ದ್ರವಿಡ ವಿರೋಧಿ ವಿಚಾರಧಾರೆಯ ಬಗ್ಗೆ ಚರ್ಚೆ ಮಾಡುವುದಕ್ಕಾಗಿ ಆಯೋಜಿಸಿರುವ ಸಭೆಗೆ ಪೊಲೀಸ ಅನುಮತಿ ನಿರಾಕರಿಸಲು ಸಾಧ್ಯವಿಲ್ಲ ! – ಮದ್ರಾಸ್ ಉಚ್ಚ ನ್ಯಾಯಾಲಯ

ಚೆನ್ನೈ (ತಮಿಳುನಾಡು) – ದ್ರವಿಡ ವಿರೋಧಿ ವಿಚಾರಧಾರೆಯ ಕುರಿತು ಚರ್ಚೆ ನಡೆಸುವುದಕ್ಕಾಗಿ ಸಭಾಗೃಹದಲ್ಲಿ ಆಯೋಜಿಸಲಾದ ಸಭೆಗೆ ಪೊಲೀಸರು ಅನುಮತಿ ನಿರಾಕರಿಸಲು ಸಾಧ್ಯವಿಲ್ಲ. ಯಾವುದೇ ವಿಶಿಷ್ಟ ವಿಚಾರಧಾರೆಯ ವಿರುದ್ಧ ಅಭಿಪ್ರಾಯ ವ್ಯಕ್ತಪಡಿಸಲು ಜನರನ್ನು ತಡೆಯಲು ಸಾಧ್ಯವಿಲ್ಲ, ಎಂದು ಮದ್ರಾಸ್ ಉಚ್ಚ ನ್ಯಾಯಾಲಯವು ಅಭಿಪ್ರಾಯ ವ್ಯಕ್ತಪಡಿಸಿದೆ. ಹಾಗೂ ನ್ಯಾಯಾಲಯವು ಪೂರ್ಣಮಲ್ಲಿ ಪೊಲೀಸ ಠಾಣೆಯ ಪೊಲೀಸರಿಗೆ ನವಂಬರ್ ಒಂದರಂದು ದ್ರವಿಡವಿರೋಧಿ ವಿಚಾರಧಾರೆ ಇರುವ ಜನರು ಆಯೋಜಿಸಿರುವ ಸಭೆಗೆ ಅನುಮತಿ ನೀಡಲು ಆದೇಶ ನೀಡಿದೆ ಮತ್ತು ಸುವ್ಯವಸ್ಥೆಗೆ ತೊಂದರೆ ಆಗಬಾರದು. ಈ ಸಭೆಗೆ ಪೊಲೀಸರಿಂದ ವಿರೋಧ ಆಗಿರುವುದರಿಂದ ಮದ್ರಾಸ್ ಉಚ್ಚ ನ್ಯಾಯಾಲಯದಲ್ಲಿ ಅರ್ಜಿ ದಾಖಲಿಸಲಾಗಿತ್ತು. ಅದರ ಬಗ್ಗೆ ಮದ್ರಾಸ್ ಉಚ್ಚ ನ್ಯಾಯಾಲಯವು, ಸಭಾಗೃಹದಲ್ಲಿ ನಡೆಯುವ ಸಭೆಗಾಗಿ ಪೊಲೀಸರು ಅನುಮತಿ ನೀಡಲೇಬೇಕು; ಕಾರಣ ಯಾವುದೋ ವ್ಯಕ್ತಿಯ ಆಕ್ಷೇಪದ ಆಧಾರದಲ್ಲಿ ಅನುಮತಿ ನಿರಾಕರಿಸುವುದು ಹಾಗೂ ಸಂಬಂಧಿತರ ಭಾಷಣ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ ನಿರಾಕರಿಸಿದ ಹಾಗೆ ಆಗುವುದು.

ನ್ಯಾಯಾಲಯದ ನೀಡಿದ ಆದೇಶದಲ್ಲಿ,

೧. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ, ಯಾವುದಾದರೂ ಶ್ರದ್ಧೆ ಅಥವಾ ವಿಚಾರಧಾರೆ ಇದರ ಬಗ್ಗೆ ಬೇರೆ ಬೇರೆ ವಿಚಾರ ಇರುವುದು. ಪ್ರತಿಯೊಬ್ಬರ ವಿಚಾರಧಾರೆ ಒಂದೇ ರೀತಿಯಲ್ಲಿ ಪಾಲಿಸಲು ಕಡ್ಡಾಯಗೊಳಿಸಲು ಸಾಧ್ಯವಿಲ್ಲ ಮತ್ತು ಯಾವುದಾದರೂ ವ್ಯಕ್ತಿಗೆ ಯಾವುದೋ ವಿಚಾರಧಾರೆಯ ಬಗ್ಗೆ ಅವನ ಅಭಿಪ್ರಾಯ ಮಂಡಿಸುವ ಅಧಿಕಾರ ಇರುತ್ತದೆ.

೨. ಚರ್ಚೆ ನಡೆದರೆ, ಆಗ ಸಮಾಜದಲ್ಲಿ ಉತ್ಕ್ರಾಂತಿಗೆ ಅವಕಾಶ ಇರುತ್ತದೆ. ಅರ್ಜಿದಾರ ಮತ್ತು ಅವರ ಸಂಸ್ಥೆ ಅದರ ಅಭಿಪ್ರಾಯ ಮಂಡಿಸುತ್ತದೆ. ಅದು ಜನಪ್ರಿಯ ಇರುವ ದ್ರವೀಣ ವಿಚಾರಧಾರೆಯ ವಿರುದ್ಧ ಆಗಬಹುದು; ಆದರೆ ಈ ಅಂಶಗಳಿಂದ ಸಭಾಗೃಹದಲ್ಲಿ ಆಯೋಜಿಸಿರುವ ಸಭೆಯ ಆಯೋಜನೆ ತಡೆಯಲು ಸಾಧ್ಯವಿಲ್ಲ.