ದ್ರವಿಡ ವಿರೋಧಿ ವಿಚಾರಧಾರೆಯ ಬಗ್ಗೆ ಚರ್ಚೆ ಮಾಡುವುದಕ್ಕಾಗಿ ಆಯೋಜಿಸಿರುವ ಸಭೆಗೆ ಪೊಲೀಸ ಅನುಮತಿ ನಿರಾಕರಿಸಲು ಸಾಧ್ಯವಿಲ್ಲ ! – ಮದ್ರಾಸ್ ಉಚ್ಚ ನ್ಯಾಯಾಲಯ

ದ್ರವಿಡ ವಿರೋಧಿ ವಿಚಾರಧಾರೆಯ ಕುರಿತು ಚರ್ಚೆ ನಡೆಸುವುದಕ್ಕಾಗಿ ಸಭಾಗೃಹದಲ್ಲಿ ಆಯೋಜಿಸಲಾದ ಸಭೆಗೆ ಪೊಲೀಸರು ಅನುಮತಿ ನಿರಾಕರಿಸಲು ಸಾಧ್ಯವಿಲ್ಲ. ಯಾವುದೇ ವಿಶಿಷ್ಟ ವಿಚಾರಧಾರೆಯ ವಿರುದ್ಧ ಅಭಿಪ್ರಾಯ ವ್ಯಕ್ತಪಡಿಸಲು ಜನರನ್ನು ತಡೆಯಲು ಸಾಧ್ಯವಿಲ್ಲ,

ಫರೀದಾಬಾದ (ಹರಿಯಾಣಾ)ದಲ್ಲಿ ಮತಾಂಧರಿಂದ ಬಜರಂಗದಳ ಕಾರ್ಯಕರ್ತನ ಹತ್ಯೆ, ಮತ್ತೊಬ್ಬನಿಗೆ ಗಾಯ

ಬಜರಂಗದಳದ ಇಬ್ಬರು ಕಾರ್ಯಕರ್ತರ ಮೇಲೆ ನಡೆದ ಮಾರಣಾಂತಿಕ ದಾಳಿಯಲ್ಲಿ ಅಲೋಕ ಎಂಬ ಕಾರ್ಯಕರ್ತ ಸಾವನ್ನಪ್ಪಿದ್ದು, ಮತ್ತೊಬ್ಬ ಶಿವಂ ಗಂಭೀರವಾಗಿ ಗಾಯಗೊಂಡಿದ್ದು, ಅವನಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನಡೆಯುತ್ತಿದೆ.

ಪ್ರಯಾಗರಾಜ್ ನಲ್ಲಿ ಶಿವನ ದೇವಸ್ಥಾನದಿಂದ ಶಿವಲಿಂಗ ಕಳ್ಳತನ !

ಇಲ್ಲಿನ ಅತರಸುಯಿಯಾ ಪ್ರದೇಶದ ಪರ್ವತ ಮೊಹಲ್ಲಾದಲ್ಲಿರುವ ಶಿವನ ದೇವಸ್ಥಾನದಿಂದ ಶಿವಲಿಂಗವನ್ನೇ ಕಳ್ಳತನ ಮಾಡಲಾಗಿದೆ. ಬೆಳಗ್ಗೆ ಭಕ್ತರು ಪೂಜೆ ಮಾಡಲು ಬಂದಾಗ ಈ ಘಟನೆ ಬೆಳಕಿಗೆ ಬಂದಿದೆ.

ಜಮ್ಮು ಮತ್ತು ಕಾಶ್ಮೀರದ ಪಾಕಿಸ್ತಾನ ಗಡಿಯಲ್ಲಿ ಭಾರತೀಯ ಯೋಧ ನಾಪತ್ತೆ

ಕಾಶ್ಮೀರದ ಬಾಲಾಕೋಟ್ ಸೆಕ್ಟರ್‌ನ ಗಡಿ ನಿಯಂತ್ರಣ ರೇಖೆ ಬಳಿ ಭಾರತೀಯ ಭದ್ರತಾ ಪಡೆಯ ಯೋಧ ನಾಪತ್ತೆಯಾಗಿದ್ದಾರೆ. ಆತನನ್ನು ಪತ್ತೆಹಚ್ಚಲು ಭದ್ರತಾ ಪಡೆಗಳಿಂದ ಪ್ರಯತ್ನಗಳು ನಡೆಯುತ್ತಿವೆ; ಆದರೆ ಅವರು ಇನ್ನೂ ಯಶಸ್ವಿಯಾಗಲಿಲ್ಲ. ಈ ಯೋಧನ ಹೆಸರು ಅಮಿತ್ ಪಾಸ್ವಾನ್ ಎಂದಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರಿಗೆ ದೂರು ನೀಡಲಾಗಿದೆ.

ಉದಯನಿಧಿ ಸ್ಟಾಲಿನ್ ಮತ್ತು ಪ್ರಿಯಾಂಕ ಖರ್ಗೆ ವಿರುದ್ಧ ಕಾನಪುರದಲ್ಲಿ ದೂರು ದಾಖಲು

ತಮಿಳುನಾಡಿನ ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ರವರ ಪುತ್ರ ಮತ್ತು ರಾಜ್ಯದ ಕ್ರೀಡಾಸಚಿವ ಉದಯನಿಧಿಯವರು ಸನಾತನ ಧರ್ಮವನ್ನು ಮುಗಿಸುವ ಹೇಳಿಕೆಯನ್ನು ಮತ್ತು ಅವರ ಹೇಳಿಕೆಯನ್ನು ಬೆಂಬಲಿಸಿದ ಕಾಂಗ್ರೆಸ್ ನ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಇವರ ಪುತ್ರ ಕರ್ನಾಟಕದ ಸಚಿವ ಪ್ರಿಯಾಂಕ ಖರ್ಗೆ ವಿರುದ್ಧ ದೂರು ದಾಖಲಿಸಲಾಗಿದೆ.

