ಅಧ್ಯಾತ್ಮಶಾಸ್ತ್ರದ ದೃಷ್ಟಿಕೋನದಿಂದ ಹಸ್ತರೇಖಾಶಾಸ್ತ್ರ !

‘ಹಸ್ತರೇಖಾಶಾಸ್ತ್ರವು ಅಂಗೈಯ ರೇಖೆಗಳಿಂದ ವ್ಯಕ್ತಿಯ ಜೀವನದ ದಿಶೆಯನ್ನು ನೀಡುವ ಪ್ರಾಚೀನ ಶಾಸ್ತ್ರವಾಗಿದೆ. ವ್ಯಕ್ತಿಯ ಸ್ವಭಾವ, ಆರೋಗ್ಯ, ಬುದ್ಧಿ, ವಿದ್ಯೆ, ಕಾರ್ಯಕ್ಷೇತ್ರ, ಪ್ರಾರಬ್ಧ ಮುಂತಾದ ಅನೇಕ ವಿಷಯಗಳು ಹಸ್ತರೇಖಾಶಾಸ್ತ್ರದಿಂದ ತಿಳಿಯುತ್ತವೆ. ಪ್ರಸ್ತುತ ಲೇಖನದಲ್ಲಿ ಅಧ್ಯಾತ್ಮಕ್ಕೆ ಸಂಬಂಧಿಸಿದ ವಿಷಯಗಳ ವಿಚಾರವನ್ನು ಹಸ್ತರೇಖಾಶಾಸ್ತ್ರದಲ್ಲಿ ಹೇಗೆ ಮಾಡಬಹುದು, ಎಂಬುದರ ವಿವೇಚನೆಯನ್ನು ಮಂಡಿಸಲಾಗಿದೆ.

ಹಸ್ತರೇಖಾತಜ್ಞರು ಸುನೀತಾ ಶುಕ್ಲ

೧. ಅಂಗೈಯ ರೇಖೆಗಳಿಂದ ವ್ಯಕ್ತಿಯ ಹಿಂದಿನ ಮತ್ತು ಈಗಿನ ಜನ್ಮದ ಸಾಧನೆ ತಿಳಿಯುವುದು

ಅಂಗೈಯ ರೇಖೆಗಳಿಂದ ವ್ಯಕ್ತಿಯ ಹಿಂದಿನ ಜನ್ಮದ ಮತ್ತು ವರ್ತಮಾನ ಜನ್ಮದ ಸಾಧನೆಯು ತಿಳಿಯುತ್ತದೆ. ಇದು ಮುಖ್ಯವಾಗಿ ಅಂಗೈಯ ಭಾಗ್ಯ ರೇಖೆಯಿಂದ (ಅಧ್ಯಾತ್ಮ ರೇಖೆಯಿಂದ) ಗಮನಕ್ಕೆ ಬರುತ್ತದೆ; ಆದರೆ ಅದರೊಂದಿಗೆ ಅಂಗೈಯ ಚಂದ್ರ ಮತ್ತು ಗುರು ಈ ಗ್ರಹಗಳ ಎತ್ತರಗಳು (ಅಂಗೈ ಮೇಲಿನ ಎತ್ತರದ ಸ್ಥಳಗಳು), ಬೆರಳುಗಳು, ಮಣಿಬಂಧ (ಮಣಿಕಟ್ಟಿನಲ್ಲಿರುವ ರೇಖೆಗಳು) ಮತ್ತು ಅಂಗೈಯ ಇತರ ರೇಖೆಗಳ ಅಂಶಗಳನ್ನು ಪರಿಗಣಿಸಬೇಕಾಗುತ್ತದೆ. ಹಾಗೆಯೇ ‘ವ್ಯಕ್ತಿಯ ಜೀವನ ಹೇಗೆ ನಡೆಯುತ್ತಿದೆ ? ಅವನು ಸಕಾರಾತ್ಮಕ ಮತ್ತು ಉತ್ಸಾಹದಿಂದ ಇದ್ದಾನೆಯೇ ? ಅವನು ಜೀವನದಲ್ಲಿ ಬರುವ ಸಂಕಟಗಳನ್ನು ಎದುರಿಸುತ್ತಾನೆಯೇ ? ಅವನ ವಿಚಾರಗಳಲ್ಲಿ ಸುಸ್ಪಷ್ಟತೆ ಇದೆಯೇ ? ಅವನು ಬುದ್ಧಿಯಿಂದ ನಿರ್ಧಾರವನ್ನು ತೆಗೆದುಕೊಳ್ಳುತ್ತಾನೆಯೇ ಅಥವಾ ಅವನು ಭಾವನಾಪ್ರಧಾನವಾಗಿದ್ದಾನೆಯೇ?’, ಇತ್ಯಾದಿ ಅಂಶಗಳನ್ನು ಪರಿಗಣಿಸುವುದು ಅತ್ಯಾವಶ್ಯಕವಾಗಿರುತ್ತದೆ.

