ಫರೀದಾಬಾದ (ಹರಿಯಾಣಾ)ದಲ್ಲಿ ಮತಾಂಧರಿಂದ ಬಜರಂಗದಳ ಕಾರ್ಯಕರ್ತನ ಹತ್ಯೆ, ಮತ್ತೊಬ್ಬನಿಗೆ ಗಾಯ

ಆರೋಪಿ ಯಾಮಿನ್, ರಾಜಾ ಮತ್ತು ಗುಗಾ ಪರಾರಿ !

ಫರಿದಾಬಾದ (ಹರಿಯಾಣಾ) – ಬಜರಂಗದಳದ ಇಬ್ಬರು ಕಾರ್ಯಕರ್ತರ ಮೇಲೆ ನಡೆದ ಮಾರಣಾಂತಿಕ ದಾಳಿಯಲ್ಲಿ ಅಲೋಕ ಎಂಬ ಕಾರ್ಯಕರ್ತ ಸಾವನ್ನಪ್ಪಿದ್ದು, ಮತ್ತೊಬ್ಬ ಶಿವಂ ಗಂಭೀರವಾಗಿ ಗಾಯಗೊಂಡಿದ್ದು, ಅವನಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನಡೆಯುತ್ತಿದೆ. ಹತ್ಯೆಯ ಹಿಂದಿನ ಉದ್ದೇಶ ಇನ್ನೂ ಸ್ಪಷ್ಟವಾಗಿಲ್ಲ. ಪೊಲೀಸರು ಹಂತಕ ಯಾಮಿನ್, ರಾಜಾ ಮತ್ತು ಗುಗಾ ಈ ಮೂವರ ವಿರುದ್ಧ ಪ್ರಕರಣ ದಾಖಲಿಸಿದ್ದು, ಅವರ ಹುಡುಕಾಟ ನಡೆಸುತ್ತಿದ್ದಾರೆ. ಇದಕ್ಕಾಗಿ 4 ತಂಡಗಳನ್ನು ರಚಿಸಲಾಗಿದೆ. ‘ಈ ಸಂದರ್ಭದಲ್ಲಿ ತ್ವರಿತ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಲಾಗುವುದು’, ಎಂದು ಪೊಲೀಸರು ತಿಳಿಸಿದ್ದಾರೆ.

ಹರಿಯಾಣದ ಬಜರಂಗದಳದ ಪದಾಧಿಕಾರಿ ಲಲಿತ್ ಭಾಟಿಯವರು ಮಾತನಾಡಿ, ಅಲೋಕ್ ಮತ್ತು ಶಿವಂ ಲವ್ ಜಿಹಾದ್ ವಿರುದ್ಧ ಕೆಲಸ ಮಾಡುತ್ತಿದ್ದರು. ಕೆಲ ದಿನಗಳ ಹಿಂದೆ ಲವ್ ಜಿಹಾದ್ ನಿಂದ ಓರ್ವ ಹಿಂದೂ ಯುವತಿಯನ್ನು ರಕ್ಷಿಸಿದ್ದರು ಎಂದು ಹೇಳಿದರು.

ಸಂಪಾದಕೀಯ ನಿಲುವು

ಹರಿಯಾಣದಲ್ಲಿ ಭಾಜಪ ಸರಕಾರವಿರುವಾಗ ಹಿಂದೂ ಸಂಘಟನೆಗಳ ಕಾರ್ಯಕರ್ತರ ಹತ್ಯೆಗಳಾಗಬಾರದು ಎಂದು ಹಿಂದೂಗಳಿಗೆ ಅನಿಸುತ್ತದೆ !