ಇಸ್ಲಾಮಬಾದ್ (ಪಾಕಿಸ್ತಾನ) – ಭಾರತದಿಂದ ಆಗುವ (ಭಯೋತ್ಪಾದಕರ) ಹತ್ಯೆಗಳು ಮತ್ತು ಅಪಹರಣ ಇದರ ಅಭಿಯಾನ ಪಾಕಿಸ್ತಾನದ ಹೊರಗೆ ಕೂಡ ಹಬ್ಬಿದೆ. ಇದರಿಂದ ಕೇವಲ ಪಾಕಿಸ್ತಾನಕ್ಕೆ ಸಮಸ್ಯೆ ಆಗುತ್ತಿದೆ ಹೀಗೆ ಇಲ್ಲ, ಬದಲಾಗಿ ಅಂತರಾಷ್ಟ್ರೀಯ ಮಟ್ಟದಲ್ಲಿ ಆತಂಕ ಹೆಚ್ಚಿಸುತ್ತಿದೆ, ಎಂದು ಪಾಕಿಸ್ತಾನದ ವಿದೇಶಾಂಗ ಸಚಿವಾಲಯದ ವಕ್ತಾರೆ ಮಮ್ತಾಜ್ ಝಹರಾ ಬಲೋಚ ಇವರು ಪತ್ರಕರ್ತರ ಸಭೆಯಲ್ಲಿ ಒಂದು ಪ್ರಶ್ನೆಗೆ ಉತ್ತರಿಸುವಾಗ ಹೇಳಿದರು. ಅಮೇರಿಕಾದಲ್ಲಿನ ಸಮಾಚಾರ ಪತ್ರಿಕೆ ‘ವಾಷಿಂಗ್ಟನ್ ಪೋಸ್ಟ್’ ಭಾರತದ ಗೂಢಚಾರ ಸಂಸ್ಥೆ ‘ರಿಸರ್ಚ್ ಅಂಡ್ ನಾಲಿಸಿಸ್ ವಿಂಗ್ (ರಾ) ಪಾಕಿಸ್ತಾನದಲ್ಲಿ ಸತತ ಹತ್ಯೆಗಳು ನಡೆಸುತ್ತಿರುವ ಆರೋಪ ಮಾಡಿತ್ತು. ಅದರ ಬಗ್ಗೆ ಕೇಳಿರುವ ಪ್ರಶ್ನೆಗೆ ಬಲೋಜ್ ಇವರು ಮೇಲಿನ ಉತ್ತರ ನೀಡಿದರು.
ವಾಷಿಂಗ್ಟನ್ ಪೋಸ್ಟ್ ನಲ್ಲಿ, ‘ಭಾರತ ೨೦೨೧ ರಿಂದ ಈ ರೀತಿ ಕೊಲ್ಲುತ್ತಿದೆ.’ ಬ್ರಿಟಿಷ್ ವಾರ್ತಾ ಪತ್ರಿಕೆ ‘ದ ಗಾರ್ಡಿಯನ್’ ಕೂಡ ಇದೇ ರೀತಿ ದಾವೆ ಮಾಡಿದೆ. ‘ಭಾರತ ವಿದೇಶದಲ್ಲಿ ವಾಸಿಸುವ ೨೦ ಭಯೋತ್ಪಾದಕರನ್ನು ಹತಗೊಳಿಸುವ ಯೋಜನೆ ರೂಪಿಸಿದೆ’, ಎಂದು ಈ ವಾರ್ತಾ ಪತ್ರಿಕೆ ದಾವೆ ಮಾಡಿತ್ತು. ಅನೇಕ ಭಯೋತ್ಪಾದಕರು ಕೂಡ ಹತರಾಗಿದ್ದಾರೆ. ಭಾರತೀಯ ಪ್ರಧಾನಮಂತ್ರಿ ಮೋದಿ ಇವರಿಗೆ ಈ ಯೋಜನೆಯ ಮಾಹಿತಿ ಇತ್ತು’, ಎಂದೂ ಕೂಡ ಇದರಲ್ಲಿ ದಾವೆ ಮಾಡಲಾಗಿತ್ತು. ಭಾರತವು ಈ ದಾವೆ ತಳ್ಳಿ ಹಾಕಿತ್ತು.
ಗ್ವಾದರ್ ಬಂದರ್ ವಿದೇಶಿ ಸೈನ್ಯ ನೆಲೆಗಾಗಿ ನೀಡಲಾಗದು !
ಬಲೊಚ್ ಇವರು ಇನ್ನೊಂದು ಪ್ರಶ್ನೆಗೆ ಉತ್ತರಿಸುವಾಗ ಪಾಕಿಸ್ತಾನದ ಗ್ವಾದರ ಬಂದರ ನಿಲುವಿನ ಬಗ್ಗೆ ಸ್ಪಷ್ಟಪಡಿಸಿದರು. ಅವರು ಗ್ವಾದರ ಬಂದರ ಕೇವಲ ಪಾಕಿಸ್ತಾನದ ವಿಕಾಸಕ್ಕಾಗಿ ಚೀನಾದ ಬೆಂಬಲದಿಂದ ಅಭಿವೃದ್ಧಿಗೊಳಿಸಿದೆ ಮತ್ತು ವಿದೇಶಿ ಸೈನ್ಯದ ನೆಲೆಗಾಗಿ ಇದನ್ನು ನೀಡುವ ಯಾವುದೇ ಉದ್ದೇಶವಿಲ್ಲ, ಎಂದು ದಾವೆ ಮಾಡಿದ್ದಾರೆ. (ಈ ಬಗ್ಗೆ ಯಾರು ವಿಶ್ವಾಸ ಇಡುವರು ? – ಸಂಪಾದಕರು)
ಸಂಪಾದಕೀಯ ನಿಲುವು
|