ವಿವಾಹಕ್ಕಾಗಿ ಪೋಷಕರ ಅನುಮತಿ ಇಲ್ಲದೆ ಮನೆ ಬಿಡುವ ಹೆಣ್ಣುಮಕ್ಕಳ ಹತ್ಯೆಯಾಗುತ್ತದೆ ಅಥವಾ ಅವರನ್ನು ವೇಶ್ಯಾವಾಟಿಕೆಗೆ ತಳ್ಳಲಾಗುತ್ತಿದೆ ! – ಬಿಹಾರದ ಪೊಲೀಸ್ ಮಹಾಸಂಚಾಕ ಎಸ್.ಕೆ. ಸಿಂಘಲ

ಪಾಟಲಿಪುತ್ರ (ಬಿಹಾರ) – ಇಂದು ಹೆಣ್ಣು ಮಕ್ಕಳು ವಿವಾಹಕ್ಕಾಗಿ ಪೋಷಕರ ಅನುಮತಿ ಇಲ್ಲದೆ ಮನೆ ತೊರೆಯುತ್ತಾರೆ, ಅದರ ದುಃಖದಾಯಕ ಪರಿಣಾಮ ಕಾಣುತ್ತಿದೆ. ಇದರಲ್ಲಿ ಅನೇಕ ಹೆಣ್ಣು ಮಕ್ಕಳ ಹತ್ಯೆಯಾಗುತ್ತಿದೆ ಹಾಗೂ ಅನೇಕರನ್ನು ವೇಶ್ಯಾವಾಟಿಕೆಗೆ ತಳ್ಳಲಾಗುತ್ತದೆ. ಪೋಷಕರು ಇದರ ಬೆಲೆ ತೆರುತ್ತಾರೆ, ಎಂದು ಬಿಹಾರದ ಪೊಲೀಸ್ ಮಹಾಸಂಚಾಲಕ ಎಸ್.ಕೆ.ಸಿಂಘಾಲ್ ಇವರು ಹೇಳಿದರು. ರಾಜ್ಯದ ಮುಖ್ಯಮಂತ್ರಿ ನಿತೀಶ ಕುಮಾರ ಇವರು ‘ಸಮಾಜ ಸುಧಾರಣೆ ಅಭಿಯಾನ’ ಹಮ್ಮಿಕೊಳ್ಳುತ್ತಿದ್ದಾರೆ. ಈ ಅಭಿಯಾನ ಪ್ರಸ್ತುತ ಸಮಸ್ತಿಪುರದಲ್ಲಿ ನಡೆಯುತ್ತಿದೆ. ಇದೇ ವೇದಿಕೆಯಿಂದ ಜನರನ್ನು ಉದ್ದೇಶಿಸಿ ಮಾತನಾಡಿದ ಎಸ್.ಕೆ.ಸಿಘಲ ಇವರು ಇದನ್ನು ಹೇಳಿದರು.

ಪೋಷಕರಿಗೆ ಸಹ ಸಲಹೆ ನೀಡುವಾಗ ಸಿಂಘಾಲ ಅವರು, ಪೋಷಕರು ಅವರ ಮಕ್ಕಳ ಜೊತೆ ಸಂವಾದ ನಡೆಸಬೇಕು. ಅವರು ಮಕ್ಕಳ ಮೇಲೆ ಒಳ್ಳೆಯ ಸಂಸ್ಕಾರ ಮಾಡಲು ಪ್ರಯತ್ನಿಸಬೇಕು. ಪೋಷಕರು ಮಕ್ಕಳ ಭಾವನೆ ಅರ್ಥ ಮಾಡಿಕೊಂಡರೆ ಅವರು ಅವರ ಜೊತೆ ಹೊಂದಿಕೊಂಡು ಇರುತ್ತಾರೆ. ಹೀಗೆ ಮಾಡಿದರೆ ಪೋಷಕರು ಒಳ್ಳೆಯ ಸಮಾಜ ನಿರ್ಮಾಣಕ್ಕೆ ಕೈ ಜೋಡಿಸಲು ಸಾಧ್ಯವಾಗುತ್ತದೆ, ಎಂದರು.