ಜಮ್ಮುವಿನ ವೈಷ್ಣೋದೇವಿ ದೇವಸ್ಥಾನದ ಪರಿಸರದಲ್ಲಿ ನಡೆದಂತಹ ಕಾಲ್ತುಳಿತದಲ್ಲಿ 12 ಜನರ ಮೃತ್ಯು

ವೈಷ್ಣೋದೇವಿ ದೇವಸ್ಥಾನದ ಸರಕಾರೀಕರಣ ಆಗಿರುವಾಗಲೂ ಅಲ್ಲಿ ಇಂತಹ ಘಟನೆಗಳು ನಡೆಯುವುದು ಸರಕಾರಕ್ಕೆ ಲಜ್ಜಾಸ್ಪದವಾಗಿದೆ ! ಹಿಂದೂಗಳ ಪ್ರಸಿದ್ಧ ತೀರ್ಥಕ್ಷೇತ್ರದಲ್ಲಿ ಇಂತಹ ಘಟನೆಗಳು ಸತತವಾಗಿ ನಡೆದರೂ ಆ ಬಗ್ಗೆ ಯೋಗ್ಯ ಉಪಾಯಯೋಜನೆಯನ್ನು ಮಾಡದಿರುವ ವ್ಯವಸ್ಥಾಪನೆಯು ಏಕಿದೆ ?- ಸಂಪಾದಕರು 

ಜಮ್ಮು (ಜಮ್ಮು-ಕಾಶ್ಮೀರ) – ಕಟರಾದಲ್ಲಿನ ವೈಷ್ಣೋದೇವಿ ದೇವಸ್ಥಾನದ ಪರಿಸರದಲ್ಲಿ ಭಾವಿಕರ ನಡುವೆ 2.45ರ ಸುಮಾರು ನಡೆದಂತಹ ಕಾಲ್ತುಳಿತದಲ್ಲಿ 12 ಜನರ ಮೃತ್ಯುವಾದರೆ 20 ಜನರು ಗಾಯಗೊಂಡಿದ್ದಾರೆ. ಈ ಕಾಲ್ತುಳಿತವು ದೇವಸ್ಥಾನದ ಗರ್ಭಗೃಹದ ಹೊರಗಿನ 3 ನೇ ಕ್ರಮಾಂಕದ ಪ್ರವೇಶದ್ವಾರದ ಬಳಿ ಆಗಿದೆ. ಕಾಲ್ತುಳಿತದ ನಂತರ ಸ್ವಲ್ಪ ಸಮಯದವರೆಗೆ ಯಾತ್ರೆಯನ್ನು ಸ್ಥಗಿತಗೊಳಿಸಲಾಗಿತ್ತು, ಆದರೆ ಈಗ ಅದನ್ನು ಪುನಃ ಆರಂಭಿಸಲಾಗಿದೆ.

1. ಕೆಲವು ಪ್ರತ್ಯಕ್ಷದರ್ಶಿಗಳಿಗನುಸಾರ ಕಲ್ಲು ಬಿದ್ದಿರುವ ಸುಳ್ಳು ಸುದ್ದಿಯಿಂದಾಗಿ ಈ ಕಾಲ್ತುಳಿತ ನಡೆದಿದೆ, ಹಾಗೂ ‘ಎರಡು ಗುಂಪುಗಳ ನಡುವೆ ನಡೆದಂತಹ ವಾದದಿಂದಾಗಿ ಕಾಲ್ತುಳಿತ ನಡೆದಿದೆ’. ಹಾಗೆಯೇ ಮಾತಾ ವೈಷ್ಣೋದೇವಿ ಭವನದ ಮಾರ್ಗದಲ್ಲಿ ಬಹಳ ಜನಸಂದಣಿ ಇತ್ತು. ಈ ಜನಸಂದಣಿಯನ್ನು ನೋಡಿಯೇ ಭಯವೆನಿಸುತ್ತಿತ್ತು. ಇದರಿಂದಲೂ ಈ ಕಾಲ್ತುಳಿತ ನಡೆದಿದೆ, ಎಂದು ಕೆಲವು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.

2. ಜನರು `ಇದರಲ್ಲಿ ಸರಕಾರದ ತಪ್ಪು ಇದೆ. ಜನಸಂದಣಿ ಆಗುತ್ತಿರುವಾಗ ಅವರು ಜನರನ್ನು ಏಕೆ ತಡೆಯಲಿಲ್ಲ ?’, ಎಂದು ಹೇಳಿದರು.

3. ಓರ್ವ ಭಕ್ತರು ‘ದರ್ಶನಕ್ಕಾಗಿ ಎಷ್ಟೊಂದು ಪಾವತಿಗಳನ್ನು ಏಕೆ ಹರಿಯಲಾಗುತ್ತಿದೆ ? ಹೆಚ್ಚಿನ ಪ್ರಮಾಣದಲ್ಲಿ ಪಾವತಿಗಳನ್ನು ಹರಿದಿದ್ದರಿಂದ ಜನಸಂದಣಿಯಾಗಿ ಈ ದುರ್ಘಟನೆ ನಡೆದಿದೆ’ ಎಂದು ಹೇಳಿದರು.

4. ಓರ್ವ ಪ್ರತ್ಯಕ್ಷದರ್ಶಿಯು ‘ಮಾತಾ ವೈಷ್ಣೋದೇವಿ ದೇವಸ್ಥಾನದ ಪರಿಸರದಲ್ಲಿ ಕೆಲವು ಭಾವಿಕರು ದರ್ಶನದ ನಂತರವೂ ಅಲ್ಲಿಯೇ ನಿಂತಿದ್ದರು. ಇದರಿಂದಾಗಿ ಜನಸಂದಣಿ ಹೆಚ್ಚಾಯಿತು. ಹಾಗೆಯೇ ಜನರಿಗೆ ಹೊರಬರಲು ಜಾಗ ಸಿಗಲಿಲ್ಲ. ಕಿರಿದಾದ ಮಾರ್ಗದಿಂದ ಜನರು ಬಂದು ಹೋಗುತ್ತಿದ್ದರು. ಇದರಿಂದಾಗಿ ಕಾಲ್ತುಳಿತವಾಯಿತು’ ಎಂದು ಹೇಳಿದರು.