ಬಿಡೆನ್ ಸರಕಾರದ ನಿರ್ಧಾರ
ವಾಷಿಂಗ್ಟನ್ (ಅಮೇರಿಕಾ) – ಅಮೇರಿಕಾ ಅಧ್ಯಕ್ಷ ಜೋ ಬೈಡನ್ ಅವರು ಶ್ವೇತಭವನದಲ್ಲಿ 19 ಜನರಿಗೆ ಪ್ರತಿಷ್ಠಿತ ‘ಪ್ರೆಸಿಡೆನ್ಶಿಯಲ್ ಮೆಡಲ್ ಆಫ್ ಫ್ರೀಡಮ್’ ನೀಡಿ ಗೌರವಿಸಲಿದ್ದಾರೆ. ಇದು ಅಮೇರಿಕದ ಅತ್ಯುನ್ನತ ನಾಗರಿಕ ಗೌರವವಾಗಿದೆ. ಇದರಲ್ಲಿ ಭಾರತವನ್ನು ದ್ವೇಷಿಸುವ ಬಿಲಿಯನೇರ್ ಜಾರ್ಜ್ ಸೊರೊಸ್ ಕೂಡ ಸೇರಿದ್ದಾರೆ. ಇವರಲ್ಲದೆ ಅಮೇರಿಕದ ಮಾಜಿ ವಿದೇಶಾಂಗ ಸಚಿವ ಹಾಗೂ 2016ರಲ್ಲಿ ಡೊನಾಲ್ಡ್ ಟ್ರಂಪ್ ವಿರುದ್ಧ ಅಧ್ಯಕ್ಷೀಯ ಚುನಾವಣೆಯಲ್ಲಿ ನಿಂತಿದ್ದ ಹಿಲರಿ ಕ್ಲಿಂಟನ್, ವಿಶ್ವವಿಖ್ಯಾತ ಫುಟ್ಬಾಲ್ ಆಟಗಾರ ಲಿಯೋನೆಲ್ ಮೆಸ್ಸಿ ಮೊದಲಾದವರ ಹೆಸರುಗಳೂ ಸೇರಿವೆ.
‘ಸೊರೊಸ್ ಇವರು ಪ್ರಜಾಪ್ರಭುತ್ವ, ಮಾನವ ಹಕ್ಕುಗಳು ಮತ್ತು ಸಾಮಾಜಿಕ ನ್ಯಾಯವನ್ನು ಬಲಪಡಿಸುವ ಜಗತ್ತಿನಾದ್ಯಂತ ಸಂಸ್ಥೆಗಳನ್ನು ಬೆಂಬಲಿಸಿದ್ದಾರಂತೆ !’ – ಶ್ವೇತ ಭವನ
ಶ್ವೇತ ಭವನವು ಸೊರೊಸ್ ಅವರಿಗೆ ಪ್ರಶಸ್ತಿಯನ್ನು ಘೋಷಿಸುವ ಸಂದರ್ಭದಲ್ಲಿ, ಜಾರ್ಜ ಸೊರೊಸ ಇವರು ಪ್ರಜಾಪ್ರಭುತ್ವ, ಮಾನವ ಹಕ್ಕು, ಶಿಕ್ಷಣ ಮತ್ತು ಸಾಮಾಜಿಕ ನ್ಯಾಯವನ್ನು ಬಲಪಡಿಸುವ ವಿಶ್ವದಾದ್ಯಂತ ಸಂಸ್ಥೆಗಳನ್ನು ಬೆಂಬಲಿಸುವ ಮಹತ್ವದ ಕೆಲಸವನ್ನು ಮಾಡಿದ್ದಾರೆ” ಎಂದು ಹೇಳಿದೆ. ಅದಕ್ಕಾಗಿಯೇ ಅವರಿಗೆ ಈ ಪ್ರಶಸ್ತಿ ನೀಡಲಾಗುತ್ತಿದೆ ಎಂದು ಸ್ಪಷ್ಟಪಡಿಸಿತು.
ಜಾರ್ಜ್ ಸೊರೊಸ್ ಯಾರು?
