೩ ಜನರಿಗೆ ಗಾಯ
ಢಾಕಾ (ಬಾಂಗ್ಲಾದೇಶ) – ಬಾಂಗ್ಲಾದೇಶದಲ್ಲಿನ ಹಿಂದೂ ಪತ್ರಕರ್ತ ಸೌಗತಾ ಬೋಸ್ ಇವರ ಫರಿದಪುರದ ಮಧುಖಲಿ ಗ್ರಾಮದಲ್ಲಿನ ಮನೆಯ ಮೇಲೆ ಅಪರಿಚಿತರು ಮಾರಕಾಸ್ತ್ರಗಳಿಂದ ದಾಳಿ ನಡೆಸಿದ್ದಾರೆ. ಈ ದಾಳಿಯಲ್ಲಿ ಸೌಗತಾ ಬೋಸ್ ಇವರ ತಾಯಿ ಸೌ. ಕಾಕುಲಿ ಬೋಸ್, ಅವರ ತಂದೆ ಮತ್ತು ಸ್ವಾತಂತ್ರ್ಯ ಸೈನಿಕ ಶ್ಯಾಮಲೆಂದು ಬೋಸ್ ಮತ್ತು ಇತರ ಓರ್ವರು ಗಾಯಗೊಂಡಿದ್ದಾರೆ. ಎಲ್ಲರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಸೇರಿಸಲಾಗಿದೆ. ಡಾಕ್ಟರರು ನೀಡಿರುವ ಮಾಹಿತಿಯ ಪ್ರಕಾರ ಶ್ಯಾಮಲೆಂದು ಬೋಸ್ ಇವರ ಆರೋಗ್ಯ ಚಿಂತಾಜನಕವಾಗಿದೆ. ಅವರ ತಲೆಗೆ ಪೆಟ್ಟು ಬಿದ್ದಿದ್ದರಿಂದ ಹೆಚ್ಚಿನ ಪ್ರಮಾಣದಲ್ಲಿ ರಕ್ತಸ್ರಾವವಾಗಿದೆ. ಈ ಪ್ರಕರಣದಲ್ಲಿ ದೂರು ದಾಖಿಸಲಾಗಿದ್ದು ಪೊಲೀಸರು ಅಪರಾಧಿಯನ್ನು ಹುಡುಕುತ್ತಿದ್ದಾರೆ. ಆರೋಪಿ ಒಬ್ಬನೇ ಇದ್ದನು ಅಥವಾ ಅವನ ಜೊತೆಗೆ ಇನ್ನೂ ಕೆಲವರು ಇದ್ದರು, ಹಾಗೂ ದಾಳಿಯ ಉದ್ದೇಶ ಏನಾಗಿತ್ತು, ಇದು ತಿಳಿದು ಬಂದಿಲ್ಲ. ಸೌಗತಾ ಬೋಸ್ ಇವರು ಬಂಗಾಲಿ ವೃತ್ತ ಪತ್ರಿಕೆ ‘ಅಜಕೆರ ಪತ್ರಿಕೆ’ಯಲ್ಲಿ ವಿಶೇಷ ಪ್ರತಿನಿಧಿ ಎಂದು ಕಾರ್ಯನಿರತವಾಗಿದ್ದಾರೆ.
ಸಂಪಾದಕೀಯ ನಿಲುವುಬಾಂಗ್ಲಾದೇಶದಲ್ಲಿ ಅಸುರಕ್ಷಿತ ಹಿಂದೂಗಳು ! |