ಪೃಥ್ವಿಯ ದಿಕ್ಕಿನತ್ತ ಒಂದು ಕ್ಷುದ್ರಗ್ರಹ ತೀವ್ರ ವೇಗದಿಂದ ಬರುತ್ತಿದೆ !

ಅಮೇರಿಕಾದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ‘ನಾಸಾದ ಮಾಹಿತಿ

ವಾಶಿಂಗ್ಟನ್ (ಅಮೇರಿಕಾ) – ಅಮೇರಿಕಾದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ‘ನಾಸಾ ನೀಡಿರುವ ಮಾಹಿತಿಯಂತೆ ಒಂದು ವಿಶಾಲವಾದ ಕ್ಷುದ್ರಗ್ರಹ ಪೃಥ್ವಿಯ ದಿಕ್ಕಿನತ್ತ ಅತ್ಯಂತ ವೇಗವಾಗಿ ಬರುತ್ತಿದೆ. ಈ ಕ್ಷುದ್ರಗ್ರಹ ಪೃಥ್ವಿಯ ಅತ್ಯಂತ ಹತ್ತಿರದಿಂದ ಪ್ರವಾಸ ಮಾಡಲಿದೆ. ನಾಸಾದ ವಿಜ್ಞಾನಿಗಳು ಆ ಗ್ರಹದ ಮೇಲೆ ನಿಗಾ ಇಟ್ಟಿದ್ದಾರೆ. ಈ ಕ್ಷುದ್ರಗ್ರಹಕ್ಕೆ ‘೨೦೧೭ ಏಈ ೩ ಎಂದು ಹೆಸರಿಡಲಾಗಿದೆ. ಅದು ಗಂಟೆಗೆ ೭೫ ಸಾವಿರ ಕಿ.ಮೀ. ವೇಗದಿಂದ ಪೃಥ್ವಿಯ ಕಕ್ಷೆಯ ಕಡೆಗೆ ಪ್ರವಾಸ ಮಾಡುತ್ತಿದೆ. ಈ ಕ್ಷುದ್ರಗ್ರಹ ತಾಜಮಹಲಗಿಂತ ಮೂರು ಪಟ್ಟು ದೊಡ್ಡದಿದೆ. ಈ ಕ್ಷುದ್ರಗ್ರಹವು ೩೫೩ ಮೀಟರ್ ಅಗಲವಿದ್ದು, ಅದು ಪೃಥ್ವಿಯ ೧೯ ಲಕ್ಷ ಮೈಲು ಹತ್ತಿರ ಬರುವ ಸಾಧ್ಯತೆಯಿದೆ. ಈ ಕ್ಷುದ್ರಗ್ರಹ ತನ್ನ ಮಾರ್ಗವನ್ನು ಬದಲಾಯಿಸಿ ಮತ್ತು ಭೂಮಿಗೆ ಮೇಲೆ ಅಪ್ಪಳಿಸಿದರೆ ವಿನಾಶವಾಗಬಹುದು, ಎಂದು ವಿಜ್ಞಾನಿಗಳು ಹೇಳಿದ್ದಾರೆ. ಇಲ್ಲಿಯವರೆಗೆ ಪೃಥ್ವಿಯ ಇತಿಹಾಸದಲ್ಲಿ ಕೇವಲ ೨ ಕ್ಷುದ್ರಗ್ರಹಗಳು ಪೃಥ್ವಿಯ ಅತ್ಯಂತ ಹತ್ತಿರದಿಂದ ಹಾದು ಹೋಗಿವೆ.

ಕ್ಷುದ್ರಗ್ರಹ ಕಲ್ಲುಗಳಾಗಿದ್ದು ಅದು ಸೂರ್ಯನ ಸುತ್ತಲೂ ಒಂದು ಗ್ರಹದಂತೆ ತಿರುಗುತ್ತಿರುತ್ತದೆ; ಆದರೆ ಅದು ಆಕಾರದಿಂದ ಗ್ರಹಗಳಿಗಿಂತ ಬಹಳ ಚಿಕ್ಕದಿರುತ್ತವೆ. ನಮ್ಮ ಸೌರಮಂಡಲದಲ್ಲಿರುವ ಬಹಳಷ್ಟು ಕ್ಷುದ್ರಗ್ರಹಗಳು ಮಂಗಳ ಮತ್ತು ಗುರು ಗ್ರಹಗಳ ಕಕ್ಷೆಯಲ್ಲಿ ಕ್ಷುದ್ರಗ್ರಹಗಳ ಪಟ್ಟಿಯಲ್ಲಿ ಕಂಡು ಬರುತ್ತವೆ. ‘ನಾಸಾದಿಂದ ಸದ್ಯ ಭವಿಷ್ಯದಲ್ಲಿ ಭೂಮಿಗೆ ಅಪಾಯಕಾರಿಯಾಗುವ ಸಾಧ್ಯತೆಯಿರುವ ಸುಮಾರು ೨ ಸಾವಿರಗಳಷ್ಟು ಕ್ಷುದ್ರಗ್ರಹಗಳ ಮೇಲೆ ನಿಗಾ ಇಡಲಾಗುತ್ತಿದೆ. ಇದರಲ್ಲಿ ೨೨ ಇಂತಹ ಕ್ಷುದ್ರಗ್ರಹಗಳು ಸೇರ್ಪಡೆಯಾಗಿದ್ದು, ಮುಂಬರುವ ೧೦೦ ವರ್ಷಗಳಲ್ಲಿ ಪೃಥ್ವಿಯ ಮೇಲೆ ಸ್ವಲ್ಪ ಮಟ್ಟಿಗೆ ಅಪ್ಪಳಿಸುವ ಸಾಧ್ಯತೆಯಿದೆ.