ತುಮಕೂರಿನಲ್ಲಿಯ ಘಟನೆ
ತುಮಕೂರು – ಇಲ್ಲಿನ ಡಿವೈಎಸ್‌ಪಿ ಬಿ. ರಾಮಚಂದ್ರಪ್ಪ (58 ವರ್ಷ) ಇವರು 30 ವರ್ಷದ ಮಹಿಳೆಗೆ ಕಚೇರಿಯ ಶೌಚಾಲಯದಲ್ಲಿ ಲೈಂಗಿಕ ಕಿರುಕುಳ ನೀಡಿದ ಪ್ರಕರಣದಲ್ಲಿ ಬಂಧಿಸಲಾಗಿದೆ. ಅವರನ್ನು ಅಮಾನತು ಮಾಡಲಾಗಿದೆ. ಈ ಘಟನೆಯ ವಿಡಿಯೋ ಜನವರಿ 2ರಂದು ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರ ಆದ ನಂತರ ಈ ಕ್ರಮ ಕೈಗೊಳ್ಳಲಾಗಿದೆ. ಸಂತ್ರಸ್ತೆ ಮಹಿಳೆ ಘಟನೆ ನಡೆದ ದಿನ ಜಮೀನು ವಿವಾದದ ಬಗ್ಗೆ ದೂರು ನೀಡಲು ಉಪ ಅಧೀಕ್ಷಕ ರಾಮಚಂದ್ರಪ್ಪ ಅವರ ಬಳಿ ಹೋಗಿದ್ದಳು. ಆನಂತರ ರಾಮಚಂದ್ರಪ್ಪ ಮಹಿಳೆಗೆ ಸಹಾಯದ ಬದಲು ಲೈಂಗಿಕ ಸುಖದ ಬೇಡಿಕೆಯನ್ನು ಇಟ್ಟಿದ್ದನು.
ಸಂಪಾದಕೀಯ ನಿಲುವುರಕ್ಷಕ ಅಲ್ಲ ಭಕ್ಷಕ ! ಅಂತಹವರಿಗೆ ನಡುರಸ್ತೆಯಲ್ಲಿ ಗಲ್ಲು ಶಿಕ್ಷೆ ವಿಧಿಸಬೇಕು ! |