ಪ್ರಧಾನಿ ಮೋದಿಯವರು ಅಜ್ಮೀರ್ ದರ್ಗಾದಲ್ಲಿ ಚಾದರ ಹೊದಿಸುವುದನ್ನು ನಿಷೇಧಿಸುವಂತೆ ಹಿಂದೂ ಸೇನೆಯಿಂದ ನ್ಯಾಯಾಲಯದಲ್ಲಿ ಅರ್ಜಿ

ಅಜ್ಮೀರ್ ದರ್ಗಾ ಈ ಹಿಂದೆ ದೇವಸ್ಥಾನ ಆಗಿರುವ ಕುರಿತು ಹಿಂದೂ ಸೇನೆಯಿಂದ ನ್ಯಾಯಾಲಯದಲ್ಲಿ ಅರ್ಜಿ

ನವದೆಹಲಿ – ಅಜ್ಮೀರ್ (ರಾಜಸ್ಥಾನ್) ಇಲ್ಲಿಯ ಮೊಯಿನುದ್ದಿನ್ ಚಿಶ್ತಿ ದರ್ಗಾದಲ್ಲಿ ಉರುಸ್‌ನ (ಮುಸಲ್ಮಾನರ ಧಾರ್ಮಿಕ ಮೆರವಣಿಗೆ) ಪ್ರಯುಕ್ತ ಪ್ರಧಾನಿ ಮೋದಿಯವರು ಚಾದರ ಹೊದಿಸಲಾಗುತ್ತದೆ. ಇದಕ್ಕೆ ತಾತ್ಕಾಲಿಕ ನಿಷೇಧ ಹೇರಲು ಆಗ್ರಹಿಸಿ ಹಿಂದೂ ಸೇನೆ ಅಧ್ಯಕ್ಷ ವಿಷ್ಣು ಗುಪ್ತ ಇವರು ಅಜ್ಮೀರ್ ನ ನ್ಯಾಯಾಲಯದಲ್ಲಿ ಅರ್ಜಿ ದಾಖಲಿಸಿದ್ದಾರೆ.

ಈ ಅರ್ಜೆಯಲ್ಲಿ, ಒಂದು ಪ್ರಾಚೀನ ಶಿವ ಮಂದಿರ ಕೆಡವಿ ಈ ದರ್ಗಾವನ್ನು ಕಟ್ಟಲಾಗಿದೆ. ಪ್ರಧಾನಿಯ ವತಿಯಿಂದ ದರ್ಗಾದ ಮೇಲೆ ಚಾದರ ಹೊಂದಿಸುವುದು ನ್ಯಾಯ ಪ್ರಕ್ರಿಯೆ ಮೇಲೆ ಪರಿಣಾಮ ಆಗಬಹುದು. ನ್ಯಾಯಾಲಯದಲ್ಲಿ ಮೊಕದ್ದಮೆ ಬಾಕಿ ಇರುವಾಗ ಚಾದರ ಹೊದಿಸುವುದು, ಇದು ನ್ಯಾಯಾಲಯ ಸ್ವಾತಂತ್ರ್ಯದ ಮತ್ತು ನಿಷ್ಪಕ್ಷ ಮೊಕ್ಕದಮೆ ಅಧಿಕಾರದ ಉಲ್ಲಂಘನೆ ಆಗುವುದು. ದರ್ಗಾದ ರಚನೆ ಮತ್ತು ಅಲ್ಲಿ ದೊರೆತಿರುವ ಕೆಲವು ವೈಶಿಷ್ಟ್ಯಗಳಿಂದ, ಈ ಜಾಗ ಮೂಲತಃ ಹಿಂದೂ ದೇವಸ್ಥಾನ ಇತ್ತು ಎಂಬುದು ಸಾಬೀತಾಗುತ್ತದೆ. ಮುಖ್ಯ ಪ್ರವೇಶದ್ವಾರದ ಛಾವಣಿಯ ಮತ್ತು ಛತ್ರಿಯ ರಚನೆ ಹಿಂದೂ ಶೈಲಿಯ ನಿದರ್ಶನವಾಗಿದೆ. ಭಾರತೀಯ ಪುರಾತತ್ವ ಸಮೀಕ್ಷಾ ಇಲಾಖೆಯಿಂದ ಈ ಜಾಗದ ವಿಚಾರಣೆ ನಡೆಸಿ ಅಲ್ಲಿ ಭಗವಾನ್ ಶ್ರೀ ಸಂಕಟಮೋಚನ ಮಹಾದೇವ ದೇವಸ್ಥಾನದ ಜೀರ್ಣೋದ್ಧಾರ ಮಾಡಬೇಕು. ದರ್ಗಾದ ನೆಲಮಾರ್ಗದಲ್ಲಿ ಒಂದು ಶಿವಲಿಂಗ ಇದೆ, ಅದರ ಪೂಜೆ ಮಾಡಲು ಹಿಂದುಗಳಿಗೆ ಸಂವಿಧಾನಾತ್ಮಕ ಅಧಿಕಾರ ಇದೆ. ಪ್ರಸ್ತುತ ಈ ಅಧಿಕಾರ ತಳ್ಳಿ ಹಾಕಲಾಗುತ್ತಿದೆ’, ಎಂದು ಹೇಳಿದೆ.

