ಮಕ್ಕಳ ಅಶ್ಲೀಲ ಚಿತ್ರಗಳನ್ನು ಪ್ರಸಾರ ಮಾಡಿದಕ್ಕೆ ಟ್ವಿಟರ್ ವಿರುದ್ಧ ಅಪರಾಧ ದಾಖಲು !
ದೇಶದಾದ್ಯಂತ ಟ್ವಿಟರ್ ವಿರುದ್ಧ ಒಟ್ಟು ೪ ಅಪರಾಧಗಳನ್ನು ನೊಂದಾಯಿಸಲಾಗಿದೆ. ಅದರಲ್ಲಿ ತಪ್ಪಾದ ಭೂಪಟ ತೋರಿಸಿದ ಪ್ರಕರಣದಲ್ಲಿ ಉತ್ತರಪ್ರದೇಶ ಹಾಗೂ ಮಧ್ಯಪ್ರದೇಶದಲ್ಲಿ, ಸಾಮಾಜಿಕ ಸೌಹಾರ್ದ ಕೆಡಿಸುವ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶದಲ್ಲಿ ಹಾಗೂ ಸಣ್ಣ ಮಕ್ಕಳ ಸಂಬಂಧಿಸಿದಂತೆ ಅಶ್ಲೀಲ ಚಿತ್ರಗಳನ್ನು ಪ್ರಸಾರ ಮಾಡಿರುವ ಪ್ರಕರಣದಲ್ಲಿ ದೆಹಲಿಯ ಪೊಲೀಸರ ಸೈಬರ್ ಶಾಖೆಯಲ್ಲಿ ಅಪರಾಧ ದಾಖಲಾಗಿದೆ.