ಗುಜರಾತ್ ನಲ್ಲಿ ಮುಸ್ಲಿಂ ಹುಡುಗಿಯರೊಂದಿಗೆ ಕಂಡು ಬರುವ ಹಿಂದೂ ಯುವಕರನ್ನು ಗುರಿ ಮಾಡಿ ಪೀಡಿಸುತ್ತಿದ್ದ ಮುಸಲ್ಮಾನರ ಬಂಧನ

ವಡೋದರಾ (ಗುಜರಾತ್) – ಮುಸ್ಲಿಂ ಯುವತಿಯರೊಂದಿಗೆ ಕಂಡ ಹಿಂದೂ ಯುವಕರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವಡೋದರಾ ಪೊಲೀಸರು 4 ಮುಸಲ್ಮಾನರನ್ನು ಬಂಧಿಸಿದ್ದಾರೆ. ಯಾಕಿಬ್ ಅಲಿ ಶೇಖ್, ನೌಮಾನ ಶೇಖ, ಮೊಹಸಿನ ಪಠಾಣ ಮತ್ತು ಅಬರಾರ ಖಾನ ಸಿಂಧಿ ಎಂದು ಗುರುತಿಸಲಾಗಿದೆ. ಇದಲ್ಲದೇ ಇತರೆ 9 ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇವರೆಲ್ಲರೂ ‘ಆರ್ಮಿ ಆಫ್ ಮೆಹಂದಿ’ ಹೆಸರಿನ ‘ವಾಟ್ಸಾಪ್ ಗುಂಪಿ’ಗೆ ಸೇರಿದವರಾಗಿದ್ದಾರೆ.

ಈ ಮತಾಂಧರು ಕಳೆದ 5 ತಿಂಗಳಲ್ಲಿ ಕನಿಷ್ಠ 15 ಹಿಂದೂ ಯುವಕರನ್ನು ಗುರಿಯಾಗಿಸಿಕೊಂಡು ಅವರನ್ನು ಥಳಿಸಿದ್ದಾರೆ. ಈ ಮತಾಂಧರ ಗುಂಪು ಮುಸ್ಲಿಂ ಹುಡುಗಿ ಹಿಂದೂ ಹುಡುಗನೊಂದಿಗೆ ಬೈಕ್ ನಲ್ಲಿ ಹೋಗುತ್ತಿರುವುದನ್ನು ಕಂಡ ಕೂಡಲೇ ಅವರನ್ನು ತಡೆದು, ಅವರ ವಿಡಿಯೋ ಮಾಡಿ ಹಿಂದೂ ಹುಡುಗನನ್ನು ಥಳಿಸುತ್ತಾರೆ. ಇದಕ್ಕಾಗಿ, ಮತಾಂಧರು ಫೆಬ್ರುವರಿ 2023 ರಲ್ಲಿ ‘ಹುಸೇನಿ ಲಷ್ಕರ್’ ಎಂಬ ಹೆಸರಿನ 500 ಜನರ ‘ವಾಟ್ಸಾಪ್ ಗುಂಪ’ನ್ನು ರಚಿಸಿದ್ದರು. ಪೊಲೀಸರಿಗೆ ಅನುಮಾನ ಬಾರದಂತೆ ಆರೋಪಿಗಳು ಯಾವುದೇ ‘ವಾಟ್ಸಾಪ್ ಗ್ರೂಪ್’ ಅನ್ನು ಕೇವಲ 3 ರಿಂದ 4 ತಿಂಗಳ ಕಾಲ ಸಕ್ರಿಯವಾಗಿರಿಸಿಕೊಳ್ಳುತ್ತಿದ್ದರು ನಂತರ ಗ್ರೂಪ್ ಅನ್ನು ಸ್ಥಗಿತಗೊಳಿಸಿ ಹೊಸ ಗುಂಪನ್ನು ಸ್ಥಾಪಿಸುತ್ತಿದ್ದರು. ‘ಹುಸೇನಿ ಲಷ್ಕರ್’ ನಂತರ, ‘ಆರ್ಮಿ ಆಫ್ ಮೆಹಂದಿ’ ಮತ್ತು ನಂತರ ‘ಲಷ್ಕರ್-ಎ-ಆದಮ್’ ಈ ಹೆಸರಿನ ಅಡಿಯಲ್ಲಿ ಗುಂಪನ್ನು ಸ್ಥಾಪಿಸಲಾಗಿತ್ತು. ಈ ಬಗ್ಗೆ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

ಸಂಪಾದಕರ ನಿಲುವು

* ಮತಾಂಧ ಮುಸಲ್ಮಾನರು ! ಯಾವಾಗಲೂ ಮುಸಲ್ಮಾನ ಯುವಕ ಮತ್ತು ಹಿಂದೂ ಯುವತಿಯರನ್ನು ವಿರೋಧಿಸುವ ಹಿಂದೂಗಳಿಗೆ `ಸ್ನೇಹ ಅಥವಾ ಪ್ರೀತಿಗೆ ಬಣ್ಣವಿಲ್ಲ’ ಎಂದು ಉಪದೇಶಿಸುವವರು ಈಗ ಯಾವ ಬಿಲದಲ್ಲಿ ಹೋಗಿ ಅಡಗಿ ಕುಳಿತಿದ್ದಾರೆ ?