ಸೊರೊಸ್ ಒಬ್ಬ ಅಮೇರಿಕನ್ ಬಿಲಿಯನೇರ್ ಮತ್ತು ಕಮ್ಯುನಿಸ್ಟ್ ಚಿಂತಕರಾಗಿದ್ದಾರೆ. ಭಾರತ ಸರಕಾರವನ್ನು ಅಸ್ಥಿರಗೊಳಿಸಲು ಪ್ರತಿಪಕ್ಷಗಳೊಂದಿಗೆ ಪಿತೂರಿ ನಡೆಸುತ್ತಿದ್ದಾರೆ ಎಂಬ ಆರೋಪ ಅನೇಕ ಬಾರಿ ಮಾಡಲಾಗಿದೆ. 94 ವರ್ಷ ವಯಸ್ಸಿನ ಸೊರೊಸ್ ಪ್ರಪಂಚದಾದ್ಯಂತದ ಅನೇಕ ದೇಶಗಳ ರಾಜಕೀಯ ಮತ್ತು ಸಮಾಜದ ಮೇಲೆ ಪ್ರಭಾವ ಬೀರುವ ನೀತಿಯನ್ನು ನಡೆಸುತ್ತಿದ್ದಾರೆ ಎಂದು ಆರೋಪಿಸಲಾಗಿದೆ. ‘ಓಪನ್ ಸೊಸೈಟಿ ಫೌಂಡೇಶನ್’ ಸಂಸ್ಥೆಯು 1999 ರಲ್ಲಿ ಮೊದಲ ಬಾರಿಗೆ ಭಾರತವನ್ನು ಪ್ರವೇಶಿಸಿತು. ಆಗಸ್ಟ್ 2023 ರಲ್ಲಿ, ಸೊರೊಸ್ ‘ಮ್ಯೂನಿಚ್ ಸೆಕ್ಯುರಿಟಿ ಕಾನ್ಫರೆನ್ಸ್’ ನೀಡಿದ ಹೇಳಿಕೆಯಲ್ಲಿ, ಭಾರತವು ಪ್ರಜಾಪ್ರಭುತ್ವ ರಾಷ್ಟ್ರವಾಗಿದೆ; ಆದರೆ ಪ್ರಧಾನಿ ಮೋದಿ ಪ್ರಜಾಪ್ರಭುತ್ವವಾದಿ ಅಲ್ಲ ಎಂದು ಹೇಳಿದ್ದರು ಹಾಗೆಯೇ ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು 370 ವಿಧಿಯನ್ನು ತೆಗೆದುಹಾಕುವ ಬಗ್ಗೆಯೂ ಸೊರೊಸ್ ಪ್ರಧಾನಿ ಮೋದಿಯನ್ನು ಗುರಿ ಮಾಡಿದ್ದರು.
‘ಪ್ರೆಸಿಡೆನ್ಷಿಯಲ್ ಮೆಡಲ ಆಫ್ ಫ್ರೀಡಂ’ ಪ್ರಶಸ್ತಿಯನ್ನು ಯಾರಿಗೆ ನೀಡಲಾಗುತ್ತದೆ ?
ಈ ಪ್ರತಿಷ್ಠಿತ ಅಮೇರಿಕನ್ ಪ್ರಶಸ್ತಿಯನ್ನು ಅಮೇರಿಕದ ಏಳಿಗೆ, ಮೌಲ್ಯಗಳು, ವಿಶ್ವ ಶಾಂತಿ ಅಥವಾ ಸಾಮಾಜಿಕ ಮತ್ತು ಸಾರ್ವಜನಿಕ ಕ್ಷೇತ್ರಕ್ಕೆ ಮಹತ್ವದ ಕೊಡುಗೆ ನೀಡಿದ ವ್ಯಕ್ತಿಗಳಿಗೆ ನೀಡಲಾಗುತ್ತದೆ. ‘ಶ್ವೇತಭವನ’ದ ಪ್ರಕಾರ, ಈ ಪ್ರಶಸ್ತಿಯನ್ನು ಯಾರು ತಮ್ಮ ದೇಶಕ್ಕಾಗಿ ಮತ್ತು ಜಗತ್ತಿಗೆ ಅಸಾಧಾರಣ ಕೊಡುಗೆಗಳನ್ನು ನೀಡಿದ್ದಾರೆಯೋ, ಅವರಿಗೆ ನೀಡಲಾಗುತ್ತದೆ. (‘ಅಮೆರಿಕಕ್ಕೆ ಅಸಾಮಾನ್ಯ ಕೊಡುಗೆ’ ಎಂದರೆ ಭವಿಷ್ಯದಲ್ಲಿ ಅಮೇರಿಕಕ್ಕೆ ಎಲ್ಲ ದೃಷ್ಟಿಯಿಂದಲೂ ಸವಾಲಾಗಬಹುದಾದ ದೇಶಗಳ ವಿರುದ್ಧ ವಿವಿಧ ರೀತಿಯಲ್ಲಿ ಪಿತೂರಿ ನಡೆಸಿ ಯಶಸ್ವಿಯಾಗುವ ನಿರಂತರ ಪ್ರಯತ್ನಿಸುವುದಾಗಿದೆ ! – ಸಂಪಾದಕರು)
ಸಂಪಾದಕೀಯ ನಿಲುವು
|