ಜಮಶೇದಪುರದಲ್ಲಿ ಗಿಡ ನೆಡುವ ಕಾರ್ಯಕ್ರಮದಲ್ಲಿ ಸನಾತನ ಸಂಸ್ಥೆಯ ಸಹಭಾಗ !

ಇಲ್ಲಿನ ಬಿರಸಾನಗರದ ಭಾಗದಲ್ಲಿರುವ ಶ್ರೀ ಹನುಮಾನ ದೇವಾಲಯದ ವತಿಯಿಂದ ದೇವಾಲಯದ ಪರಿಸರದಲ್ಲಿ ಇತ್ತೀಚೆಗಷ್ಟೇ ಗಿಡ ನೆಡುವ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಇದರಲ್ಲಿ ಸನಾತನ ಸಂಸ್ಥೆಯ ಶ್ರೀ. ಸುದಾಮಾ ಶರ್ಮಾ ಹಾಗೂ ಶ್ರೀ. ಬಿ. ಭೀ. ಕೃಷ್ಣಾ ರವರು ಗಿಡ ನೆಟ್ಟರು.

ದೆಹಲಿಯ ಒಂದು ಮೇಲು ಸೇತುವೆಯ ಮೇಲೆ ಕಾನೂನುಬಾಹಿರ ಮಜಾರ (ಗೋರಿ)!

ಇಲ್ಲಿನ ಆಜಾದಪುರದಲ್ಲಿನ ಒಂದು ಮೇಲು ಸೇತುವೆ ಮೇಲೆ ಕಾನೂನುಬಾಹಿರವಾಗಿ ಚಿಕ್ಕ ಮಜಾರ (ಇಸ್ಲಾಮಿ ಪೀರ್ ಹಾಗೂ ಫಕೀರರ ಸಮಾಧಿ) ವನ್ನು ನಿರ್ಮಿಸಲಾಗಿರುವುದರಿಂದ ಸಾರಿಗೆಯ ಸಮಸ್ಯೆ ನಿರ್ಮಾಣವಾಗಿದೆ ಎಂಬ ವಾರ್ತೆಯನ್ನು ‘tv9 ಭಾರತವರ್ಷ’ ವಾರ್ತಾ ವಾಹಿನಿಯು ಪ್ರಸಾರ ಮಾಡಿದೆ.

ಉತ್ತರಪ್ರದೇಶದಲ್ಲಿ ಸಂಘದ ಸ್ವಯಂಸೇವಕರ ಮಗನ ಶವ ಮರಕ್ಕೆ ನೇತು ಹಾಕಿರುವ ಸ್ಥಿತಿಯಲ್ಲಿ ಪತ್ತೆ

ಇಲ್ಲಿ ಸ್ವಯಂಸೇವಕರೊಬ್ಬರ ಮಗನ ಶವವು ಮರಕ್ಕೆ ನೇತು ಹಾಕಿರುವ ಸ್ಥಿತಿಯಲ್ಲಿ ಸಿಕ್ಕಿದೆ. ಅಕ್ಷಯ (ವಯಸ್ಸು ೨೨ ವರ್ಷ) ಎಂದು ಅವನ ಹೆಸರಾಗಿದೆ. ಗ್ರಾಮಸ್ಥರು ಈ ಘಟನೆಗೆ ಪೊಲೀಸರೇ ಹೊಣೆ ಎಂದು ನಿರ್ಧರಿಸಿ ‘ಪೊಲೀಸರ ಭಯದಿಂದ ಅಕ್ಷಯನು ಈ ರೀತಿಯ ಕೃತ್ಯ ಮಾಡಿದ್ದಾನೆ, ಎಂದು ಆರೋಪಿಸಿದ್ದಾರೆ.

ಭಿಕ್ಷುಕರನ್ನು ಭಿಕ್ಷೆ ಬೇಡುವುದರಿಂದ ಯಾರೂ ತಡೆಯಲಾರರು ! – ಸರ್ವೋಚ್ಚ ನ್ಯಾಯಾಲಯ

ನ್ಯಾಯಾಲಯಗಳಲ್ಲಿ ಕೋಟಿಗಟ್ಟಲೆ ಪ್ರಕರಣಗಳು ಬಾಕಿ ಇರುವಾಗ, ಇಂತಹ ಸಾಮಾಜಿಕ ಸಮಸ್ಯೆಗಳನ್ನು ಸಹ ನ್ಯಾಯಾಲಯಗಳೇ ಆಲಿಸಬೇಕಾದ ಸಮಯ ಬಂದಿದೆ. ಈ ಬಗ್ಗೆ ಸರಕಾರಿ ಸಂಸ್ಥೆಗಳು ಗಂಭೀರವಾಗಿ ಯೋಚಿಸುವ ಅಗತ್ಯವಿದೆ !

