ಅಲಹಾಬಾದ್ ಉಚ್ಚ ನ್ಯಾಯಾಲಯವು ಮಹಿಳಾ ಪೊಲೀಸ್ ಮೇಲೆ ನಡೆದ ಹಲ್ಲೆ ಕುರಿತು, ರಾತ್ರಿಯೇ ವಿಚಾರಣೆ ನಡೆಸಿತು !

ಮುಖ್ಯ ನ್ಯಾಯಮೂರ್ತಿಗಳ ನಿವಾಸದಲ್ಲಿಯೇ ವಿಚಾರಣೆ !

ಪ್ರಯಾಗರಾಜ (ಉತ್ತರ ಪ್ರದೇಶ) – ಅಯೋಧ್ಯೆಯಲ್ಲಿ ಸರಯು ಎಕ್ಸ್ ಪ್ರೆಸ್ ನಲ್ಲಿ ಓರ್ವ ಮಹಿಳಾ ಪೊಲೀಸ ರಕ್ತದ ಮಡುವಿನಲ್ಲಿ ಬಿದ್ದಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರವಾದ ಬಳಿಕ, ಅಲಹಾಬಾದ್ ಉಚ್ಚನ್ಯಾಯಾಲಯವು ತಾನೇ ಮುಂದಾಗಿ ಮೊಕದ್ದಮೆ ದಾಖಲಿಸಿಕೊಂಡು, ಸೆಪ್ಟೆಂಬರ್ 3 ರಂದು ರಾತ್ರಿ 9 ಗಂಟೆಗೆ ವಿಶೇಷ ಪೀಠವನ್ನು ರಚಿಸಿ, ಸರಕಾರಿ ನಿವಾಸದಲ್ಲಿಯೇ ವಿಚಾರಣೆ ನಡೆಸಿತು. ಖಂಡಪೀಠವು ಸೆಪ್ಟೆಂಬರ್ 4 ರಂದು ಉತ್ತರ ಪ್ರದೇಶ ಸರಕಾರ ಮತ್ತು ರೈಲ್ವೆ ಪೊಲೀಸರಿಗೆ ಉತ್ತರ ನೀಡುವಂತೆ ಆದೇಶಿಸಿತ್ತು. ಸರಕಾರಿ ನ್ಯಾಯವಾದಿ ಎ.ಕೆ. ಸ್ಯಾಂಡ ಇವರಿಂದ ಈವರೆಗೆ ಕೈಗೊಂಡ ಕ್ರಮಗಳ ವಿವರಗಳನ್ನು ಕೋರಿದ್ದು, ಅವರಿಗೆ ನ್ಯಾಯಾಲಯಕ್ಕೆ ಹಾಜರಾಗುವಂತೆ ಸೂಚಿಸಲಾಗಿದೆ. ಅದರಂತೆ ಸೆಪ್ಟೆಂಬರ 4ರಂದು ನ್ಯಾಯಾಲಯದ ವಿಚಾರಣೆ ವೇಳೆ ಇಬ್ಬರೂ ಉತ್ತರ ನೀಡಿದ್ದರು. ಆರೋಪಿಗಳನ್ನು ಗುರುತಿಸಲಾಗಿದ್ದು, ಅವರ ಪತ್ತೆಗೆ ತಂಡಗಳನ್ನು ರಚಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಮುಂದಿನ ವಿಚಾರಣೆ ಸೆಪ್ಟೆಂಬರ್ 13 ರಂದು ನಡೆಯಲಿದೆ.

ಈ ಮಹಿಳಾ ಪೊಲೀಸ್ ಸೊಂಟದ ಕೆಳಗೆ ಬಟ್ಟೆ ಇರಲಿಲ್ಲ. ಅವಳ ಮುಖಕ್ಕೆ ಚಾಕುವಿನಿಂದ ಇರಿದಂತೆ ಕಾಣಿಸುತ್ತಿತ್ತು. ಈ ಘಟನೆ ಆಗಸ್ಟ್ 30 ರಂದು ನಡೆದಿದೆ. ಅಧಿಕ ರಕ್ತಸ್ರಾವದಿಂದ ಮಹಿಳಾ ಪೊಲೀಸ್ ಸ್ಥಿತಿ ಚಿಂತಾಜನಕವಾಗಿದೆ. ಸದ್ಯಕ್ಕೆ ಅವರಿಗೆ ಲಕ್ಷ್ಮಣಪುರಿ ಕೆ.ಜಿ.ಎಂ.ಯು. ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಆಕೆಯ ಮೇಲೆ ಅತ್ಯಾಚಾರ ನಡೆದಿಲ್ಲ ಎಂದು ಹೇಳಲಾಗಿದೆ.

ಸಂಪಾದಕರ ನಿಲುವು

* ಇಂತಹ ಸೂಕ್ಷ್ಮ ಮತ್ತು ತತ್ಪರತೆಯನ್ನು ಜನರು ನಿರೀಕ್ಷಿಸುತ್ತಾರೆ ಎಂದು ಯಾರಾದರೂ ಹೇಳಿದರೆ ತಪ್ಪಾಗಲಾರದು !