ಗೌಹಾಟಿ (ಅಸ್ಸಾಂ) – ಅಸ್ಸಾಂನ ಸಿಲಚರದಲ್ಲಿ ಡಿಸೆಂಬರ್ 25 ರಂದು ರಾತ್ರಿ ಕ್ರಿಸ್ಮಸ್ ಆಚರಿಸುತ್ತಿರುವಾಗ ಕೆಲವು ಜನರು ಅದಕ್ಕೆ ವಿರೋಧ ವ್ಯಕ್ತಪಡಿಸಿದರು. ಅವರು ಈ ಕಾರ್ಯಕ್ರಮ ನಿಲ್ಲಿಸುವಂತೆ ಒತ್ತಾಯಿಸಿದರು. ಈ ಪ್ರಕರಣದಲ್ಲಿ ಯಾವುದೇ ಅಪರಾಧ ದಾಖಲಾಗಿಲ್ಲ, ಎಂದು ಪೊಲೀಸರು ಹೇಳಿದ್ದಾರೆ.
In a purported video clip of the incident that has gone viral on social media, a youth, who has a saffron scarf around his head, is seen saying that they have no problems with Christians celebrating Christmas but do not approve of the Hindus doing so.https://t.co/wgZtv790h2
— The Indian Express (@IndianExpress) December 26, 2021
ಈ ಘಟನೆಯ ಬಗ್ಗೆ ಓರ್ವ ಕಾವಿವಸ್ತ್ರಧಾರಿ ವ್ಯಕ್ತಿಯು ಆನ್‍ಲೈನ್ ವಿಡಿಯೋದಲ್ಲಿ, ನಾವು ಕ್ರಿಸ್ಮಸ್ ವಿರೋಧಿಯಲ್ಲ, ಆದರೆ ಅದರಲ್ಲಿ ಹಿಂದೂ ಯುವಕ ಮತ್ತು ಯುವತಿಯರು ಭಾಗವಹಿಸುವ ಬಗ್ಗೆ ವಿರೋಧವಿದೆ. ಇಂದು `ತುಳಸಿ ಪೂಜೆಯ ದಿನ’ ಇತ್ತು; ಅದನ್ನು ಯಾರೂ ಆಚರಿಸಲಿಲ್ಲ. ಈ ವಿಷಯದಿಂದ ನಮ್ಮ ಧಾರ್ಮಿಕ ಭಾವನೆಗೆ ನೋವು ಉಂಟಾಗಿದೆ. ಪ್ರತಿಯೊಬ್ಬರು ಕ್ರಿಸ್ಮಸ್‍ನ ಶುಭಾಶಯ ನೀಡಲು ಆರಂಭಿಸಿದರೆ, ನಮ್ಮ ಧರ್ಮ ಹೇಗೆ ಉಳಿಯುವುದು ? ಹೀಗೆ ಆ ವ್ಯಕ್ತಿ ಪ್ರಶ್ನೆಯನ್ನು ಮಂಡಿಸಿದರು.