೨. ‘ವ್ಯಕ್ತಿಯು ಅಧ್ಯಾತ್ಮದ ಕಡೆಗೆ ಹೊರಳುವುದು’ ಈ ಘಟನೆಯ ಬಗ್ಗೆ ಹಸ್ತರೇಖಾಶಾಸ್ತ್ರದಿಂದ ತಿಳಿಯಬಹುದು 

ಸಾಮಾನ್ಯವಾಗಿ ದುಃಖ, ಜಿಜ್ಞಾಸೆ, ಭಕ್ತಿ ಅಥವಾ ಜೀವನದಲ್ಲಿ ಬದಲಾಗುವ ಪ್ರಸಂಗಗಳು ಇತ್ಯಾದಿ ಅನೇಕ ಕಾರಣಗಳಿಂದ ಜನರು ಅಧ್ಯಾತ್ಮದತ್ತ ಹೊರಳುತ್ತಾರೆ. ಅಧ್ಯಾತ್ಮದತ್ತ ಹೊರಳಲು ಆ ಸಮಯದಲ್ಲಿರುವ ವ್ಯಕ್ತಿಯ ಇಚ್ಛೆ, ಕ್ಷಮತೆ ಮತ್ತು ತಳಮಳ ಈ ಅಂಶಗಳು ಮಹತ್ವದ್ದಾಗಿರುತ್ತವೆ ಮತ್ತು ಅವುಗಳಿಗನುಸಾರ ದೇವರು ಅಂತಹ ಪ್ರಸಂಗಗಳನ್ನು ವ್ಯಕ್ತಿಯ ಜೀವನದಲ್ಲಿ ಘಟಿಸುತ್ತಾನೆ. ‘ಅಧ್ಯಾತ್ಮದ ಕಡೆಗೆ ಹೊರಳುವುದು’, ಇದು ವ್ಯಕ್ತಿಯ ಜೀವನದಲ್ಲಿನ ದೊಡ್ಡ ಪರಿವರ್ತನೆಯಾಗಿದ್ದು ಹಸ್ತರೇಖಾಶಾಸ್ತ್ರದಿಂದ ಇದನ್ನು ತಿಳಿದುಕೊಳ್ಳಬಹುದು.

೩. ಹಸ್ತರೇಖಾಶಾಸ್ತ್ರದ ಸಂಶೋಧನೆಯಿಂದ ‘ಮಗುವಿನ ಜನ್ಮವು ಉಚ್ಚ ಲೋಕದಿಂದ ಆಗಿದೆಯೇ ?’, ಎಂಬುದನ್ನು ತಿಳಿದುಕೊಳ್ಳಲು ಸಾಧ್ಯವಿದೆ

