ನವ ದೆಹಲಿ – ತಮಿಳುನಾಡಿನ ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ರವರ ಪುತ್ರ ಮತ್ತು ರಾಜ್ಯದ ಕ್ರೀಡಾಸಚಿವ ಉದಯನಿಧಿಯವರು ಸನಾತನ ಧರ್ಮವನ್ನು ಮುಗಿಸುವ ಹೇಳಿಕೆಯನ್ನು ಮತ್ತು ಅವರ ಹೇಳಿಕೆಯನ್ನು ಬೆಂಬಲಿಸಿದ ಕಾಂಗ್ರೆಸ್ ನ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಇವರ ಪುತ್ರ ಕರ್ನಾಟಕದ ಸಚಿವ ಪ್ರಿಯಾಂಕ ಖರ್ಗೆ ವಿರುದ್ಧ ದೂರು ದಾಖಲಿಸಲಾಗಿದೆ. ವಕೀಲ ಹರ್ಷ ಗುಪ್ತಾ ಮತ್ತು ರಾಮಸಿಂಹ ಲೋಧಿಯವರು ದೂರು ದಾಖಲಿಸಿದ್ದಾರೆ. ಈ ದೂರಿನ ಅನ್ವಯ ಇಬ್ಬರ ವಿರುದ್ಧ ಉತ್ತರಪ್ರದೇಶದ ರಾಂಪುರದ ಸಿವಿಲ್ ಲಯನ್ಸ್ ಪೊಲೀಸ್ ಠಾಣೆಯಲ್ಲಿ (ಭಾ.ದಂ.ವಿ.) ಕಲಂ ೨೯೫ (ಧಾರ್ಮಿಕ ಭಾವನೆಗಳನ್ನು ಕೆರಳಿಸುವ) ಮತ್ತು ಕಲಂ ೧೫೩ ಅ (ವಿವಿಧ ಧಾರ್ಮಿಕ ಗುಂಪುಗಳ ನಡುವೆ ದ್ವೇಶವನ್ನು ಉತ್ತೇಜಿಸುವ) ನ ಅಡಿಯಲ್ಲಿ ದೂರು ದಾಖಲಿಸಲಾಗಿದೆ.
ಉತ್ತರ ಪ್ರದೇಶದಲ್ಲಿ ಖರ್ಗೆ ವಿರುದ್ಧ ಎಫ್.ಐ.ಆರ್: ನಾನು ಅದರಿಂದ ವಿಚಲಿತನಾಗಿಲ್ಲ, ನನ್ನ ಹೇಳಿಕೆಗೆ ಬದ್ಧ – ಪ್ರಿಯಾಂಕ ಖರ್ಗೆ https://t.co/AudEYIeeeN
— THG ಕನ್ನಡ (@KannadaThg) September 6, 2023
ಸಂಪಾದಕೀಯ ನಿಲುವುಇವರ ಮೇಲೆ ತಕ್ಷಣ ಕ್ರಮ ಕೈಗೊಂಡು ಉದಯನಿಧಿ ಮತ್ತು ಖರ್ಗೆಯನ್ನು ಜೈಲಿಗೆ ಹಾಕಬೇಕು ! |