ಮುಸಲ್ಮಾನರಿಂದಲೇ ಒತ್ತಾಯ !
ಮುಂಗೆರ (ಬಿಹಾರ) – ಇಲ್ಲಿಯ ಮುಸಲ್ಮಾನರು ‘ಚ್ಚೆಹಲುಮ’ ಹಬ್ಬದ ಹಿನ್ನೆಲೆಯಲ್ಲಿ ಪೊಲೀಸರು ಮುಸಲ್ಮಾನರ ಮೆರವಣಿಗೆಯ ಮಾರ್ಗದಲ್ಲಿನ ಹಿಂದುಗಳ ೧೮ ದೇವಸ್ಥಾನಗಳು ಹಾಗೂ ೮ ರಾಷ್ಟ್ರ ಪುರುಷರ ಪುತ್ತಳಿಗಳಿಗೆ ವಿಶೇಷ ರಕ್ಷಣೆ ನೀಡಿದ್ದಾರೆ. ಇದರ ಸುತ್ತಲೂ ಬಿದಿರಿನ ತಡೆಗೋಡೆ ನಿರ್ಮಾಣ ಮಾಡಿದ್ದಾರೆ. ಭಾಜಪ ಮತ್ತು ಸ್ಥಳೀಯ ನಾಗರೀಕರು ಇದನ್ನು ವಿರೋಧಿಸಿದ ನಂತರ ಮಹಾಪುರುಷರ ಮೂರ್ತಿಗಳಿಗೆ ತಡೆಗೋಡೆ ಅಳವಡಿಕೆಯನ್ನು ತೆರೆವುಗೊಳಿಸಿದ್ದಾರೆ.
೧. ಪೊಲೀಸರು ಆಯೋಜಿಸಿರುವ ಶಾಂತಿ ಸಮಿತಿಯ ಸಭೆಯಲ್ಲಿ ಮುಸಲ್ಮಾನರು, ಮೆರವಣಿಗೆಯ ಮಾರ್ಗದಲ್ಲಿನ ಎಲ್ಲಾ ದೇವಸ್ಥಾನಗಳು ಮತ್ತು ಮೂರ್ತಿಗಳಿಗೆ ರಕ್ಷಣೆ ನೀಡಬೇಕು. ಅದರ ನಂತರ ಪೊಲೀಸರು ಮೇಲಿನ ಆಯೋಜನೆ ಮಾಡಿದ್ದರು. ಛತ್ರಪತಿ ಶಿವಾಜಿ ಮಹಾರಾಜ, ಭಗತ ಸಿಂಹ, ಸರದಾರ ವಲ್ಲಭಾಯಿ ಪಟೇಲ, ಪಂಡಿತ ದೀನದಯಾಳ ಉಪಾಧ್ಯಾಯ ಮುಂತಾದವರ ಪುತ್ತಳಿಗಳ ಸಮಾವೇಶವಿದೆ.
೨. ದೇವಸ್ಥಾನಗಳಿಗೆ ರಕ್ಷಣೆ ಪೂರೈಸಿರುವುದರಿಂದ ಮತ್ತು ತಡೆಗೋಡೆ ನಿರ್ಮಾಣ ಮಾಡಿರುವುದರಿಂದ ಹಿಂದುತ್ವನಿಷ್ಟ ಸಂಘಟನೆಗಳಿಂದ ಅಸಮಾಧಾನ ವ್ಯಕ್ತಪಡಿಸಿದೆ. ಹಾಗೂ ಭಾಜಪದಿಂದ ಸರಕಾರಕ್ಕೆ ಮುಂದಿನ ೨೪ ಗಂಟೆಯ ಸಮಯದಲ್ಲಿ ನಿರ್ಮಿಸಿರುವ ತಡೆಗೋಡೆಯನ್ನು ತೆರವುಗೊಳಿಸುವ ಎಚ್ಚರಿಕೆ ನೀಡಿದೆ.
೩. ಮುಂಗೆರ ಇಲ್ಲಿಯ ಭಾಜಪದ ಸಂಸದ ಪ್ರಣವ ಕುಮಾರ ಇವರು, ಈ ರೀತಿ ದೇವಸ್ಥಾನಗಳು ಮತ್ತು ಪುತ್ತಳಿಗಳ ಸುತ್ತಲೂ ತಡೆಗೋಡೆ ನಿರ್ಮಿಸುವುದು ತಪ್ಪಾಗಿದೆ. ಹಿಂದುಗಳ ಎಲ್ಲಕ್ಕಿಂತ ದೊಡ್ಡ ಹಬ್ಬ ನವರಾತ್ರಿ ಆಗಿರುತ್ತದೆ. ಆ ಸಮಯದಲ್ಲಿ ಇಲ್ಲಿ ಸಾಧುಗಳ ಅಖಾಡಾಗಳ ಮೆರವಣಿಗೆ ನಡೆಯುತ್ತದೆ, ಆಗ ಎಂದು ಅಡಚಣೆ ಉಂಟಾಗುವುದಿಲ್ಲ ಎಂದು ಹೇಳಿದರು.
मुस्लिमों के चेहल्लुम पर मुंगेर में 18 मंदिर और 8 महापुरुषों को खतरा: बिहार पुलिस ने बाँस-बल्ली से घेरा, BJP ने की हटाने की माँग#Bihar #Munger #chehallum https://t.co/83VpHucE4f
— ऑपइंडिया (@OpIndia_in) September 3, 2023
ಸಂಪಾದಕರ ನಿಲುವು* ಹಿಂದುಗಳ ದೇವಸ್ಥಾನಗಳಿಗೆ ರಕ್ಷಣೆ ನೀಡಲು ಮುಸಲ್ಮಾನರು ಏಕೆ ಒತ್ತಾಯಿಸುತ್ತಾರೆ ? ಇದರ ಉತ್ತರ ಮುಸಲ್ಮಾನರು ಮತ್ತು ಬಿಹಾರ ಪೊಲೀಸರು ನೀಡಬೇಕು ! * ಹಿಂದುಗಳ ಧಾರ್ಮಿಕ ಮೆರವಣಿಗೆಯಲ್ಲಿ ಮಸೀದಿಯಿಂದ ದಾಳಿ ಮಾಡಲಾಗುತ್ತದೆ, ಇದು ತಿಳಿದಿರುವಾಗ ಪೊಲೀಸರು ಇಂತಹ ಮಸೀದಿಯ ಸ್ಥಳಗಳಲ್ಲಿ ಪೊಲೀಸ ನೇಮಕ ಮಾಡುವುದಿಲ್ಲ ಇದನ್ನು ತಿಳಿದುಕೊಳ್ಳಿ ! |