ಹಿಂದುಗಳ ರಕ್ಷಣೆಗೆ ಅಮೇರಿಕಾ ಸರಕಾರಕ್ಕೆ ಕ್ರಮಗಳನ್ನು ತೆಗೆದುಕೊಳ್ಳುವಂತೆ ಆಗ್ರಹ !
ವಾಷಿಂಗ್ಟನ (ಅಮೇರಿಕಾ) – ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ನಡೆದ ದಾಳಿಗಳನ್ನು ಖಂಡಿಸಲು ದೊಡ್ಡ ಸಂಖ್ಯೆಯಲ್ಲಿ ಭಾರತೀಯ ಅಮೇರಿಕನ್ನರು ರಾಷ್ಟ್ರಪತಿ ನಿವಾಸ ವೈಟ್ ಹೌಸ್ ನಿಂದ ಯುಎಸ್ ಕ್ಯಾಪಿಟಲ (ಸಂಸತ್) ವರೆಗೆ ಮೆರವಣಿಗೆ ನಡೆಸಿದರು. “ನಮಗೆ ನ್ಯಾಯ ಬೇಕು ಮತ್ತು ಹಿಂದೂಗಳ ರಕ್ಷಣೆ ಮಾಡಬೇಕು” ಎಂದು ಘೋಷಿಸುತ್ತಾ ಶಾಂತಿಯುತ ಪ್ರತಿಭಟನಕಾರಿಗಳು ಬೈಡೆನ್ ಆಡಳಿತ ಮತ್ತು ಮುಂದಿನ ಟ್ರಂಪ್ ಆಡಳಿತದಿಂದ ಬಾಂಗ್ಲಾದೇಶ ಸರಕಾರವನ್ನು ಹಿಂದೂಗಳ ರಕ್ಷಣೆಗೆ ಕ್ರಮಗಳನ್ನು ತೆಗೆದುಕೊಳ್ಳುವಂತೆ ಆಗ್ರಹಿಸಿದರು. ಹಾಗೆಯೇ ಅಪರಾಧಿಗಳನ್ನು ಶಿಕ್ಷೆ ನೀಡುವಂತೆ ಬೇಡಿಕೆಯನ್ನು ಮಾಡಿದೆ.
ಅಮೇರಿಕಾವು ಬಾಂಗ್ಲಾದೇಶದಿಂದ ಬಟ್ಟೆಗಳು ಖರೀದಿಸುವುದನ್ನು ನಿಲ್ಲಿಸಬೇಕೆಂದು ಬೇಡಿಕೆ !
ಈ ಮೆರವಣಿಗೆಯನ್ನು ಆಯೋಜಿಸಿದ ಸಂಘಟನೆಗಳು ಅಮೇರಿಕದ ಸಂಸ್ಥೆಗಳನ್ನು ಬಾಂಗ್ಲಾದೇಶದಿಂದ ಬಟ್ಟೆಗಳನ್ನು ಖರೀದಿಸುವುದನ್ನು ನಿಲ್ಲಿಸಲು ಆಗ್ರಹಿಸಿದವು. ಬಾಂಗ್ಲಾದೇಶವು ಅಮೇರಿಕಾಗೆ ಬಟ್ಟೆ ರಫ್ತು ಮಾಡುವುದರ ಮೇಲೆ ದೊಡ್ಡ ಪ್ರಮಾಣದಲ್ಲಿ ಅವಲಂಬಿಸಿದೆ.
ಸಂಪಾದಕೀಯ ನಿಲುವುಅಮೇರಿಕಾದ ಹಿಂದುಗಳು ಅಲ್ಲಿನ ಸರಕಾರಕ್ಕೆ ಇಂತಹ ಬೇಡಿಕೆಗಳನ್ನು ಮಾಡುತ್ತಾರೆ, ಅಂತಹ ಬೇಡಿಕೆಯನ್ನು ಭಾರತದಲ್ಲಿರುವ ಎಷ್ಟು ಹಿಂದು ಸಂಘಟನೆಗಳು ಭಾರತ ಸರಕಾರದೆಡೆಗೆ ಆಗ್ರಹಿಸುತ್ತವೆ ? |