ದೈವೀ ಮಕ್ಕಳು (ಟಿಪ್ಪಣಿ) ಈ ಜಗತ್ತಿಗಾಗಿ ಆಶಾಕಿರಣಗಳಾಗಿದ್ದು ಅವರಿಗೆ ಇಲ್ಲಿ ಅತ್ಯಂತ ಮಹತ್ವದ ಕಾರ್ಯವನ್ನು ಮಾಡಲಿಕ್ಕಿದೆ. ಈ ಮಕ್ಕಳು ಯಾವಾಗ ಕಾರ್ಯವನ್ನು ಮಾಡುವರೋ, ಆಗ ಆ ಕಾಲವು ಪೃಥ್ವಿಯ ಮೇಲೆ ‘ಸತ್ಯಯುಗ’ ಇರುವುದು. ಈ ಮೊದಲು ನಾನು ಕೆಲವು ಮಕ್ಕಳ ಕೈಯನ್ನು ನೋಡಿದ್ದೇನೆ; ಇದರಿಂದ ‘ಅವರು ದೈವೀ ಮಕ್ಕಳಾಗಿದ್ದು ಅವರ ಜನ್ಮದ ಹಿಂದೆ ವಿಶಿಷ್ಟ ಉದ್ದೇಶವಿದೆ’, ಎಂಬುದು ಗಮನಕ್ಕೆ ಬರುತ್ತದೆ. ಈ ವಿಷಯದ ಬಗ್ಗೆ ಇನ್ನಷ್ಟು ಸಂಶೋಧನೆ ಮಾಡಿದರೆ ಅಂಗೈಯ ರೇಖೆಗಳಿಂದ ನನಗೆ ‘ಮಕ್ಕಳು ಉಚ್ಚ ಲೋಕದಿಂದ ಪೃಥ್ವಿಯಲ್ಲಿ ಜನಿಸಿದ್ದಾರೆಯೇ ? ಎಂಬುದು ತಿಳಿಯಬಹುದು’, ಎಂದು ಅನಿಸುತ್ತದೆ.

ಟಿಪ್ಪಣಿ – ದೈವೀ ಮಕ್ಕಳೆಂದರೆ ಸ್ವರ್ಗ, ಮಹರ್, ಜನ ಮುಂತಾದ ಉಚ್ಚ ಲೋಕಗಳಿಂದ ಜನಿಸಿದ ಜೀವಗಳು. ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಇಂತಹ ೧ ಸಾವಿರಕ್ಕಿಂತಲೂ ಹೆಚ್ಚು ದೈವೀ ಮಕ್ಕಳನ್ನು ಸೂಕ್ಷ್ಮ ಪರೀಕ್ಷಣೆಯಿಂದ ಗುರುತಿಸಿದ್ದಾರೆ.

೩ ಅ. ಜನಿಸಿದ ನಂತರ ತಕ್ಷಣ ಕೈಯನ್ನು ನೋಡಿದರೆ ‘ಅದರ ಜನ್ಮವು ಯಾವ ಲೋಕದಿಂದ ಆಗಿದೆ ?’, ಎಂದು ತಿಳಿದುಕೊಳ್ಳಲು ಸಾಧ್ಯವಾಗುವುದು : ನಾನು ನವಜಾತ ಶಿಶುಗಳ ಕೈಯನ್ನು ನೋಡಿದ್ದೇನೆ. ಅದರ ಕೈಯ ರೇಖೆಗಳು ಆ ಮಗುವಿನ ಸಾಧನಾಮಾರ್ಗವನ್ನು ತೋರಿಸುತ್ತಿದ್ದವು. ೨ ರಿಂದ ೩ ತಿಂಗಳ ನಂತರ ಈ ರೇಖೆಗಳು ಕ್ರಮೇಣ ಕಡಿಮೆಯಾಗುತ್ತ ಹೋದವು ಮತ್ತು ಈ ಜನ್ಮದಲ್ಲಿನ ಸಂಸ್ಕಾರಗಳಿಂದ ಹೊಸ ರೇಖೆಗಳು ನಿರ್ಮಾಣವಾದವು. ಜನಿಸಿದ ಕೂಡಲೇ ಮಗುವಿನ ಕೈಯನ್ನು ನೋಡಿದರೆ ನನಗೆ ‘ಅದರ ಜನ್ಮವು ಯಾವ ಲೋಕದಿಂದ ಆಗಿದೆ ಮತ್ತು ಅದರ ಈ ಜನ್ಮದ ಉದ್ದೇಶವೇನಿದೆ ?’, ಎಂಬುದು ತಿಳಿಯುತ್ತದೆ’, ಎಂದು ಅನಿಸಿತು.

