|
ಬಸ್ತರ (ಛತ್ತಿಸ್ಗಡ್) – ಇಲ್ಲಿಯ ಪ್ರಸಿದ್ಧ ಪತ್ರಕರ್ತ ಮುಕೇಶ್ ಚಂದ್ರಾಕರ (ವಯಸ್ಸು೩೩ ವರ್ಷ) ಜನವರಿ ೧ ರಂದು ನಾಪತ್ತೆ ಆಗಿದ್ದರು. ಅದರ ನಂತರ ಜನವರಿ ೩ ರಂದು ಅವರ ಶವ ನಾಲೆಯಲ್ಲಿ ಕಂಡುಬಂದಿತು. ಚಂದ್ರಕಾರ ಇವರು ಯಾವ ರಸ್ತೆಯ ಕಾಮಗಾರಿಯಲ್ಲಿ ಭ್ರಷ್ಟಾಚಾರ ನಡೆದಿರುವುದು ಬಹಿರಂಗಪಡಿಸಿದ್ದರೋ ಅದೇ ರಸ್ತೆಯ ಕಾಮಗಾರಿಯ ನಾಲೆಯಲ್ಲಿ ಅವರ ಮೃತ ದೇಹ ಕಂಡು ಬಂದಿದೆ. ಪೊಲೀಸರು ಈ ಪ್ರಕರಣದಲ್ಲಿ ದಿನೇಶ್, ರಿತೇಶ ಚಂದ್ರಾಕರ ಮತ್ತು ಮಹೇಂದ್ರ ರಾಮಟೇಕೆ ಈ ೩ ಆರೋಪಿಗಳನ್ನು ಬಂಧಿಸಿದ್ದಾರೆ. ಇದರಲ್ಲಿ ಇಬ್ಬರು ಚಂದ್ರಕಾರ ಇವರ ಸೋದರ ಸಂಬಂಧಿಗಳಾಗಿದ್ದಾರೆ. ಪೊಲೀಸರು ಇನ್ನೊಬ್ಬ ಸಂಬಂಧಿ ಸುರೇಶ ಚಂದ್ರವಂಶಿ ಇವನನ್ನು ಕೂಡ ಆರೋಪಿಯನ್ನಾಗಿ ಹೇಳಿದ್ದಾರೆ; ಆದರೆ ಅವನು ಪರಾರಿಯಾಗಿದ್ದಾನೆ. ಇನ್ನೊಂದು ಕಡೆ ಸರಕಾರವು ಕ್ರಮ ಕೈಗೊಳ್ಳುತ್ತಾ ಆರೋಪಿಯ ಅಕ್ರಮ ಕಾಮಗಾರಿ ಧ್ವಂಸಗೊಳಿಸಿದೆ.
೧. ಛತ್ತೀಸ್‌ಗಡ ಮುಖ್ಯಮಂತ್ರಿ ವಿಷ್ಣುದೇವ ಸಾಯ ಇವರು ‘ಎಕ್ಸ್’ ನಲ್ಲಿ ಪೋಸ್ಟ್ ಮಾಡಿ ಮುಕೇಶ್ ಇವರ ಹತ್ಯೆಯ ಬಗ್ಗೆ ಸಂತಾಪ ಸೂಚಿಸಿದ್ದಾರೆ.
೨. ಅವರು, ‘ಈ ಪ್ರಕರಣದಲ್ಲಿ ಆರೋಪಿಗಳನ್ನು ಬಿಡುವುದಿಲ್ಲ. ಆರೋಪಿಗಳನ್ನು ತಕ್ಷಣ ಬಂಧಿಸಿ ಅವರಿಗೆ ಕಠಿಣ ಶಿಕ್ಷೆ ನೀಡಲು ಪ್ರಯತ್ನ ಮಾಡುವೆವು ಎಂದು ನಾನು ಆದೇಶ ನೀಡಿದ್ದೇನೆ’, ಎಂದು ಹೇಳಿದರು.
೩. ಮುಕೇಶ್ ಚಂದ್ರಕಾರ ಇವರು ಅನೇಕ ವಾರ್ತಾ ವಾಹಿನಿಯಲ್ಲಿ ಕೆಲಸ ಮಾಡಿದ್ದರು. ಹಾಗೂ ಬಸ್ತರ ಜಂಕ್ಷನ್ ಎಂಬ ಅವರ ಸ್ವಂತದ ಯೂಟ್ಯೂಬ್ ಚಾನೆಲ್ ಕೂಡ ಇತ್ತು.
೪. ಬಸ್ತರ್ ದಂತಹ ನಕ್ಸಲವಾದಿ ಪ್ರದೇಶದಲ್ಲಿ ಅವರು ಇಲ್ಲಿಯವರೆಗೆ ಹೆದರದೆ ಪತ್ರಿಕೋದ್ಯಮದ ಕಾರ್ಯ ಮಾಡಿದ್ದರು. ಏಪ್ರಿಲ್ ೨೦೧೧ ರಲ್ಲಿ ನಕ್ಸಲವಾದಿಗಳಿಂದ ಕೋಬ್ರಾ ಕಮಾಂಡೋನ ಅಪಹರಣ ಮಾಡಿದಾಗ ಅವರನ್ನು ಬಿಡಿಸುವಲ್ಲಿ ಮುಕೇಶ ಚಂದ್ರಕಾರ ಇವರು ಮಹತ್ವದ ಪಾತ್ರ ವಹಿಸಿದ್ದರು.