ಕೊರೊನಾ ನಿಯಮಗಳ ಪಾಲಿಸದಿದ್ದಲ್ಲಿ ಮೂರನೇ ಅಲೆಯು ಹೆಚ್ಚು ಅಪಾಯಕಾರಿ ! – ಇಂಡಿಯನ್ ಮೆಡಿಕಲ್ ಅಸೊಸಿಯೇಶನ್

ಪ್ರಧಾನಿ ಮೋದಿಯವರ ಸಕ್ರಿಯವಾದ ನೇತೃತ್ವ, ಅತ್ಯಾಧುನಿಕ ವೈದ್ಯಕೀಯ ವ್ಯವಸ್ಥೆ ಹಾಗೂ ದೇಶದಲ್ಲಿನ ವೈದ್ಯರ ಸೇವಾಭಾವ ಇದರಿಂದ ಭಾರತವು ಕೊರೊನಾ ಮಹಾಮಾರಿಯ ಎರಡನೇ ಅಲೆಯಿಂದ ನಿಧಾನವಾಗಿ ಹೊರ ಬರುತ್ತಿದೆ; ಆದರೆ ಮೂರನೆಯ ಅಲೆಯ ಅಪಾಯವನ್ನು ಗಮನಕ್ಕೆ ತೆಗೆದುಕೊಂಡು ನಮಗೆ ಇನ್ನೂ ಹೆಚ್ಚು ಎಚ್ಚರಿಕೆಯಿಂದ ಹೆಜ್ಜೆಯನ್ನು ಇಡುವುದು ಅಗತ್ಯವಿದೆ.

ಮಕ್ಕಳ ಅಶ್ಲೀಲ ಚಿತ್ರಗಳನ್ನು ಪ್ರಸಾರ ಮಾಡಿದಕ್ಕೆ ಟ್ವಿಟರ್ ವಿರುದ್ಧ ಅಪರಾಧ ದಾಖಲು !

ದೇಶದಾದ್ಯಂತ ಟ್ವಿಟರ್ ವಿರುದ್ಧ ಒಟ್ಟು ೪ ಅಪರಾಧಗಳನ್ನು ನೊಂದಾಯಿಸಲಾಗಿದೆ. ಅದರಲ್ಲಿ ತಪ್ಪಾದ ಭೂಪಟ ತೋರಿಸಿದ ಪ್ರಕರಣದಲ್ಲಿ ಉತ್ತರಪ್ರದೇಶ ಹಾಗೂ ಮಧ್ಯಪ್ರದೇಶದಲ್ಲಿ, ಸಾಮಾಜಿಕ ಸೌಹಾರ್ದ ಕೆಡಿಸುವ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶದಲ್ಲಿ ಹಾಗೂ ಸಣ್ಣ ಮಕ್ಕಳ ಸಂಬಂಧಿಸಿದಂತೆ ಅಶ್ಲೀಲ ಚಿತ್ರಗಳನ್ನು ಪ್ರಸಾರ ಮಾಡಿರುವ ಪ್ರಕರಣದಲ್ಲಿ ದೆಹಲಿಯ ಪೊಲೀಸರ ಸೈಬರ್ ಶಾಖೆಯಲ್ಲಿ ಅಪರಾಧ ದಾಖಲಾಗಿದೆ.

ಭಾರತೀಯ ನಕಾಶೆಯಿಂದ ಜಮ್ಮು-ಕಾಶ್ಮೀರ ಮತ್ತು ಲಡಾಖಅನ್ನು ಬೇರ್ಪಡಿಸಿದ ಟ್ವಿಟರ್‌ ವಿರುದ್ಧ ದೂರು ದಾಖಲು

ಭಾರತದ ನಕಾಶೆಯಿಂದ ಜಮ್ಮು-ಕಾಶ್ಮೀರ ಮತ್ತು ಲಡಾಖನ್ನು ಬೇರ್ಪಡಿಸಿದ ಟ್ವಿಟರ್‌ ವಿರುದ್ಧ ಸ್ಥಳೀಯ ಬಜರಂಗ ದಳದ ನಾಯಕರು ಪೊಲೀಸರಲ್ಲಿ ದೂರನ್ನು ನೀಡಿದ ನಂತರ ಟ್ವಿಟರ್ ಇಂಡಿಯಾ ವ್ಯವಸ್ಥಾಪಕ ನಿರ್ದೇಶಕ ಮನೀಷ ಮಾಹೇಶ್ವರಿಯವರ ಮೇಲೆ ದೂರು ದಾಖಲಿಸಲಾಗಿದೆ.