ಮಕ್ಕಳ ಅಶ್ಲೀಲ ಚಿತ್ರಗಳನ್ನು ಪ್ರಸಾರ ಮಾಡಿದಕ್ಕೆ ಟ್ವಿಟರ್ ವಿರುದ್ಧ ಅಪರಾಧ ದಾಖಲು !

ಪ್ರತಿದಿನ ಹೊರಬರುತ್ತಿರುವ ಟ್ವಿಟರ್ ನ ಅಪರಾಧಗಳನ್ನು ನೋಡಿದರೆ ಈಗ ಅದರ ಮೇಲೆ ನಿರ್ಬಂಧ ಹೇರುವುದೇ ಯೋಗ್ಯ !

ನವದೆಹಲಿ – ದೇಶದಾದ್ಯಂತ ಟ್ವಿಟರ್ ವಿರುದ್ಧ ಒಟ್ಟು ೪ ಅಪರಾಧಗಳನ್ನು ನೊಂದಾಯಿಸಲಾಗಿದೆ. ಅದರಲ್ಲಿ ತಪ್ಪಾದ ಭೂಪಟ ತೋರಿಸಿದ ಪ್ರಕರಣದಲ್ಲಿ ಉತ್ತರಪ್ರದೇಶ ಹಾಗೂ ಮಧ್ಯಪ್ರದೇಶದಲ್ಲಿ, ಸಾಮಾಜಿಕ ಸೌಹಾರ್ದ ಕೆಡಿಸುವ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶದಲ್ಲಿ ಹಾಗೂ ಸಣ್ಣ ಮಕ್ಕಳ ಸಂಬಂಧಿಸಿದಂತೆ ಅಶ್ಲೀಲ ಚಿತ್ರಗಳನ್ನು ಪ್ರಸಾರ ಮಾಡಿರುವ ಪ್ರಕರಣದಲ್ಲಿ ದೆಹಲಿಯ ಪೊಲೀಸರ ಸೈಬರ್ ಶಾಖೆಯಲ್ಲಿ ಅಪರಾಧ ದಾಖಲಾಗಿದೆ. ರಾಷ್ಟ್ರೀಯ ಮಕ್ಕಳ ಹಕ್ಕುಗಳ ಆಯೋಗದ ದೂರಿನ ಮೇರೆಗೆ ಸೈಬರ್ ಶಾಖೆಯು ಅಪರಾಧವನ್ನು ದಾಖಲಿಸಿದೆ. ಟ್ವಿಟರ್ ನಲ್ಲಿ ಸಣ್ಣ ಮಕ್ಕಳಿಗೆ ಸಂಬಂಧಿಸಿದ ಅಶ್ಲೀಲ ಚಿತ್ರಗಳ ನಿರಂತರ ಪ್ರಸಾರ ಮಾಡಲಾಗುತ್ತಿದೆ, ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ. ಇನ್ನೊಂದು ಕಡೆ ಮಾಹಿತಿ ಹಾಗೂ ತಂತ್ರಜ್ಞಾನ ಸಚಿವಾಲಯದ ಸಂಸದೀಯ ಸಮಿತಿಯು ಟ್ವಿಟರ್ ಗೆ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ೨ ದಿನದಲ್ಲಿ ಸ್ಪಷ್ಟೀಕರಣ ನೀಡುವಂತೆ ಆದೇಶ ನೀಡಿದೆ.