ಕೇರಳದಲ್ಲಿನ ಮಾಕಪದ ಸರಕಾರದಲ್ಲಿರುವ ಹಜ್ ಮಂತ್ರಿಯು ಸರಕಾರಿ ಹಣದಿಂದ ಅಮೇರಿಕಾದಲ್ಲಿ ಉಪಚಾರ ಪಡೆಯಲಿದ್ದಾರೆ !

 ಸ್ವಂತದ ವೈದ್ಯಕೀಯ ಉಪಚಾರಕ್ಕಾಗಿ ಜನತೆಯ ತೆರಿಗೆಯ ಹಣ ಖರ್ಚು ಮಾಡುವ ಮಂತ್ರಿಗಳನ್ನು ಆಯ್ಕೆಮಾಡುವ ಕೇರಳದಲ್ಲಿನ ಜನತೆಗೆ ಇದು ಶಿಕ್ಷೆಯಾಗಿದೆ !

ತಿರುವನಂತಪುರಂ (ಕೇರಳ) – ರಾಜ್ಯದ ಕ್ರೀಡಾ, ವಕ್ಫ್ ಮತ್ತು ಹಜ್ ಯಾತ್ರೆಗಳ ಮಂತ್ರಿಯಾದ ವಿ. ಅಬ್ದುರಹಿಮನ ರವರು ವೈದ್ಯಕೀಯ ಕಾರಣಗಳಿಗಾಗಿ 20 ದಿನಗಳಿಗಾಗಿ ಅಮೆರಿಕಾಗೆ ಹೋಗಲಿದ್ದಾರೆ. ಅವರ ಪ್ರವಾಸಕ್ಕೆ ಸರಕಾರವು ಸಮ್ಮತಿಸಿದ್ದು ಈ ಪ್ರವಾಸದ ಎಲ್ಲ ಖರ್ಚನ್ನು ರಾಜ್ಯ ಸರಕಾರವೇ ವಹಿಸಲಿದೆ. ಅವರ ಪ್ರವೇಶಕ್ಕೆ ಒಪ್ಪಿಗೆ ನೀಡುವ ಆದೇಶದಲ್ಲಿ ‘ಈ ಪ್ರವಾಸವು ಕೇಂದ್ರದಲ್ಲಿನ ಸಂಬಂಧಿತ ಸಚಿವಾಲಯದ ಸಮ್ಮತಿಗೆ ಅಧೀನವಾಗಿದೆ. ಈ ಪ್ರಕರಣದ ಮಾಹಿತಿಯನ್ನು ವಿದೇಶಾಂಗ ಸಚಿವಾಳಯ ಮತ್ತು ಹಣಕಾಸು ಸಚಿವಾಳಯಗಳಿಗೆ ನೀಡಲಾಗಿದೆ’ ಎಂದು ಹೇಳಲಾಗಿದೆ.

1. ಪಿನರಾಯಿ ವಿಜಯನರವರ ಹಿಂದಿನ ಸರಕಾರದ ಮಂತ್ರಿಮಂಡಲದಲ್ಲಿ 17 ಮಂತ್ರಿಗಳು ಅಗಸ್ಟ್ 2016ರಿಂದ ಡಿಸೆಂಬರ್ 2019ರವರೆಗೆ ಅಧಿಕೃತ ಮತ್ತು ಖಾಸಗಿ ಹೀಗೆ ಜಗತ್ತಿನಾದ್ಯಂತ 27 ದೇಶಗಳ ಪ್ರವಾಸ ಮಾಡಿದ್ದಾರೆ. ಇವರಲ್ಲಿ ಮುಖ್ಯಮಂತ್ರಿಗಳು 14 ಪ್ರವಾಸ ಮಾಡಿ ಮೊದಲನೇ ಕ್ರಮಾಂಕದಲ್ಲಿದ್ದರು. ಆಗಿನ ಅವರ ಅಮೇರಿಕಾದ ಒಂದು ಪ್ರವಾಸವು ವೈದ್ಯಕೀಯ ಕಾರಣಗಳಿಗಾಗಿ ಇತ್ತು ಮತ್ತು ಇನ್ನೊಂದು ಸಂಯುಕ್ತ ಅರಬ್ ಎಮಿರತಿನೊಂದಿಗಿನ ಖಾಸಗಿ ಭೇಟಿಗಾಗಿ ಇತ್ತು. ಉಳಿದ ಹನ್ನೆರಡು ಪ್ರಯಾಣಗಳು ಅಧಿಕೃತವಾಗಿದ್ದವು.

2. ಆ ಸರಕಾರದ ಕಾಲದಲ್ಲಿ ಪ್ರಯಾಣ ಮತ್ತು ದೇವಸ್ವಂ ಮಂತ್ರಿ ಕಡಕಮಪಲ್ಲಿ ಸುರೇಂದ್ರನರವರು 13 ವಿದೇಶಿ ಯಾತ್ರೆಗಳನ್ನು ಮಾಡಿದ್ದರು.

3. ಕಳೆದ ಸರಕಾರದ ಕಾಲದಲ್ಲಿ ಮಂತ್ರಿಗಳಿಗೆ ಅವರ ಪ್ರವಾಸಕ್ಕಾಗಿ ಸರಕಾರವು 53 ಲಕ್ಷ 68 ಸಾವಿರ ದ 888 ರೂಪಾಯಿಗಳನ್ನು ಖರ್ಚು ಮಾಡಿತ್ತು. ಇದರಲ್ಲಿನ ಅತ್ಯಂತ ಹೆಚ್ಚು ಖರ್ಚು ಕಡಕಮಪಲ್ಲಿ ಯವರ ಪ್ರವಾಸಕ್ಕಾಗಿ ಆಗಿತ್ತು. ಈ ಹಣವು 14 ಲಕ್ಷ 65 ಸಾವಿರದ 872 ರೂಪಾಯಿಗಳಷ್ಟಾಗಿತ್ತು.