೪. ಹಸ್ತರೇಖೆಗಳಿಂದ ‘ವ್ಯಕ್ತಿಗೆ ಪೂರ್ವಜರ ಅಥವಾ ಅನಿಷ್ಟ ಶಕ್ತಿಗಳ ತೊಂದರೆಯಿದೆಯೇ ?’, ಎಂಬುದು ತಿಳಿಯುವುದು

ಅದಕ್ಕಾಗಿ ಅಂಗೈಯಲ್ಲಿರುವ ಒಳ್ಳೆಯ ಮತ್ತು ಸದೋಷ ರೇಖೆಗಳು, ಅಂಗೈಯ ಬಣ್ಣ, ಅಂಗೈಯಲ್ಲಿನ ವಿವಿಧ ಬಣ್ಣಗಳಿರುವ ಭಾಗ, ಬೆರಳುಗಳ ಆಕಾರ, ಹೆಬ್ಬೆರಳಿನ ಆಕಾರ, ಅಂಗೈ ಮೇಲೆ ಬಿಂದುಒತ್ತಡವನ್ನು ಮಾಡುವಾಗ ಶರೀರದಲ್ಲಾಗುವ ನೋವು ಇತ್ಯಾದಿ ಎಲ್ಲ ಘಟಕಗಳ ವಿಚಾರ ಮಾಡಬೇಕಾಗುತ್ತದೆ. ಆದ್ದರಿಂದ ಶರೀರದ ಯಾವ ಭಾಗದಲ್ಲಿ ಹೆಚ್ಚು ತೊಂದರೆಯಾಗುತ್ತದೆ, ಎಂಬುದನ್ನು ಹುಡುಕಲು ಸಾಧ್ಯವಾಗುತ್ತದೆ. ಕೆಟ್ಟ ಶಕ್ತಿಯ ತೊಂದರೆಯಿರುವ ವ್ಯಕ್ತಿಗಳ ಅಂಗೈಯಲ್ಲಿ ವಿವಿಧ ಬಣ್ಣಗಳ ಕಲೆಗಳಿರುತ್ತವೆ. ‘ಕೆಟ್ಟ ಶಕ್ತಿಗಳ ತೊಂದರೆ ಕಡಿಮೆಯಾದ ನಂತರ ಈ ಕಲೆಗಳು ಹೋಗುತ್ತವೆ’, ಇದು ನನಗೆ ನೋಡಲು ಸಿಕ್ಕಿತು.

೪ ಅ. ಅತೃಪ್ತ ಪೂರ್ವಜರು ತಮ್ಮ ವಂಶಜರ ವಂಶವಾಹಿನಿ (ಟಿಪ್ಪಣಿ) ಸ್ಥಾನವನ್ನು ನಿರ್ಮಾಣ ಮಾಡುತ್ತಿರುವುದರಿಂದ ಅನುವಂಶಿಕ ಕಾಯಿಲೆಗಳು ಒಂದು ಪೀಳಿಗೆಯಿಂದ ಮುಂದಿನ ಪೀಳಿಗೆಗೆ ಹರಡುವುದು : ಅನಿಷ್ಟ ಶಕ್ತಿಗಳು ದೇಹದ ದುರ್ಬಲ ಭಾಗದ ಮೇಲೆ ಅಥವಾ ಮನಸ್ಸಿನಲ್ಲಿ ಅಯೋಗ್ಯ ವಿಚಾರಗಳು ಬಂದರೆ ವ್ಯಕ್ತಿಯ ಮನಸ್ಸಿನ ಮೇಲೆ ದಾಳಿ ಮಾಡುತ್ತವೆ. ಪೂರ್ವಜರು ಸಾಮಾನ್ಯವಾಗಿ ತಮ್ಮ ವಂಶಜರ ವಂಶವಾಹಿನಿಗಳಲ್ಲಿ ಸ್ಥಾನ ನಿರ್ಮಾಣ ಮಾಡುತ್ತಾರೆ ಮತ್ತು ಅವರ ಮಾಧ್ಯಮದಿಂದ ತಮ್ಮ ಇಚ್ಛೆಯನ್ನು ಪೂರೈಸಿಕೊಳ್ಳುತ್ತಾರೆ. ಪೂರ್ವಜರು ತಮಗೆ ಮುಂದಿನ ಗತಿ ಸಿಗಲು ಅವರ ವಂಶದಲ್ಲಿ ಯಾರು ಸಾಧನೆ ಮಾಡುತ್ತಾರೆಯೋ, ಅವರಿಂದ ಒಳ್ಳೆಯ ಕರ್ಮಗಳನ್ನು ಮಾಡಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಪೂರ್ವಜರಿಗೆ ತಮ್ಮ ವಂಶಜರ ವಂಶವಾಹಿನಿಯಲ್ಲಿ ಸ್ಥಾನ ನಿರ್ಮಾಣ ಮಾಡಲು ಸುಲಭವಾಗುತ್ತದೆ. ಈ ರೀತಿ ಅನುವಂಶಿಕ ಕಾಯಿಲೆಗಳು ಒಂದು ಪೀಳಿಗೆಯಿಂದ ಮುಂದಿನ ಪೀಳಿಗೆಗೆ ಹೋಗುತ್ತವೆ.