ಕಳೆದ ತಿಂಗಳು ಇದೇ ಪ್ರಕರಣದಲ್ಲಿ ನ್ಯಾಯಾಲಯವು ಭಾರತೀಯ ಪುರಾತತ್ವ ಸಮೀಕ್ಷೆ ಇಲಾಖೆಗೆ ನೋಟಿಸ್ ಜಾರಿಗೊಳಿಸಿತ್ತು.

ಪ್ರಧಾನಮಂತ್ರಿಗಳ ವತಿಯಿಂದ ದರ್ಗಾದಲ್ಲಿ ಚಾದರ ಹೊದಿಸಲಾಯಿತು

ಜನವರಿ ೨ ರಂದು ಪ್ರಧಾನಿ ಮೋದಿ ಇವರು ಕೇಂದ್ರ ಅಲ್ಪಸಂಖ್ಯಾತ ಕಾರ್ಯ ಸಚಿವ ಮತ್ತು ಸಂಸದೀಯ ಕಾರ್ಯಕ್ರಮ ಸಚಿವ ಕಿರೆನ್ ರಿಜಿಜೂ ಇವರಿಗೆ ಚಾದರ್ ಹಸ್ತಾಂತರಿಸಿದ್ದರು. ಅದನ್ನು ಉರೂಸ್ ಪ್ರಯುಕ್ತ ದರ್ಗಾದಲ್ಲಿ ಹೊದಿಸಲಾಗಿತ್ತು. ರಿಜಿಜೂ ಇವರು ಜನವರಿ ೪ ರಂದು ಬೆಳಿಗ್ಗೆ ಅಜ್ಮೇರ ಇಲ್ಲಿ ಹೋಗಿ ಚಾದರ್ ಹೊದಿಸಿದರು. ಇಲ್ಲಿ ಅವರು ದೇಶದಲ್ಲಿ ಶಾಂತಿ ಮತ್ತು ಸೌಹಾರ್ದತೆಗಾಗಿ ಪ್ರಾರ್ಥನೆ ಸಲ್ಲಿಸಿದರು.

ಈ ಹಿಂದೆ ಜಯಪುರ್ ವಿಮಾನ ನಿಲ್ದಾಣದಲ್ಲಿ ರಿಜಿಜೂ ಇವರು, ಪ್ರಧಾನಮಂತ್ರಿಯ ಮೋದಿ ಇವರ ವತಿಯಿಂದ ಚಾದರ್ ಅರ್ಪಿಸುವುದು; ಅಂದರೆ ಸಂಪೂರ್ಣ ದೇಶದ ವತಿಯಿಂದ ಚಾದರ ಅರ್ಪಣೆ ಮಾಡಿರುವ ಹಾಗೆ ಎಂದು ಹೇಳಿದರು. ದೇಶದಲ್ಲಿ ಒಳ್ಳೆಯ ವಾತಾವರಣ ಇರಬೇಕು. ಅಜ್ಮೀರ್ ದಲ್ಲಿನ ದರ್ಗಾಗೆ ಲಕ್ಷಾಂತರ ಜನರು ಭೇಟಿ ನೀಡುತ್ತಾರೆ. ಅವರಿಗೆ ಅಡಚಣೆ ಎದುರಿಸಬೇಕಾಗುತ್ತದೆ. ಆದ್ದರಿಂದ ‘ಗರೀಬ್ ನವಾಜ್’ ಆ್ಯಪ್ ಮತ್ತು ಜಾಲತಾಣ ಆರಂಭಿಸಲಾಗುವುದು. (ಹಿಂದುಗಳ ಜಾಗೃತ ದೇವಸ್ಥಾನಗಳ ಬಗ್ಗೆ ಸರಕಾರದಿಂದ ಈ ರೀತಿಯ ಪ್ರಯತ್ನ ಇಲ್ಲಿಯವರೆಗೆ ಏಕೆ ಮಾಡಲಾಗಿಲ್ಲ ? ದೇವಸ್ಥಾನದ ಸರಕಾರಿಕರಣ ಮಾಡಲಾಗಿರುವಾಗ ಈ ದರ್ಗಾದ ಸರಕಾರಿಕರಣ ಏಕೆ ಮಾಡಲಾಗುತ್ತಿಲ್ಲ ? ಎಂದು ಹಿಂದುಗಳ ಮನಸ್ಸಿನಲ್ಲಿ ಪ್ರಶ್ನೆಗಳು ಉದ್ಭವಿಸುತ್ತೇವೆ ! – ಸಂಪಾದಕರು)