ಹಿಂದೂಗಳ ಸಂಘಟಿತ ವಿರೋಧದ ಪರಿಣಾಮ !
ಸಾಲಂಗಪುರ (ಗುಜರಾತ) – ಇಲ್ಲಿಯ ಸ್ವಾಮಿನಾರಾಯಣ ದೇವಸ್ಥಾನದ ಗೋಡೆಗಳ ಮೇಲೆ ಚಿತ್ರಿಸಲಾಗಿದ್ದ ಶ್ರೀ ಹನುಮಂತನ ಅವಹೇಳನಕಾರಿ ಚಿತ್ರಗಳನ್ನು ಈಗ ಅಳಿಸಿ ಹಾಕಲಾಗಿದೆ. ಸೆಪ್ಟೆಂಬರ್ 4 ರಂದು ನಡೆದ ಸಂತ ಮತ್ತು ಹಿಂದೂ ಸಂಘಟನೆಗಳ ಸಭೆಯಲ್ಲಿ ಚಿತ್ರಗಳನ್ನು ಅಳಿಸಲು ನಿರ್ಧಾರವನ್ನು ತೆಗೆದುಕೊಂಡ ಬಳಿಕ ಅದನ್ನು ಸೆಪ್ಟೆಂಬರ್ 5 ರಂದು ಅಳಿಸಿ ಹಾಕಲಾಯಿತು. ಈ ವೇಳೆ ಪೊಲೀಸ್ ಬಂದೋಬಸ್ತು ಮಾಡಲಾಗಿತ್ತು. ಅಳಿಸಿ ಹಾಕಲಾಗಿರುವ ಚಿತ್ರಗಳ ಬದಲಿಗೆ ಹೊಸ ಚಿತ್ರಗಳನ್ನು ಚಿತ್ರಿಸಲಾಗುತ್ತದೆ. ಆ ಚಿತ್ರಗಳಲ್ಲಿ ಶ್ರೀ ಹನುಮಂತನನ್ನು ಸಹಜಾನಂದ ಸ್ವಾಮಿಯ ಸೇವಕನಂತೆ ತೋರಿಸಲಾಗಿತ್ತು. ಇದಕ್ಕೆ ಹಿಂದುತ್ವನಿಷ್ಠ ಸಂಘಟನೆಗಳು ವಿರೋಧ ವ್ಯಕ್ತಪಡಿಸಿದ್ದವು. ವ್ಯಕ್ತಿಯೊಬ್ಬನು ಈ ಚಿತ್ರಗಳನ್ನು ಅಳಿಸಲು ಪ್ರಯತ್ನಿಸಿದಾಗ ಪೊಲೀಸರು ಬಂಧಿಸಿದ್ದರು. ಈ ಪ್ರಕರಣ ಗುಜರಾತ್ ನಲ್ಲಿ ವಿವಾದಕ್ಕೆ ಕಾರಣವಾಗಿತ್ತು.
ಸೆಪ್ಟೆಂಬರ್ 4 ರಂದು, ಗುಜರಾತ್ ನ ಮುಖ್ಯಮಂತ್ರಿ ಭೂಪೇಂದ್ರ ಪಟೇಲ ಮತ್ತು ಗೃಹ ಸಚಿವ ಹರ್ಷ ಸಂಘ್ವಿ ಅವರ ಉಪಸ್ಥಿತಿಯಲ್ಲಿ ಈ ವಿಷಯದ ಕುರಿತು ಸಾಧುಗಳು, ಸಂತರು ಮತ್ತು ಹಿಂದೂ ಮುಖಂಡರ ಸಭೆಯನ್ನು ಆಯೋಜಿಸಲಾಗಿತ್ತು. ಈ ಸಭೆಯಲ್ಲಿ ಈ ವಿವಾದವನ್ನು ಆದಷ್ಟು ಬೇಗ ಇತ್ಯರ್ಥಪಡಿಸಲು ಸಹಮತಿ ವ್ಯಕ್ತಪಡಿಸಲಾಗಿತ್ತು. ಇದೀಗ ಈ ವಿವಾದವನ್ನು ಪೂರ್ಣವಾಗಿ ಬಗೆಹರಿಸಲಾಗಿದೆ.
ಸ್ವಾಮಿನಾರಾಯಣ ಸಂಪ್ರದಾಯ ವೈದಿಕ ಸನಾತನ ಧರ್ಮದ ಒಂದು ಅಂಗ ! – ಪರಮಾನಂದ ಸ್ವಾಮಿ
ಈ ಸಂದರ್ಭದಲ್ಲಿ ಪರಮಾನಂದ ಸ್ವಾಮಿಗಳು ಮಾತನಾಡುತ್ತಾ, ಸ್ವಾಮಿನಾರಾಯಣ ಸಂಪ್ರದಾಯವು ವೈದಿಕ ಸನಾತನ ಧರ್ಮದ ಒಂದು ಅಂಗವಾಗಿದೆ ಎಂದು ಹೇಳಿದ್ದರು. ಈ ಸಂಪ್ರದಾಯದ ಎಲ್ಲಾ ಭಕ್ತರು, ಸಂತರು ವೈದಿಕ ಪರಂಪರೆ, ಪೂಜಾ ವಿಧಿಗಳು ಮತ್ತು ಪದ್ಧತಿಗಳನ್ನು ಆಚರಿಸುತ್ತಾರೆ. ಹಿಂದೂ ಸಮಾಜದ ಭಾಗವಾಗಿರುವ ಸ್ವಾಮಿನಾರಾಯಣ ಸಂಪ್ರದಾಯವು ಸಮಾಜದ ಭಾವನೆಗಳನ್ನು ನೋಯಿಸಲು ಇಚ್ಛಿಸುವುದಿಲ್ಲ ಎಂದು ಹೇಳಿದರು.
Salangpur Temple controversy: Swaminarayan sect removes Lord Hanuman murals after meeting with Hindu saints under VHP’s initiativehttps://t.co/QOtq3m67YC
— OpIndia.com (@OpIndia_com) September 5, 2023