ಟಿಪ್ಪಣಿ – ಸಜೀವಗಳ ಕೋಶ ಕೇಂದ್ರದಲ್ಲಿನ ಅನುವಂಶಿಕ ಗುಣಗಳನ್ನು ಒಯ್ಯುವ ಘಟಕಗಳೆಂದರೆ ‘ವಂಶವಾಹಿನಿ’,

೪ ಆ. ಸಾಧನೆಯಿಂದ ಮನೆತನದಲ್ಲಿನ ವ್ಯಕ್ತಿಗಳ ವಂಶವಾಹಿನಿಯಲ್ಲಿ (ಜೀನ್ಸ) ಸುಧಾರಣೆಯಾಗಿ ಅನುವಂಶಿಕ ದೋಷಗಳು ಮುಂದಿನ ಪೀಳಿಗೆಗೆ ಹೋಗದಿರುವುದು : ಒಬ್ಬ ವ್ಯಕ್ತಿಯು ಎಲ್ಲಿಯವರೆಗೆ ಸಾಧನೆ, ಶಾಂತಿಪಾಠ ಅಥವಾ ಶ್ರಾದ್ಧಾದಿಗಳ ಕರ್ಮಗಳನ್ನು ಮಾಡುವುದಿಲ್ಲವೋ, ಅಲ್ಲಿಯವರೆಗೆ ಪೂರ್ವಜರು ಅವನ ಶರೀರದಲ್ಲಿ ಸಿಲುಕಿರುತ್ತಾರೆ. ‘ಯಾವಾಗ ಕುಟುಂಬದಲ್ಲಿನ ಯಾವುದೇ ವ್ಯಕ್ತಿಯು ಸಾಧನೆ ಮಾಡತೊಡಗಿದರೆ ಅಥವಾ ಸಂತಪದವಿಯನ್ನು ಪ್ರಾಪ್ತಮಾಡಿಕೊಂಡರೆ ಆಗ ಅವರ ಮನೆತನದ ೭ ಪೀಳಿಗೆಗೆ ಅದರ ಲಾಭವಾಗುತ್ತದೆ’ ಎಂದು ಹೇಳಿದ್ದಾರೆ. ಸಾಧನೆಯಿಂದ ಮನೆತನದಲ್ಲಿನ ವ್ಯಕ್ತಿಯ ವಂಶವಾಹಿನಿಯಲ್ಲಿ ಸುಧಾರಣೆಯಾಗುತ್ತದೆ ಮತ್ತು ಅದರಿಂದ ಅನುವಂಶಿಕ ದೋಷಗಳು ಮುಂದಿನ ಪೀಳಿಗೆಗೆ ಹೋಗುವುದಿಲ್ಲ.

೪ ಇ. ಸಮಾಜದಲ್ಲಿನ ಹೆಚ್ಚೆಚ್ಚು ಜನರು ಸಾಧನೆ ಮಾಡಿದರೆ ಅವರ ಆಧ್ಯಾತ್ಮಿಕ ತೊಂದರೆಗಳು ದೂರವಾಗಿ ಪೃಥ್ವಿಯ ಮೇಲೆ ಸತ್ಯಯುಗ ಬರಬಹುದು : ಈ ರೀತಿ ಸಮಾಜದಲ್ಲಿನ ಹೆಚ್ಚೆಚ್ಚು ಜನರು ಸಾಧನೆ ಮಾಡಿದರೆ ಅವರ ಪೂರ್ವಜರು ಮುಕ್ತರಾಗುವರು ಮತ್ತು ಪೀಳಿಗೆಯಿಂದ ಅವರಿಗೆ ಬರುವ ಅನುವಂಶಿಕ ದೋಷಗಳು ಉದ್ಭವಿಸುವುದಿಲ್ಲ, ಹಾಗೆಯೇ ಜನರು ಕೆಟ್ಟ ಶಕ್ತಿಗಳ ತೊಂದರೆಗಳಿಂದ ಮುಕ್ತರಾಗಿ ಪೃಥ್ವಿಯ ಮೇಲೆ ನಿಜವಾಗಿಯೂ ಸತ್ಯಯುಗ ಅವತರಿಸುವುದು.