ಸಾಲಂಗಪುರ (ಗುಜರಾತ) ಇಲ್ಲಿನ ಸ್ವಾಮಿನಾರಾಯಣ ದೇವಸ್ಥಾನದಿಂದ ಶ್ರೀ ಹನುಮಂತನ ಅವಹೇಳನಕಾರಿ ಚಿತ್ರಗಳನ್ನು ಅಳಿಸಿ ಹಾಕಲಾಗಿದೆ !

ಇಲ್ಲಿಯ ಸ್ವಾಮಿನಾರಾಯಣ ದೇವಸ್ಥಾನದ ಗೋಡೆಗಳ ಮೇಲೆ ಚಿತ್ರಿಸಲಾಗಿದ್ದ ಶ್ರೀ ಹನುಮಂತನ ಅವಹೇಳನಕಾರಿ ಚಿತ್ರಗಳನ್ನು ಈಗ ಅಳಿಸಿ ಹಾಕಲಾಗಿದೆ. ಸೆಪ್ಟೆಂಬರ್ 4 ರಂದು ನಡೆದ ಸಂತ ಮತ್ತು ಹಿಂದೂ ಸಂಘಟನೆಗಳ ಸಭೆಯಲ್ಲಿ ಚಿತ್ರಗಳನ್ನು ಅಳಿಸಲು ನಿರ್ಧಾರವನ್ನು ತೆಗೆದುಕೊಂಡ ಬಳಿಕ ಅದನ್ನು ಸೆಪ್ಟೆಂಬರ್ 5 ರಂದು ಅಳಿಸಿ ಹಾಕಲಾಯಿತು.

ಪಾಕಿಸ್ತಾನದ ಸಿಂಧ್ ನ ಆಸ್ಪತ್ರೆಯಲ್ಲಿ ಹಿಂದೂ ಮಹಿಳೆಯ ಮೇಲೆ ವೈದ್ಯರಿಂದ ಸಾಮೂಹಿಕ ಅತ್ಯಾಚಾರ

ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ಆಸ್ಪತ್ರೆಗೆ ಮೂತ್ರಪಿಂಡದ ಕಾಯಿಲೆಯ ಚಿಕಿತ್ಸೆಗಾಗಿ ದಾಖಲಾಗಿದ್ದ 23 ವರ್ಷದ ಹಿಂದೂ ಮಹಿಳೆಯ ಮೇಲೆ ಅಲ್ಲಿನ ಡಾಕ್ಟರರು ಗುಂಗಿನ ಔಷಧ ನೀಡಿ ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ.

ಅಲಹಾಬಾದ್ ಉಚ್ಚ ನ್ಯಾಯಾಲಯವು ಮಹಿಳಾ ಪೊಲೀಸ್ ಮೇಲೆ ನಡೆದ ಹಲ್ಲೆ ಕುರಿತು, ರಾತ್ರಿಯೇ ವಿಚಾರಣೆ ನಡೆಸಿತು !

ಇಂತಹ ಸೂಕ್ಷ್ಮ ಮತ್ತು ತತ್ಪರತೆಯನ್ನು ಜನರು ನಿರೀಕ್ಷಿಸುತ್ತಾರೆ ಎಂದು ಯಾರಾದರೂ ಹೇಳಿದರೆ ತಪ್ಪಾಗಲಾರದು !

ಮುಂಗೆರ (ಬಿಹಾರ) ಇಲ್ಲಿಯ ಮುಸಲ್ಮಾನರ ಮೆರವಣಿಗೆಯ ಹಿನ್ನೆಲೆಯಲ್ಲಿ ಸರಕಾರದಿಂದ ೧೮ ದೇವಸ್ಥಾನಗಳು ಮತ್ತು ೮ ಪುತ್ತಳಿಗಳಿಗೆ ರಕ್ಷಣೆ !

ಹಿಂದುಗಳ ದೇವಸ್ಥಾನಗಳಿಗೆ ರಕ್ಷಣೆ ನೀಡಲು ಮುಸಲ್ಮಾನರು ಏಕೆ ಒತ್ತಾಯಿಸುತ್ತಾರೆ ? ಇದರ ಉತ್ತರ ಮುಸಲ್ಮಾನರು ಮತ್ತು ಬಿಹಾರ ಪೊಲೀಸರು ನೀಡಬೇಕು !

ಗುಜರಾತ್ ನಲ್ಲಿ ಮುಸ್ಲಿಂ ಹುಡುಗಿಯರೊಂದಿಗೆ ಕಂಡು ಬರುವ ಹಿಂದೂ ಯುವಕರನ್ನು ಗುರಿ ಮಾಡಿ ಪೀಡಿಸುತ್ತಿದ್ದ ಮುಸಲ್ಮಾನರ ಬಂಧನ

ಮುಸ್ಲಿಂ ಯುವತಿಯರೊಂದಿಗೆ ಕಂಡ ಹಿಂದೂ ಯುವಕರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವಡೋದರಾ ಪೊಲೀಸರು 4 ಮುಸಲ್ಮಾನರನ್ನು ಬಂಧಿಸಿದ್ದಾರೆ.