕೆ ಬಂದಿತು. ಇದರಿಂದ ವೃಷಭ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಮಾಡಿದಾಗಲೇ ಮಹಿಳೆಯ ಹೊಟ್ಟೆಯಲ್ಲಿ ಹತ್ತಿಯ ಉಂಡೆ ಉಳಿದಿತ್ತು, ಆದ್ದರಿಂದ ‘ಅದಕ್ಕೆ ಕಾರಣವಾಗಿರುವ ಆಸ್ಪತ್ರೆ ಮತ್ತು ಆಧುನಿಕ ವೈದ್ಯರು ಸಂತ್ರಸ್ತ ಮಹಿಳೆಗೆ ೫ ಲಕ್ಷ ರೂಪಾಯಿ ಪರಿಹಾರವನ್ನು ನೀಡಬೇಕು’, ಎಂದು ನ್ಯಾಯಾಲಯ ಆದೇಶ ನೀಡಿತು. ಅಷ್ಟು ಮಾತ್ರವಲ್ಲ ಶಸ್ತಚಿಕಿತ್ಸೆಯ ತಾರೀಕಿನಿಂದ ಶೇ. ೭ ರಷ್ಟು ಬಡ್ಡಿಯನ್ನೂ ಕೊಡಬೇಕು’, ಎಂದು ಹೇಳಲಾಯಿತು.
ಇವೆರಡೂ ಪ್ರಕರಣಗಳಿಂದ ಗಮನಕ್ಕೆ ಬರುವುದೇನೆಂದರೆ, ಆಧುನಿಕ ವೈದ್ಯರು, ಅರವಳಿಕೆ ತಜ್ಞರು, ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಮಾಡುವಾಗ ಮತ್ತು ನಂತರ ರೋಗಿಗಳ ನಿಗಾ ಹೇಗೆ ಇಡುತ್ತಾರೆ, ಅದರಲ್ಲಿ ಅನೇಕ ತಪ್ಪುಗಳಾಗುತ್ತವೆ, ಅದರಿಂದ ರೋಗಿಗಳು ಸಾಯುತ್ತಾರೆ ಅಥವಾ ಅವರಿಗೆ ಶಾರೀರಿಕ ಹಾನಿಯಾಗುತ್ತದೆ. ಅದಕ್ಕಾಗಿ ಆಸ್ಪತ್ರೆ ಮತ್ತು ಆಧುನಿಕ ವೈದ್ಯರೇ ಹೊಣೆಯಾಗುತ್ತಾರೆ ಹಾಗೂ ರೋಗಿಗಳಿಗೆ ಹಾನಿಯಾದರೆ ಅವರು ನ್ಯಾಯಾಲಯದಲ್ಲಿ ಪರಿಹಾರಕ್ಕಾಗಿ ದಾವೆ ಹೂಡಬಹುದು ಹಾಗೂ ಅದರಲ್ಲಿ ಯಶಸ್ಸು ಸಿಗುತ್ತದೆ ಎಂಬುದೂ ತಿಳಿದು ಬಂದಿತು.’
– ಪೂ. ನ್ಯಾಯವಾದಿ ಸುರೇಶ ಕುಲಕರ್ಣಿ