೫. ಸಾಧನೆ ಮಾಡುವ ವ್ಯಕ್ತಿಯ ಅಂಗೈಯ ರೇಖೆಗಳು ಸಾಮಾನ್ಯ (ಸಾಧನೆ ಮಾಡದಿರುವ) ವ್ಯಕ್ತಿಯ ತುಲನೆಯಲ್ಲಿ ವೇಗದಿಂದ ಬದಲಾವಣೆಯಾಗುತ್ತಿರುತ್ತವೆ

ಸಾಮಾನ್ಯವಾಗಿ ಅಂಗೈಯ ರೇಖೆಗಳಲ್ಲಾಗುವ ಬದಲಾವಣೆಗಳು ವ್ಯಕ್ತಿಯ ವಿಚಾರಪ್ರಕ್ರಿಯೆ, ವಿಚಾರಗಳ ಕಾಲಾವಧಿ ಮತ್ತು ಸಾತತ್ಯ ಇವುಗಳಿಂದ ಘಟಿಸುತ್ತವೆ. ಈ ಬದಲಾವಣೆಯಾಗಲು ಸುಮಾರು ೬ ತಿಂಗಳಿಂದ ೨ ವರ್ಷಗಳ ಕಾಲಾವಧಿ ಬೇಕಾಗುತ್ತದೆ. ಸಾಧನೆ ಮಾಡುವ ವ್ಯಕ್ತಿಯ ಅಂತರ್ಮನಸ್ಸಿನಲ್ಲಿನ ಸಂಸ್ಕಾರಗಳು ಸಾಧನೆಯಿಂದ ನಾಶವಾಗುತ್ತಿರುತ್ತವೆ. ಆದ್ದರಿಂದ ಅವರ ಅಂಗೈಯಲ್ಲಿನ ರೇಖೆಗಳು ಸಾಮಾನ್ಯ (ಸಾಧನೆ ಮಾಡದಿರುವ) ವ್ಯಕ್ತಿಯ ತುಲನೆಯಲ್ಲಿ ಹೆಚ್ಚು ಶೀಘ್ರವಾಗಿ ಬದಲಾಗುತ್ತವೆ.

೫ ಅ. ಜೀವನದ ಅಂತ್ಯವು ಸಮೀಪಿಸುತ್ತಿದ್ದಂತೆ ಅಂಗೈಯ ರೇಖೆಗಳಲ್ಲಿ ತುಂಬಾ ಬದಲಾವಣೆಯಾಗುವುದು ಅಥವಾ ಅವು ನಾಶವಾಗುವವು : ವ್ಯಕ್ತಿಯ ಜೀವನದ ಅಂತ್ಯವು ಸಮೀಪಿಸುತ್ತಿದ್ದಂತೆ ಅವನ ಅಂಗೈಯ ರೇಖೆಗಳಲ್ಲಿ ತುಂಬಾ ಬದಲಾವಣೆಯಾಗುತ್ತದೆ ಅಥವಾ ಅವು ನಾಶವಾಗುತ್ತವೆ. ವ್ಯಕ್ತಿಯ ಕೊಡು-ಕೊಳ್ಳುವ ಲೆಕ್ಕವು ಮುಗಿಯುತ್ತಾ ಬಂದಿರುವುದರಿಂದ ಮತ್ತು ಸಾಧನೆಯಿಂದ ಅಂತರ್ಮನಸ್ಸಿನಲ್ಲಿನ ಸಂಸ್ಕಾರಗಳು ನಾಶವಾಗುತ್ತಿರುವುದರಿಂದ ಹೀಗಾಗುತ್ತದೆ.

– ಹಸ್ತರೇಖಾತಜ್ಞರು ಸುನೀತಾ ಶುಕ್ಲ, ಋಷಿಕೇಶ, ಉತ್ತರಾಖಂಡ. (೧೭.೪.೨೦೨೪)